HomeRecipiesಇಲ್ಲಿದೆ ಆರೋಗ್ಯಕರ ಬಾದಾಮಿ ಕಟ್ಲೆಟ್ ಮಾಡುವ ವಿಧಾನ

ಇಲ್ಲಿದೆ ಆರೋಗ್ಯಕರ ಬಾದಾಮಿ ಕಟ್ಲೆಟ್ ಮಾಡುವ ವಿಧಾನ

make almond cutlet recipe for father dlnk– News18 Hindi

ಬಾದಾಮಿ ನೆನೆಸಿ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದು. ಬಾದಾಮಿ ಬರ್ಫಿ, ಖೀರ್ ಎಲ್ಲದರ ರುಚಿ ನೋಡಿರ್ತಿರಿ. ಇಂದು ಬಾದಾಮಿ ಕಟ್ಲೆಟ್ ಮಾಡೋದು ಹೇಗೆ ಅಂತಾ ಹೇಳ್ತೆವೆ ಕೇಳಿ.

ಬಾದಾಮಿ ಕಟ್ಲೆಟ್ ಮಾಡಲು ಬೇಕಾಗುವ ಪದಾರ್ಥ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾದಾಮಿ ಪುಡಿ – 25 ಗ್ರಾಂ

ಒಣದ್ರಾಕ್ಷಿ – 25 ಗ್ರಾಂ

ಎರಡು ಬೇಯಿಸಿದ ಆಲೂಗಡ್ಡೆ

2 ಚಮಚ ಹಿಸುಕಿದ ಪನೀರ್

ಬ್ರೆಡ್ ಕ್ರಂಬ್ಸ್ – 2 ಚಮಚ

ಚಾಟ್ ಮಸಾಲ ಒಂದು ಚಮಚ

ರುಚಿಗೆ ತಕ್ಕಷ್ಟು ಉಪ್ಪು

1 ಚಮಚ ಹಸಿ ಮೆಣಸಿನಕಾಯಿ

ಕಾರ್ನ್‌ಫ್ಲೋರ್ – ಮೂರು ಚಮಚ

ಗಸಗಸೆ ಒಂದು ಚಮಚ

ಅಗತ್ಯಕ್ಕೆ ಬೇಕಾಗುವಷ್ಟು ಎಣ್ಣೆ

ಬಾದಾಮಿ ಕಟ್ಲೆಟ್ ತಯಾರಿಸುವ  ವಿಧಾನ

ದ್ರಾಕ್ಷಿ ಹಾಗೂ ಬಾದಾಮಿಯನ್ನು ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಬಾದಾಮಿ ಸಿಪ್ಪೆ ತೆಗೆಯಿರಿ. ಇದಕ್ಕೆ ಚಾಟ್ ಮಸಾಲಾ ಹಾಕಿ. ಈ ಮಿಶ್ರಣಕ್ಕೆ ನಂತರ ಬೇಯಿಸಿದ ಆಲೂಗಡ್ಡೆ, ಪನೀರ್, ಬ್ರೆಡ್ ಕ್ರಂಬ್ಸ್, ಉಪ್ಪು ಹಾಕಿ.

ನಂತರ ಈ ಮಿಶ್ರಣವನ್ನು ಸಣ್ಣ ಸಣ್ಣ  ಉಂಡೆಗಳಾಗಿ ಮಾಡಿ. ಅದರೊಳಗೆ ದ್ರಾಕ್ಷಿ ಹಾಕಿ. ಕಾರ್ನ್‌ಫ್ಲೋರ್ ನೀರಿನಲ್ಲಿ ಕಲಸಿ. ತಯಾರಾದ ಕಟ್ಲೆಟ್‌ಗಳನ್ನು ಕಾರ್ನ್‌ಫ್ಲೋರ್ ದ್ರಾವಣದಲ್ಲಿ ಅದ್ದಿ. ನಂತರ ಅದರ ಮೇಲೆ ಗಸಗಸೆ ಹಾಕಿ. ಬಾಣಲೆಯಲ್ಲಿ ಎಣ್ಣೆ  ಬಿಸಿ ಮಾಡಿ ಅದರಲ್ಲಿ ಕಟ್ಲೆಟ್‌ಗಳನ್ನು ಹಾಕಿ ಹುರಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular