HomeRecipiesಮನೆಯಲ್ಲೇ ತಯಾರಿಸಿ ಸವಿಯಾದ ಬಾಳೆಹಣ್ಣಿನ ಹಲ್ವಾ

ಮನೆಯಲ್ಲೇ ತಯಾರಿಸಿ ಸವಿಯಾದ ಬಾಳೆಹಣ್ಣಿನ ಹಲ್ವಾ

ಬೇಕಾಗುವ ಸಾಮಾಗ್ರಿಗಳು: ಏಲಕ್ಕಿ ಬಾಳೆಹಣ್ಣು/ಯಾವುದೇ ಬಾಳೆಹಣ್ಣು- 20, ಸಕ್ಕರೆ-3ಕಪ್, ತುಪ್ಪ, ಗೋಡಂಬಿ, 3 ಏಲಕ್ಕಿ.

ಮಾಡುವ ವಿಧಾನ: ಬಾಳೆಹಣ್ಣಿನ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಬೇಕು. ಬಳಿಕ ಬಾಣಲೆಯಲ್ಲಿ 3 ಟೀಸ್ಪೂನ್ ತುಪ್ಪ ಹಾಕಿ ರುಬ್ಬಿರುವ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಮಧ್ಯಮ ಉರಿಯಲ್ಲಿಟ್ಟೇ ಬೇಯಿಸಬೇಕು. 15 ನಿಮಿಷ ಬಾಳೆಹಣ್ಣಿನ ಬಣ್ಣ ಬದಲಾಗುತ್ತದೆ. ಈ ವೇಳೆಗೆ ಇದಕ್ಕೆ 3 ಕಪ್ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಲ್ವಾ ಗಟ್ಟಿಯಾಗುತ್ತಾ ಬರುವಾಗ ಸ್ವಲ್ಪ ತುಪ್ಪ ಸೇರಿಸಬೇಕು. ಬಳಿಕ ಹುರಿದಿಟ್ಟ ಗೋಡಂಬಿ, ಏಲಕ್ಕಿ ಹುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಹಲ್ವಾ ತಯಾರಾಗುವವರೆಗೂ ತಿರುಗಿಸುತ್ತಿರಬೇಕು. ಗಟ್ಟಿಯಾದಾಗ ಒಂದು ತಟ್ಟೆಗೆ ತುಪ್ಪ ಸವರಬೇಕು. ಮಾಡಿದಂತಹ ಹಲ್ವಾವನ್ನು ತಟ್ಟೆಗೆ ಹಾಕಬೇಕು. ತಣಿದ ಬಳಿಕ ನಿಮಗೆ ಬೇಕಾದಂತಹ ಆಕಾರದಲ್ಲಿ ಕಟ್ ಮಾಡಿಕೊಂಡರೆ ತಿನ್ನಲು ಬಾಳೆಹಣ್ಣಿನ ಹಲ್ವಾ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular