HomeRecipiesತುಂಬಾ ರುಚಿಕರ ‘ಅಕ್ಕಿ ಉಂಡೆ ಪಾಯಸ’

ತುಂಬಾ ರುಚಿಕರ ‘ಅಕ್ಕಿ ಉಂಡೆ ಪಾಯಸ’

ಪಾಯಸ ಎಂದರೆ ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಅಕ್ಕಿ ಹಿಟ್ಟನ್ನು ಬಳಸಿಕೊಂಡು ಮಾಡುವ ರುಚಿಯಾದ ಒಂದು ಪಾಯಸ ಇದೆ ಮನೆಯಲ್ಲಿ ಮಾಡಿ.

ಮೊದಲಿಗೆ ಒಂದು ಪಾತ್ರೆಗೆ ಅಕ್ಕಿ ಹಿಟ್ಟು, ಚಿಟಿಕೆ ಉಪ್ಪು, ಚಿಟಿಕೆ ತುಪ್ಪ, ¼ ಟೀ ಸ್ಪೂನ್ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಸ್ವಲ್ಪ ಸ್ವಲ್ಪವೇ ಬಿಸಿ ನೀರು ಹಾಕಿ ನಾದಿಕೊಳ್ಳಿ. ಈ ಮಿಶ್ರಣ ಉಂಡೆ ಕಟ್ಟುವ ಹದಕ್ಕೆ ಬರಲಿ. ನಂತರ 10 ನಿಮಿಷ ಮುಚ್ಚಿ ಇಟ್ಟು ನಂತರ ಚಿಕ್ಕ ಚಿಕ್ಕ ಉಂಡೆ ಕಟ್ಟಿ. ನಂತರ ಒಂದು ಪ್ಯಾನ್ ಗೆ 1 ಲೀಟರ್ ಹಾಲು ಹಾಕಿ ಚೆನ್ನಾಗಿ ಕುದಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಇದಕ್ಕೆ ಉಂಡೆ ಹಾಕಿ ಬೇಯಿಸಿಕೊಳ್ಳಿ. ತದನಂತರ 3 ಟೇಬಲ್ ಸ್ಪೂನ್ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 1 ಕಪ್ ತೆಂಗಿನಕಾಯಿ ಹಾಲು ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಬೇಯಿಸಿಕೊಂಡು ಏಲಕ್ಕಿ ಪುಡಿ ಚಿಟಿಕೆ ಹಾಕಿ ಗ್ಯಾಸ್ ಆಪ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular