HomeLatest Newsಇಲ್ಲಿವೆ ವಿನೆಗರ್‌ನಿಂದಾಗುವ ಹತ್ತು ಹಲವು ಪ್ರಯೋಜನಗಳು

ಇಲ್ಲಿವೆ ವಿನೆಗರ್‌ನಿಂದಾಗುವ ಹತ್ತು ಹಲವು ಪ್ರಯೋಜನಗಳು

ಆಹಾರ ತಯಾರಿಕೆಯಲ್ಲಿ ಬಳಸುವ ವಿನೆಗರ್‌ನಿಂದ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಮನೆ ಕ್ಲೀನ್ ಕೂಡ ಮಾಡಬಹುದು. ಇದನ್ನು ಬಳಸಿದರೆ ಮನೆ ಹೊಳೆಯುತ್ತದೆ. ಹಾಗೇ ಸೌಂದರ್ಯವೂ ವೃದ್ಧಿಸುತ್ತದೆ. ಇಲ್ಲಿವೆ ಕೆಲವೊಂದು ವಿನೆಗರ್‌ನ ಪ್ರಯೋಜನಗಳು.

ಕಠಿಣ ಕಲೆ ನಿವಾರಣೆ

ಒಂದು ವೇಳೆ ಬಟ್ಟೆಯಲ್ಲಿ ಬೆವರಿನ ಕಲೆ ಇದ್ದರೆ, ಅದನ್ನು ವಾಷ್ ಮಾಡುವ ಮುನ್ನ ಕಲೆ ಇರುವ ಜಾಗದ ಮೇಲೆ ಸ್ವಲ್ಪ ವಿನೆಗರ್ ಸಿಂಪಡಿಸಿ. ನಂತರ ವಾಷ್ ಮಾಡಿ. ಇದರಿಂದ ಕಠಿಣ ಕಲೆಗಳೂ ತೊಲಗುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೂವು ಫ್ರೆಶ್ ಆಗಿರಲು

ಮನೆಯಲ್ಲಿನ ಹೂದಾನಿಯಲ್ಲಿರುವ ಹೂವು ಫ್ರೆಶ್ ಆಗಿರಲು ಹೂದಾನಿಯನ್ನು ಸ್ವಚ್ಛ ಮಾಡಲು ಬಳಸುವ ನೀರಿಗೆ ಒಂದು ಚಮಚ ವೈಟ್ ವಿನೆಗರ್ ಹಾಕಿ.

ಮೊಟ್ಟೆ ಒಡೆಯುವುದನ್ನು ತಡೆಯಲು

ಒಂದು ವೇಳೆ ಮೊಟ್ಟೆ ಬೇಯಿಸುವಾಗ ಅದಕ್ಕೆ ಒಂದು ಚಮಚ ವಿನೆಗರ್ ಹಾಕಿದರೆ ಮೊಟ್ಟೆ ಒಡೆಯುವುದಿಲ್ಲ.

ಇರುವೆ ಓಡಿಸಲು

ಮನೆಯಲ್ಲಿ ಇರುವೆಗಳ ಕಾಟ ಹೆಚ್ಚಾದರೆ, ಅವನ್ನು ಓಡಿಸಲು ಕೋಣೆಯ ಮೂಲೆ ಮೂಲೆಯಲ್ಲಿ ವಿನೆಗರ್ ಹಾಕಿ.

ಕೂದಲು ಹೊಳೆಯಲು

ಒಂದು ಮಗ್ ನೀರಿಗೆ ಅರ್ಧ ಚಮಚ ವಿನೆಗರ್ ಹಾಕಿ ಕೂದಲಿಗೆ ಹಾಕಿ. ಇದು ಕೂದಲು ಹೊಳೆಯುವಂತೆ ಮಾಡುವುದಲ್ಲದೇ, ಕೂದಲು ಘಮ ಘಮಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular