HomeLatest News‘ಕುಕ್ಕಿಸ್ʼ ಮಾಡಿದ ಪಾನ್ ಸುಲಭವಾಗಿ ತೊಳೆಯಲು ಇಲ್ಲಿದೆ ನೋಡಿ ಸೂಪರ್ ಟಿಪ್ಸ್

‘ಕುಕ್ಕಿಸ್ʼ ಮಾಡಿದ ಪಾನ್ ಸುಲಭವಾಗಿ ತೊಳೆಯಲು ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಮಕ್ಕಳಿಗೆ ಕುಕ್ಕಿಸ್ ಎಂದರೆ ತುಂಬಾ ಇಷ್ಟ ಎಂದು ಮನೆಯಲ್ಲಿ ಮಾಡಿಕೊಡುತ್ತಿದ್ದೀರಾ…? ಕುಕ್ಕಿಸ್ ಎಲ್ಲಾ ಮಾಡಿದ ಮೇಲೆ ಇದರ ಪ್ಯಾನ್ ಅನ್ನು ತೊಳೆಯುವುದೇ ದೊಡ್ಡ ತಲೆನೋವು! ಸುಲಭವಾಗಿ ಈ ಪ್ಯಾನ್ ತೊಳೆಯಲು ಇಲ್ಲಿದೆ ನೋಡಿ ಟಿಪ್ಸ್.

ಮೊದಲು ಒಂದು ಅಗಲವಾದ ಬಕೆಟ್ ಗೆ ಬಿಸಿ ನೀರು ಹಾಕಿ. ಅದಕ್ಕೆ 2 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ, 2 ಟೇಬಲ್ ಸ್ಪೂನ್ ವಿನೆಗರ್ ಹಾಕಿ ಮಿಕ್ಸ್ ಮಾಡಿ. ನಂತರ ಈ ಕುಕ್ಕಿಸ್ ಪ್ಯಾನ್ ಅನ್ನು 30 ನಿಮಿಷಗಳ ಕಾಲ ನೆನೆಸಿಡಿ. ನಂತರ ಸ್ಕ್ರಬರ್ ತೆಗೆದುಕೊಂಡು ಉಜ್ಜಿದರೆ ಅಂಟಿಕೊಂಡ ಕಲೆಯೆಲ್ಲಾ ನಿವಾರಣೆಯಾಗುತ್ತದೆ.

ಹಾಗೇ ಸ್ವಲ್ಪ ಹೈಡ್ರೋಜನ್ ಪೆರಾಕ್ಸೈಡ್ ಹಾಗೇ ಸ್ವಲ್ಪ ಬೇಕಿಂಗ್ ಸೋಡಾ ತೆಗೆದುಕೊಂಡು ಪೇಸ್ಟ್ ಮಾಡಿ. ಇದನ್ನು ಕುಕ್ಕಿಸ್ ಪ್ಯಾನ್ ಗೆ ಹಚ್ಚಿ 3 ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಸ್ಪಾಂಜ್ ನಿಂದ ತಿಕ್ಕಿ ತೊಳೆದರೆ ಕಲೆಯೆಲ್ಲಾ ಬೇಗನೆ ಹೋಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular