HomeBeautyಉಗುರಿನ ಬಣ್ಣ ಕಾಪಾಡಿಕೊಳ್ಳಲು ಇಲ್ಲಿದೆ 'ಟಿಪ್ಸ್'

ಉಗುರಿನ ಬಣ್ಣ ಕಾಪಾಡಿಕೊಳ್ಳಲು ಇಲ್ಲಿದೆ ‘ಟಿಪ್ಸ್’

ಪಾರ್ಲರ್‌ ಗೆ ಹೋಗದೆ ಹೆಚ್ಚು ಹಣ ಖರ್ಚು ಮಾಡದೇ ಮನೆಯಲ್ಲೇ ಉಗುರುಗಳನ್ನು ಅಂದಗಾಣಿಸುವುದು ಹೇಗೆ?

ಬೀಟ್ ರೂಟ್ ಮತ್ತಿತರ ಕೈಗೆ ಬಣ್ಣ ಅಂಟಿಕೊಳ್ಳುವ ತರಕಾರಿಗಳನ್ನು ಹೆಚ್ಚುವಾಗ ಗ್ಲೌಸ್ ಹಾಕಿಕೊಳ್ಳಿ. ಇಲ್ಲವಾದರೆ ಉಗುರಿನ ಸಂದಿಯಲ್ಲಿ ಬಣ್ಣ ಅಂಟಿಕೊಳ್ಳುತ್ತದೆ.

ಕೆಲಸ ಮುಗಿದ ನಂತರ ಕೈತೊಳೆಯುವಾಗ ಅತಿಯಾದ ತಣ್ಣನೆಯ ಅಥವಾ ಅತಿಯಾದ ಬಿಸಿ ನೀರನ್ನು ಬಳಕೆ ಮಾಡಬೇಡಿ. ಬೆಚ್ಚಗಿನ ನೀರಿನಿಂದ ತೊಳೆದು, ಹ್ಯಾಂಡ್ ಕ್ರೀಮ್ ಹಚ್ಚಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಗುರು ಬಣ್ಣದ ನೈಲ್ ಪಾಲಿಶ್ ಹಚ್ಚುವುದರಿಂದ ಉಗುರುಗಳು ಹಾಳಾಗುವುದಿಲ್ಲ. ಬದಲಾಗಿ ಉಗುರಿನ ಅಂದ ಮತ್ತಷ್ಟು ಹೆಚ್ಚುತ್ತದೆ. ಉಗುರು ಬಣ್ಣ ಖರೀದಿ ವೇಳೆ ಉತ್ತಮ ಬ್ರ್ಯಾಂಡ್ ಅನ್ನೇ ಆಯ್ಕೆ ಮಾಡಿ.

ಉಗುರಿಗೆ ಬಣ್ಣ ಹಚ್ಚುವ ವೇಳೆ ಮೊದಲಿಗೆ ಬೇಸ್ ಕೋಟ್ ಹಾಕಿ. ಇದು ಉಗುರುಗಳು ಡ್ಯಾಮೇಜ್ ಆಗಿದ್ದರೆ, ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದನ್ನು ನಿವಾರಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular