HomeHealthನೀವು ಸರಿಯಾಗಿ ಹಲ್ಲುಜ್ಜುತ್ತಿದ್ದೀರಾ.....? ತಿಳಿಯಲು ಇದನ್ನೊಮ್ಮೆ ಓದಿ

ನೀವು ಸರಿಯಾಗಿ ಹಲ್ಲುಜ್ಜುತ್ತಿದ್ದೀರಾ…..? ತಿಳಿಯಲು ಇದನ್ನೊಮ್ಮೆ ಓದಿ

ಬಾಯಿಯ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಹಾಗಿದ್ದರೆ ಸರಿಯಾಗಿ ಹಲ್ಲುಜ್ಜುವುದು ಹೇಗೆ?

ಹಲ್ಲುಜ್ಜುವ ಮೊದಲು ಬ್ರಷ್ ಅನ್ನು ಸರಿಯಾಗಿ ತೊಳೆಯಿರಿ. ರಾತ್ರಿಯ ವೇಳೆ ಬ್ರಶ್ ಅನ್ನು ಹಲ್ಲಿ ಇಲ್ಲವೇ ಕೀಟಗಳು ಮುಟ್ಟಿ ಹೋಗಿರಬಹುದು.

ಪೇಸ್ಟ್ ನ ಪ್ರಮಾಣ ಹೆಚ್ಚು ಬೇಕಿಲ್ಲ. ಬ್ರಷ್ ನ ಆ ತುದಿಯಿಂದ ಈ ತುದಿ ತನಕ ತುಂಬುವಷ್ಟು ಪೇಸ್ಟ್ ಹಚ್ಚ ಬೇಕಿಲ್ಲ. ಬ್ರಷ್ ನಲ್ಲಿ ಕಾಲು ಭಾಗಕ್ಕೆ ತುಂಬುವಷ್ಟು ಪೇಸ್ಟ್ ಹಾಕಿಕೊಂಡರೆ ಸಾಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ರಷ್ ನಿಮ್ಮ ಹಲ್ಲನ್ನು ಸ್ವಚ್ಛಗೊಳಿಸುತ್ತದೆ, ಪೇಸ್ಟ್ ಅಲ್ಲ. ಹಾಗಾಗಿ ನಿಮ್ಮ ಕೈಯ ನೆರವಿನಿಂದ ನೀವು ಹೇಗೆ ಬ್ರಷ್ ಮಾಡುತ್ತೀರಿ ಎಂಬುದು ಮುಖ್ಯ. ಪೇಸ್ಟ್ ಬಾಯಿಗೆ ಪ್ರೆಶ್ ನೆಸ್ ಕೊಡುತ್ತದೆ ಅಷ್ಟೇ.

ಕೆಳಗಿನ ಭಾಗದಿಂದ ಒಂದೊಂದು ಹಲ್ಲಿಗೆ ಬ್ರಷ್ ಮಾಡುತ್ತಾ ಬನ್ನಿ. ಬಳಿಕ ಮೇಲ್ಭಾಗಕ್ಕೆ ಬ್ರಷ್ ಮಾಡಿ. ಬ್ರಷ್ ಅನ್ನು ನೇರವಾಗಿ ಹಿಡಿದುಕೊಳ್ಳಿ. ಹಲ್ಲುಜ್ಜಿದ ಬಳಿಕ ನಾಲಗೆಯನ್ನು ಸ್ವಚ್ಛಗೊಳಿಸಲು ಮರೆಯದಿರಿ. ಇದಕ್ಕಾಗಿ ಟಂಗ್ ಕ್ಲೀನರ್ ಬಳಸುವುದು ಒಳ್ಳೆಯದು. ಕೊನೆಗೆ ಕೈ ಬೆರಳಿನ ಸಹಾಯದಿಂದ ವಸಡನ್ನು ತಿಕ್ಕಿ ಸ್ವಚ್ಛಗೊಳಿಸಿ.

For Latest News Updates, Join Our Whatsapp Community🚩
RELATED ARTICLES

Most Popular