HomeBeautyತಲೆ ಹೊಟ್ಟಿನ ನಿವಾರಣೆಗೆ ಇಲ್ಲಿವೆ ಸರಳ 'ಉಪಾಯ'ಗಳು

ತಲೆ ಹೊಟ್ಟಿನ ನಿವಾರಣೆಗೆ ಇಲ್ಲಿವೆ ಸರಳ ‘ಉಪಾಯ’ಗಳು

ತಲೆ ಹೊಟ್ಟನ್ನು ನಿವಾರಿಸಲು ಜನರು ಮಾಡುವ ಸರ್ಕಸ್ ಒಂದೆರಡಲ್ಲ. ಎಲ್ಲಾ ತರಹದ ರಾಸಾಯನಿಕ ವಸ್ತುಗಳನ್ನು ಬಳಸಿ ಇನ್ನಷ್ಟು ತೊಂದರೆಗೊಳಗಾಗುತ್ತಾರೆ. ಅದನ್ನು ಬಿಟ್ಟು ಸುಲಭವಾಗಿ ಮನೆಯಲ್ಲಿಯೇ ನೈಸರ್ಗಿಕವಾಗಿ ತಲೆ ಹೊಟ್ಟನ್ನು ನಿವಾರಿಸಿಕೊಳ್ಳಬಹುದು.

* ಸಾಮಾನ್ಯವಾಗಿ ಕೂದಲಿನ ಬುಡ ಒಣಗಿದಾಗ ತಲೆ ಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಗ ಕೂದಲಿಗೆ ಚೆನ್ನಾಗಿ ಎಣ್ಣೆ ಮಸಾಜ್ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ವಾರಕ್ಕೊಮ್ಮೆ ಮೊಟ್ಟೆಯ ಹಳದಿ ಭಾಗವನ್ನು ತಲೆಗೆ ಹಚ್ಚಿಕೊಂಡು 1 ಗಂಟೆಯ ನಂತರ ತೊಳೆಯುವುದರಿಂದ ತಲೆ ಹೊಟ್ಟು ನಿವಾರಣೆಯಾಗುವುದಲ್ಲದೇ ತಲೆ ಕೂದಲೂ ಸಹ ಸೊಂಪಾಗಿ ಬೆಳೆಯುತ್ತದೆ.

* ವಾರಕ್ಕೊಮ್ಮೆ ಲೋಳೆ ರಸವನ್ನು ತಲೆಗೆ ಹಚ್ಚಿ ಶ್ಯಾಂಪೂ ಬಳಸದೇ ಹಾಗೆಯೇ ತೊಳೆಯುವುದರಿಂದಲೂ ಸಹ ತಲೆಹೊಟ್ಟು ನಿವಾರಣೆಯಾಗುತ್ತದೆ.

* ತೆಂಗಿನಕಾಯಿಯ ರಸಕ್ಕೆ ಸ್ವಲ್ಪ ಬಿಸಿ ನೀರು ಮತ್ತು ನಿಂಬೆ ರಸವನ್ನು ಬೆರೆಸಿ ಹಚ್ಚುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

* ಮೆಂತ್ಯ ಸೊಪ್ಪಿನ ಪೇಸ್ಟ್‌ ನ್ನು ತಲೆಗೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯುವುದರಿಂದ ತಲೆಹೊಟ್ಟು ನಿವಾರಣೆಯಾಗಬಹುದು.

* 1 ಚಮಚ ಅಡುಗೆ ಸೋಡಾವನ್ನು ನೀರಿನಲ್ಲಿ ಬೆರೆಸಿ 5 ನಿಮಿಷದ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

* ಕೇವಲ ನಿಂಬೆ ರಸವನ್ನು ಕೂದಲ ಬುಡಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

* ತಲೆಕೂದಲಿಗೆ ಮೆಹೆಂದಿ ಹಾಕುವುದರಿಂದಲೂ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

* ಹುಳಿ ಮೊಸರನ್ನು ತಲೆಬುಡಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

* ತಲೆ ಸ್ನಾನ ಮಾಡುವಾಗ ಶ್ಯಾಂಪೂವನ್ನು ಬಳಸುವುದರ ಬದಲು ಸೀಗೆಕಾಯಿ ಬಳಸುವುದರಿಂದ ತಲೆಹೊಟ್ಟು ನಿವಾರಣೆಯಾಗುವುದಲ್ಲದೇ ಅದು ಮತ್ತೆ ಬರದಂತೆ ತಡೆಗಟ್ಟಬಹುದು.

* ಬಿಲ್ವಪತ್ರೆಯ ತಿರುಳನ್ನು ಬೇಯಿಸಿ ತಲೆಗೆ ಹಚ್ಚುವುದರಿಂದ ತಲೆ ಹೊಟ್ಟು ಕಡಿಮೆಯಾಗುತ್ತದೆ.

* ಯಾವುದೇ ಬಣ್ಣದ ದಾಸವಾಳ ಎಲೆಯನ್ನು ರುಬ್ಬಿ ಅದಕ್ಕೆ ಮೊಸರು ಹಾಕಿ ಕಲೆಸಿ ಬಳಸುವುದರಿಂದ ಹೊಟ್ಟು ನಿವಾರಣೆಯಾಗುತ್ತದೆ.

* ತಲೆಗೆ ಆಲಿವ್ ಎಣ್ಣೆಯನ್ನು ಬಳಸುವುದರಿಂದ ಕೂದಲು ಮೃದುವಾಗುವುದಲ್ಲದೇ ಹೊಟ್ಟು ನಿವಾರಣೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular