HomeKarnatakaಮಳೆ ನೀರಲ್ಲಿ ಕೊಚ್ಚಿ ಹೋದ ರೈಲು ಹಳಿ ಜಲ್ಲಿ: ತಾಳಗುಪ್ಪ ಇಂಟರ್ ಸಿಟಿ ರೈಲು ತಾತ್ಕಾಲಿಕ...

ಮಳೆ ನೀರಲ್ಲಿ ಕೊಚ್ಚಿ ಹೋದ ರೈಲು ಹಳಿ ಜಲ್ಲಿ: ತಾಳಗುಪ್ಪ ಇಂಟರ್ ಸಿಟಿ ರೈಲು ತಾತ್ಕಾಲಿಕ ಸ್ಥಗಿತ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಸುರಿದ ವರುಣಾರ್ಭಟಕ್ಕೆ ರೈಲು ಹಳಿಗಳ ಅಡಿಯಲ್ಲಿರುವ ಜಲ್ಲಿ ಸಂಪೂರ್ಣ ಕೊಚ್ಚಿ ಹೋಗಿದ್ದು, ರೈಲು ಸಂಚಾರಕ್ಕೂ ಅಡ್ಡಿಯುಂಟಾಗಿರುವ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಮಳೆ ಅಬ್ಬರಕ್ಕೆ ರೈಲ್ವೆ ಟ್ರ್ಯಾಕ್ ಅಡಿಯಲ್ಲಿರುವ ಜಲ್ಲಿ ಕಲ್ಲುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇದರಿಂದಾಗಿ ತಾಳಗುಪ್ಪ-ಬೆಂಗಳೂರು, ತಾಳಗುಪ್ಪ-ಮೈಸೂರು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.

ಕಂಸಿ-ಆನಂದಪುರ ರೈಲ್ವೆ ಮಾರ್ಗದಲ್ಲಿ ಅಡಚಣಿಯುಂಟಾಗಿದ್ದು, ಸಡೂರು ಬಳಿ ರೈಲ್ವೆ ಟ್ರ್ಯಾಕ್ ನಲ್ಲಿದ್ದ ಜಲ್ಲಿ ಮಳೆ ನೀರಲ್ಲಿ ಕೊಚ್ಚಿ ಹೋಗಿದೆ. ಟ್ರ್ಯಾಕ್ ಮ್ಯಾನ್ ಈ ಭಾಗದ ಹಳಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಜಲ್ಲಿ ಕೊಚ್ಚಿ ಹೋಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಮೇಲಾಧಿಕಾರಿಗಳಿಗೆ ಮಾಹಿತಿ ರವಾನಿಸಿ ಸಂಭವನೀಯ ಅಪಾಯ ತಪ್ಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲು ಹಳಿಗಳ ಜಲ್ಲಿ ಕೊಚ್ಚಿ ಹೋಗಿರುವುದರಿಂದ ತಾಳಗುಪ್ಪದಿಂದ ಬೆಂಗಳೂರು-ಮೈಸೂರು ಹೊರಟಿದ್ದ ರೈಲು ಸಂಚಾರವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಇಂದು ಮುಂಜಾನೆ 5:15ಕ್ಕೆ ತಾಳಗುಪ್ಪದಿಂದ ಹೊರಟಿದ್ದ ಇಂಟರ್ ಸಿಟಿ ರೈಲು ಸಾಗರ-ಆನಂದಪುರ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ರೈಲ್ವೆ ಇಂಜಿನಿಯರ್ ತಂಡ, ರೈಲ್ವೆ ಪೊಲೀಸರು ಟ್ರ್ಯಾಕ್ ರಿಪೇರಿ ಕೆಲಸ ಮಾಡಿಸುತ್ತಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular