HomeIndiaಆ್ಯಂಟಿ ಬಯಾಟಿಕ್ ಬೇಕಾಬಿಟ್ಟಿ ಬಳಕೆಗೆ ಕಡಿವಾಣ: ವೈದ್ಯರ ಚೀಟಿ ಇಲ್ಲದೆ ಔಷಧ ಮಾರದಂತೆ ಆದೇಶ

ಆ್ಯಂಟಿ ಬಯಾಟಿಕ್ ಬೇಕಾಬಿಟ್ಟಿ ಬಳಕೆಗೆ ಕಡಿವಾಣ: ವೈದ್ಯರ ಚೀಟಿ ಇಲ್ಲದೆ ಔಷಧ ಮಾರದಂತೆ ಆದೇಶ

ನವದೆಹಲಿ: ಆ್ಯಂಟಿ ಬಯಾಟಿಕ್ ಬೇಕಾಬಿಟ್ಟಿ ಬಳಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದ್ದು, ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ಮಾಡದಂತೆ ಆದೇಶ ನೀಡಿದೆ. ಆ್ಯಂಟಿ ಬಯಾಟಿಕ್ ಔಷಧ ನೀಡಿದ ಬಗ್ಗೆ ಪ್ರಿಸ್ಕ್ರಿಪ್ಷನ್ ನಲ್ಲಿ ಕಾರಣ ಬರೆಯಲು ಕೂಡ ಆರೋಗ್ಯ ಮಂತ್ರಾಲಯದಿಂದ ಸೂಚನೆ ನೀಡಲಾಗಿದೆ.

ಆ್ಯಂಟಿ ಬಯಾಟಿಕ್ ಔಷಧಗಳ ಬಳಕೆ ಹೆಚ್ಚಳದಿಂದ ಅಪಾಯ, ಔಷಧ ದುಷ್ಪರಿಣಾಮದಿಂದ ಸಾವು ಹಿನ್ನೆಲೆ ದುರುಪಯೋಗ ತಪ್ಪಿಸಲು ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಬೇಕಾಬಿಟ್ಟಿಯಾಗಿ ಆ್ಯಂಟಿ ಬಯಾಟೆಕ್ ಬಳಕೆಗೆ ನಿಷೇಧ ಹೇರಲಾಗಿದ್ದು, ವೈದ್ಯರ ಚೀಟಿ ಇಲ್ಲದೆ ಔಷಧ ಮಳಿಗೆಗಳು ಮಾರಾಟ ಮಾಡುವಂತಿಲ್ಲ. ವೈದ್ಯರು ಕೂಡ ಯಾವ ಕಾರಣಕ್ಕೆ ಅವುಗಳನ್ನು ನೀಡಲಾಗಿದೆ ಎಂಬ ಕಾರಣ ಬರೆಯಬೇಕಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಇದಕ್ಕಾಗಿ ಕಠಿಣ ನಿಯಮ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular