HomeLive NewsBREAKING: ಪ್ರೀತಿಸಿ ಮದುವೆಯಾಗಿದ್ದ ಜೋಡಿ: ಪತ್ನಿ ಮೇಲೆ ಅನುಮಾನಗೊಂಡು ಬರ್ಬರವಾಗಿ ಹತ್ಯೆಗೈದ ಪತಿ

BREAKING: ಪ್ರೀತಿಸಿ ಮದುವೆಯಾಗಿದ್ದ ಜೋಡಿ: ಪತ್ನಿ ಮೇಲೆ ಅನುಮಾನಗೊಂಡು ಬರ್ಬರವಾಗಿ ಹತ್ಯೆಗೈದ ಪತಿ

ಹಾಸನ: ಪತಿ ಮಹಾಶಯನೊಬ್ಬ ಪತ್ನಿಯ ಮೇಲೆ ಅನುಮಾನಗೊಂಡು ಆಕೆಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹುಲ್ಲೇನಹಳ್ಳಿಯಲ್ಲಿ ನಡೆದಿದೆ.

ಪುನೀತ್ ಪತ್ನಿಯನ್ನೇ ಕೊಲೆಗೈದ ಪತಿ. ಯಶೋಧಾ ಪತಿಯಿಂದಲೇ ಕೊಲೆಯಾದ ಪತ್ನಿ. ಏಳು ವರ್ಷಗಳ ಹಿಂದೆ ಪುನೀತ್ ಹಾಗೂ ಯಶೋಧಾ ಪ್ರೀತಿಸಿ ವಿವಾಹವಾಗಿದ್ದರು. ಮದುವೆ ಬಳಿಕ ಪತ್ನಿ ಮೇಲೆ ಅನಗತ್ಯವಾಗಿ ಸಂಶಯಪಡುತ್ತಿದ್ದ ಪುನೀತ್, ಪದೇ ಪದೇ ಜಗಳವಾಡಿ, ಹಿಂಸಿಸುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತಿಯ ಕಾಟಕ್ಕೆ ಮನನೊಂದಿದ್ದ ಯಶೋಧಾ, ಈ ಬಗ್ಗೆ ತನ್ನ ತಾಯಿ ಬಳಿಯೂ ಆಳಲು ತೋಡಿದ್ದಳು. ನಿನ್ನೆ ರತರಿ ಕೂಡ ತನ್ನ ತಾಯಿಗೆ ಕರೆ ಮಾಡಿ ಪತಿ ಮತ್ತೆ ಜಗಳವಾಡಿ ಹಿಂಸೆ ನೀಡುತ್ತಿರುವುದಾಗಿ ಕಣ್ಣೀರಿಟ್ಟಿದ್ದಳು. ಬೆಳಗಾಗುವಷ್ಟರಲ್ಲಿ ಪುನೀತ್, ಪತ್ನಿಗೆ ಮನಬಂದಂತೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಪತ್ನಿ ಕೊಲೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಆರೋಪಿ ಪತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular