HomeEntertainmentಬಿಡುಗಡೆಯಾಯ್ತು ಹರೀಶ್ ರಾಜ್ ಅಭಿನಯದ 'ಪ್ರೇತ'

ಬಿಡುಗಡೆಯಾಯ್ತು ಹರೀಶ್ ರಾಜ್ ಅಭಿನಯದ ‘ಪ್ರೇತ’

ಪ್ರೇಕ್ಷಕರನ್ನು ಭಯಪಡಿಸಲು ಸಜ್ಜಾಯ್ತು 'ಪ್ರೇತ': ಹರೀಶ್ ರಾಜ್ ಸಿನಿಮಾ ಬಿಡುಗಡೆಗೆ ದಿನ ನಿಗದಿ

ಸ್ಯಾಂಡಲ್ವುಡ್ನ ಪ್ರತಿಭಾವಂತ ನಟ ಹರೀಶ್ ರಾಜ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಪ್ರೇತ’ ಚಿತ್ರವನ್ನು ಇಂದು ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ತನ್ನ ಟ್ರೈಲರ್ ನಿಂದಲೇ ಸಿನಿ ಪ್ರೇಕ್ಷಕರ ಗಮನ ಸೆಳೆದಿರುವ ಈ ಸಿನಿಮಾದಲ್ಲಿ ಹರೀಶ್ ರಾಜ್ ಸೇರಿದಂತೆ ಐರಾ ಶೆಟ್ಟಿ, ವೆಂಕಟೇಶ್, ಅಮೂಲ್ಯ ಭಾರದ್ವಾಜ್, ಹಾಗೂ ಅಮಿತ್, ಸುನೀತಾ, ಪುರುಷೋತ್ತಮ್, ತಿಲಕ್, ಉಮೇಶ್, ಜಯ ತೆರೆ ಹಂಚಿಕೊಂಡಿದ್ದಾರೆ.

ಈ ಚಿತ್ರವನ್ನು ಹರೀಶ್ ರಾಜ್ ಅವರೇ ತಮ್ಮ ಹರೀಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ ಸಂಯೋಜನೆ ನೀಡಿದ್ದಾರೆ. ಜೀವನ್ ಪ್ರಕಾಶ್ ಸಂಕಲನವಿದ್ದು, ಕಿರಣ್ ಆರ್ ಹೆಮ್ಮಿಗೆ ಡೈಲಾಗ್ ಬರೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಬಿಡುಗಡೆಯಾಗುತ್ತಿರುವ ಮೊದಲ ಹಾರರ್ ಚಿತ್ರ ಇದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular