HomeSportsಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲ, ಜೀವನದಲ್ಲೂ ಪಾಂಡ್ಯ ಸಖತ್ ರೋಮ್ಯಾಂಟಿಕ್:ಮಹಿಕಾ ಶರ್ಮಾ ಹಂಚಿಕೊಂಡ ಫೋಟೋ ಈಗ ಇಂಟರ್ನೆಟ್...

ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲ, ಜೀವನದಲ್ಲೂ ಪಾಂಡ್ಯ ಸಖತ್ ರೋಮ್ಯಾಂಟಿಕ್:ಮಹಿಕಾ ಶರ್ಮಾ ಹಂಚಿಕೊಂಡ ಫೋಟೋ ಈಗ ಇಂಟರ್ನೆಟ್ ನಲ್ಲಿ ವೈರಲ್!

ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ಪ್ರೀತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಅಕ್ಟೋಬರ್ 2025 ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದ ಈ ಜೋಡಿ, ಈಗ ಪ್ರೇಮಿಗಳ ದಿನದ ಅಂಗವಾಗಿ ದೆಹಲಿಯಲ್ಲಿ ಒಂದಾಗಿದ್ದಾರೆ. ಹಾರ್ದಿಕ್ ಅವರು ಹೋಟೆಲ್ ರೂಮ್‌ನಲ್ಲಿ ಗುಲಾಬಿ ಹೂವಿನ ಬೊಕ್ಕೆಯನ್ನು ಹಿಡಿದು ಕುಳಿತಿರುವ ಫೋಟೋವನ್ನು ಮಹಿಕಾ ಹಂಚಿಕೊಂಡಿದ್ದು, “ನನ್ನ ಜೀವನದ ಮ್ಯಾನ್ ಆಫ್ ದಿ ಮ್ಯಾಚ್” ಎಂದು ಕ್ಯಾಪ್ಶನ್ ನೀಡಿದ್ದಾರೆ.

ಬರ್ತ್ ಡೇ ಮತ್ತು ವ್ಯಾಲೆಂಟೈನ್ ಸಂಭ್ರಮ ಮಹಿಕಾ ಅವರ ಪೋಸ್ಟ್ ಅನ್ನು ಮರುಹಂಚಿಕೊಂಡಿರುವ ಹಾರ್ದಿಕ್ ಪಾಂಡ್ಯ, “ನನ್ನ ವ್ಯಾಲೆಂಟೈನ್ ಮತ್ತು ಬೇಬಿಯ ಬರ್ತ್ ಡೇ ವಾರ ಶುರುವಾಗಿದೆ” ಎಂದು ಬರೆದುಕೊಳ್ಳುವ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಇತ್ತೀಚೆಗೆ ತಮ್ಮ ಕುತ್ತಿಗೆಯ ಮೇಲೆ ‘M’ ಎಂಬ ಅಕ್ಷರದ ಹಚ್ಚೆ (Tattoo) ಹಾಕಿಸಿಕೊಂಡಿದ್ದು, ಅದು ಮಹಿಕಾ ಅವರ ಹೆಸರಿನ ಮೊದಲ ಅಕ್ಷರ ಎನ್ನಲಾಗುತ್ತಿದೆ.

ಯಾರು ಈ ಮಹಿಕಾ ಶರ್ಮಾ? 24 ವರ್ಷದ ಮಹಿಕಾ ಶರ್ಮಾ ಕೇವಲ ಮಾಡೆಲ್ ಮತ್ತು ನಟಿ ಮಾತ್ರವಲ್ಲದೆ, ಅರ್ಥಶಾಸ್ತ್ರ ಮತ್ತು ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅವರು ಅನೇಕ ಮ್ಯೂಸಿಕ್ ವಿಡಿಯೋಗಳು ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅವರು ವೃತ್ತಿಪರ ಯೋಗ ತರಬೇತುದಾರರೂ ಹೌದು. ಹಾರ್ದಿಕ್ ಪಾಂಡ್ಯ ಅವರ ಮೊದಲ ಪತ್ನಿ ನತಾಶಾ ಸ್ಟಾಂಕೋವಿಕ್ ಅವರ ಪುತ್ರ ಅಗಸ್ತ್ಯನ ಜೊತೆ ಮಹಿಕಾ ಸಮಯ ಕಳೆಯುತ್ತಿರುವ ವಿಡಿಯೋಇತ್ತೀಚೆಗೆ ವೈರಲ್ ಆಗಿದ್ದವು, ಇದು ಪಾಂಡ್ಯ ಕುಟುಂಬದ ಜೊತೆಗಿನ ಅವರ ಒಡನಾಟವನ್ನು ತೋರಿಸುತ್ತದೆ.ಸದ್ಯ ದೆಹಲಿಯಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಗಳ ನಡುವೆಯೇ ಹಾರ್ದಿಕ್ ತಮ್ಮ ವೈಯಕ್ತಿಕ ಜೀವನದ ಈ ವಿಶೇಷ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular