HomeKarnatakaBIG NEWS: ನಾನು ಕ್ಯಾಸೆಟ್ ಬಿಟ್ಟೆ ಅಂತಾರೆ, ನನಗೇನು ಹುಚ್ಚಾ? ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ

BIG NEWS: ನಾನು ಕ್ಯಾಸೆಟ್ ಬಿಟ್ಟೆ ಅಂತಾರೆ, ನನಗೇನು ಹುಚ್ಚಾ? ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ

ರಾಯಚೂರು: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಆರೋಪದ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ರಾಯಚೂರಿನ ಸಿಂಧನೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಾನು ಕ್ಯಾಸೆಟ್ ಬಿಟ್ಟೆ ಅಂತಾರೆ, ನನಗೇನು ಹುಚ್ಚಾ? ಕ್ಯಾಸೆಟ್ ರೆಡಿ ಮಾಡೋದ್ಯಾರು ಎಂದು ಗೊತ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಟೆಂಟ್ ನಲ್ಲಿ ಅಶ್ಲೀಲ ಚಿತ್ರ ಹಾಕಿ ಓಡಿಸ್ತಿದ್ರು. ಅವರ ಆ ಅನಿಉಭವ ಇಲ್ಲಿ ಮುಂದುವರಿದಿದೆ ಅಷ್ಟೇ. ನಾವು ಸ್ಟ್ರೀಟ್ ಫೈಟರ್ ಅಂತಾ ಡಿಸಿಎಂ ಡಿ.ಕೆ.ಹೇಳ್ತಾನೆ. ನಿನ್ನ ಕಥೆ ಗೊತ್ತು, ಹೋಟೆಲ್ ನಲ್ಲಿ ಆರ‍ೇಳು ಜನ ಇಟ್ಕೊಂಡಿದ್ದಾರೆ. ಎಲ್ಲಾ ಸತ್ಯ ಬಯಲಾಗುತ್ತೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular