HomeKarnatakaBIG NEWS: ಕೈ ಕುಯ್ದುಕೊಂಡ ಜೆಡಿಎಸ್ ಮುಖಂಡ; HDK ಮನೆ ಮುಂದೆ ಬೆಂಬಲಿಗರ ಹೈಡ್ರಾಮಾ

BIG NEWS: ಕೈ ಕುಯ್ದುಕೊಂಡ ಜೆಡಿಎಸ್ ಮುಖಂಡ; HDK ಮನೆ ಮುಂದೆ ಬೆಂಬಲಿಗರ ಹೈಡ್ರಾಮಾ

ಬೆಂಗಳೂರು: ಮಾಜಿ ಸಿಎಂ, ಚೆನ್ನಪಟ್ಟಣ ಶಾಸಕ ಹೆಚ್.ಡಿ.ಕುಮಾರಸ್ವಾಮಿ ನಿವಾಸದ ಎದುರು ಜೆಡಿಎಸ್ ಮುಖಂಡರ ಹೈಡ್ರಾಮಾ ನಡೆದಿದೆ. ಚೆನ್ನಪಟ್ಟಣ ಬಿಟ್ಟು ಹೋಗದಂತೆ ಮಾಜಿ ಸಿಎಂ ಕುಮಾರಸ್ವಾಮಿಗೆ ಬೆಂಬಲಿಗರು ಮನವಿ ಮಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಚೆನ್ನಪಟ್ಟಣ ಶಾಸಕರಾಗಿರುವ ಕುಮಾರಸ್ವಾಮಿ ಚೆನ್ನಪಟ್ಟಣ ಬಿಟ್ಟು ಹೋಗಬಾರದು ಎಂದು ಜೆಡಿಎಸ್ ಮುಖಂಡರು ಪಟ್ಟು ಹಿಡಿದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿ ಅವರ ಬೆಂಗಳೂರು ನಿವಾಸದ ಬಳಿ ಆಗಮಿಸಿರುವ ಚೆನ್ನಪಟ್ಟಣ ಜೆಡಿಎಸ್ ಮುಖಂಡರು ಕುಮಾರಸ್ವಾಮಿ ಚೆನ್ನಪಟ್ಟಣ ಬಿಟ್ಟುಹೋಗಬಾರದು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಓರ್ವ ಜೆಡಿಎಸ್ ಮುಖಂಡ ಕೈ ಕುಯ್ದುಕೊಂಡು ಚನ್ನಪಟ್ಟಣದಲ್ಲೇ ಕುಮಾರಸ್ವಾಮಿ ಇರಬೇಕು ಎಂದು ಮನವಿ ಮಾಡಿರುವ ಘಟನೆ ನಡೆದಿದೆ. ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿ ಎಂಬ ಆಗ್ರಹವೂ ಇದೇ ವೇಳೆ ಕೇಳಿಬಂದಿದೆ.

ಒಟ್ಟಾರೆ ಚೆನ್ನಪಟ್ಟಣ ಜೆಡಿಎಸ್ ಮುಖಂಡರು ಮಾಜಿ ಸಿಎಂ ಕುಮಾರಸ್ವಾಮಿ ಮನೆ ಮುಂದೆ ಜಮಾವಣೆಗೊಂಡಿದ್ದು, ಹೈಡ್ರಾಮ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular