HomeKarnatakaನಕಲಿ ಪಿ.ಹೆಚ್.ಡಿ. ದಾಖಲೆ ಸಲ್ಲಿಸಿದ ಅತಿಥಿ ಉಪನ್ಯಾಸಕ ಸೇವೆಯಿಂದ ವಜಾ

ನಕಲಿ ಪಿ.ಹೆಚ್.ಡಿ. ದಾಖಲೆ ಸಲ್ಲಿಸಿದ ಅತಿಥಿ ಉಪನ್ಯಾಸಕ ಸೇವೆಯಿಂದ ವಜಾ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕ ಮಾದೇಶ್ ಪ್ರಭು ಎಂಬುವರನ್ನು ನಕಲಿ ಪಿ.ಹೆಚ್.ಡಿ. ದಾಖಲೆ ಸಲ್ಲಿಸಿದ ಆರೋಪದ ಮೇಲೆ ಸೇವೆಯಿಂದ ವಜಾಗೊಳಿಸಲಾಗಿದೆ.

ಶಿಕಾರಿಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕ ಮಾದೇಶ್ ಪ್ರಭು ನಕಲಿ ಪಿ.ಎಚ್.ಡಿ. ದಾಖಲೆ ಸಲ್ಲಿಸಿದ್ದ ಕಾರಣ ಕಾಲೇಜು ಮಟ್ಟದ ಪರಿಶೀಲನಾ ಸಮಿತಿ ಸಭೆ ಶುಕ್ರವಾರ ಸೇವೆಯಿಂದ ಅಮಾನತು ಮಾಡಿದೆ.

ಸಾಗರದ ಇಂದಿರಾ ಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಎರಡು ವರ್ಷ ಕಾರ್ಯ ನಿರ್ವಹಿಸಿದ್ದ ಮಾದೇಶ್ ಪ್ರಭು ಡಿಸೆಂಬರ್ ನಿಂದ ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು. ಉತ್ತರಪ್ರದೇಶದ ಝಾನ್ಸಿಯ ಬುಂದೇಲ್ ಖಂಡ ವಿಶ್ವವಿದ್ಯಾಲಯದಲ್ಲಿ 2015ರಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿರುವುದಾಗಿ ದಾಖಲೆ ಸಲ್ಲಿಸಿದ್ದರು. ಅತಿಥಿ ಉಪನ್ಯಾಸಕರ ಶೈಕ್ಷಣಿಕ ಮತ್ತು ಇತರೆ ಪ್ರಮಾಣ ಪತ್ರಗಳ ನೈಜತೆ ವರದಿಯನ್ನು ಕಡ್ಡಾಯವಾಗಿ ಸಂಬಂಧಿಸಿದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳಿಂದ ಪಡೆಯಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಫೆಬ್ರವರಿ 17ರಂದು ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಮಾದೇಶ್ ಪ್ರಭು ಅವರ ಪಿ.ಎಚ್‌.ಡಿ. ಪ್ರಮಾಣ ಪತ್ರದ ನೈಜತೆ ಪರೀಕ್ಷೆಗಾಗಿ ಬುಂದೇಲ್ ಖಂಡ ವಿವಿಗೆ ಕಳುಹಿಸಲಾಗಿತ್ತು. ಇದು ನಕಲಿ ಪಿ.ಎಚ್.ಡಿ. ದಾಖಲೆಯಾಗಿದ್ದು, ನಮ್ಮಲ್ಲಿ ಪಿ.ಎಚ್.ಡಿ. ಮಾಡಿಲ್ಲವೆಂದು ಏಪ್ರಿಲ್ 16ರಂದು ಪ್ರಾಂಶುಪಾಲರಿಗೆ ವಿವಿ ದೃಢಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶುಕ್ರವಾರ ಪ್ರಾಂಶುಪಾಲ ಚನ್ನಪ್ಪ ಅವರು ಕಾಲೇಜು ಮಟ್ಟದ ಪರಿಶೀಲನಾ ಸಮಿತಿ ಸಭೆ ನಡೆಸಿ ಮಾದೇಶ್ ಪ್ರಭು ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular