HomeKarnatakaಬೇರೆ ರಾಜ್ಯದ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮೆ ವಿವಾದ: ದುರುಪಯೋಗ ತಡೆಗೆ 11 ಸೂಚನೆಗಳ ಜಾರಿ

ಬೇರೆ ರಾಜ್ಯದ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮೆ ವಿವಾದ: ದುರುಪಯೋಗ ತಡೆಗೆ 11 ಸೂಚನೆಗಳ ಜಾರಿ

ಬೆಂಗಳೂರು: ರಾಜ್ಯದ ಅರ್ಹ ಫಲಾನುಭವಿಗಳಲ್ಲಿ ಒಬ್ಬರಿಗೂ ಗೃಹಲಕ್ಷ್ಮಿ ಯೋಜನೆಯ ಹಣ ಕಟ್ ಆಗಬಾರದು. ಆದರೆ, ಯೋಜನೆಯ ಹೆಸರಲ್ಲಿ ನಡೆಯುತ್ತಿರೋ ಬಿಗ್ ಫ್ರಾಡ್ ಮತ್ತು ದುರುಪಯೋಗಕ್ಕೆ ಮಾತ್ರ ತಕ್ಷಣವೇ ಬ್ರೇಕ್ ಬೀಳಬೇಕು – ಹೀಗಂತ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಯೋಜನೆಗಳ ಹೈಲೆವೆಲ್ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಈ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಸತ್ತವರ ಹೆಸರಲ್ಲೂ ಹಣ ಡ್ರಾ ಆಗ್ತಿರೋದು ಮತ್ತು ಬೇರೆ ರಾಜ್ಯದವರ ಖಾತೆಗಳಿಗೆ ಹಣ ವರ್ಗಾವಣೆಯಾಗುತ್ತಿರುವ ಭೀಕರ ಹಗರಣ ಬೆಳಕಿಗೆ ಬಂದಿದ್ದು, ಸಿಎಂ ಅಧಿಕಾರಿಗಳ ಮೇಲೆ ಫುಲ್ ಗರಂ ಆಗಿದ್ದಾರೆ.

ಲೋನ್ ಅಕೌಂಟ್‌ ಜಮೆ ಮತ್ತು ವಾಯ್ಸ್ ಮೆಸೇಜ್ ಅಲರ್ಟ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಹಳಷ್ಟು ಮಹಿಳಾ ಫಲಾನುಭವಿಗಳು ಬ್ಯಾಂಕ್‌ಗಳಲ್ಲಿ ಸಾಲ (Loan) ಪಡೆದಿರುತ್ತಾರೆ. ಗೃಹಲಕ್ಷ್ಮಿಯ ₹2,000 ಹಣ ಬಂದ ತಕ್ಷಣ ಬ್ಯಾಂಕಿನವರು ಆ ಹಣವನ್ನು ಸಾಲದ ಮೊತ್ತಕ್ಕೆ ಕಟ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಬೇಸತ್ತು ಮಹಿಳೆಯರು ಬ್ಯಾಂಕ್ ಖಾತೆ ಬದಲಾಯಿಸುತ್ತಿದ್ದಾರೆ. ಇಂತಹ ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗಬಾರದು ಎಂದು ಸಿಎಂ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ, ಗೃಹಲಕ್ಷ್ಮಿ ಹಣ ಅಕೌಂಟ್‌ಗೆ ಜಮೆಯಾದ ತಕ್ಷಣ ಮಹಿಳೆಯರ ಮೊಬೈಲಿಗೆ ‘ವಾಯ್ಸ್‌ ಮೆಸ್ಸೇಜ್‌’ (Voice Message) ಮೂಲಕ ಕನ್ಫರ್ಮೇಷನ್ ಕಳುಹಿಸುವ ಹೊಸ ವ್ಯವಸ್ಥೆ ತರಲು ಆರ್ಡರ್ ಮಾಡಿದ್ದಾರೆ.

ಗ್ಯಾರಂಟಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ವ್ಯಕ್ತವಾದ 11 ಪ್ರಮುಖ ಅಂಶಗಳು ಹೀಗಿವೆ

1.ಏರ್‌ಟೆಲ್ ಬ್ಯಾಂಕ್ ಫ್ರಾಡ್: ಏರ್‌ಟೆಲ್‌ ಬ್ಯಾಂಕ್‌ನಲ್ಲಿ ನಕಲಿ ಯುಪಿಐ (UPI) ಖಾತೆಗಳನ್ನು ತೆರೆದು ಗೃಹಲಕ್ಷ್ಮಿ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಆಘಾತಕಾರಿ ಪ್ರಕರಣಗಳು ಪತ್ತೆಯಾಗಿವೆ

2.ಕರ್ನಾಟಕದ ಖಾತೆಗಳಿಗೆ ಮಾತ್ರ ಹಣ: ಗೃಹಲಕ್ಷ್ಮಿ ಹಣ ಪಡೆಯುವ ಬ್ಯಾಂಕ್ ಖಾತೆಗಳು ಕಡ್ಡಾಯವಾಗಿ ಕರ್ನಾಟಕ ರಾಜ್ಯದಲ್ಲೇ ಇರಬೇಕು. ಇತರೆ ರಾಜ್ಯಗಳಲ್ಲಿರುವ ಖಾತೆಗಳಿಗೆ ಹಣ ಹೋಗುತ್ತಿರುವುದಕ್ಕೆ ತಕ್ಷಣ ತಡೆ ಹಾಕಲು ಸೂಚಿಸಲಾಗಿದೆ.

3.ಬೇರೆ ರಾಜ್ಯದ ವೋಟರ್ಸ್‌ಗೆ ನೋ ಎಂಟ್ರಿ: ನಮ್ಮ ರಾಜ್ಯದ ತೆರಿಗೆ ಹಣದ ಯೋಜನೆಗಳು ನಮ್ಮ ರಾಜ್ಯದ ಜನರಿಗೆ ಮಾತ್ರ ಸಿಗಬೇಕು. ಪಕ್ಕದ ರಾಜ್ಯದ ಮತದಾರರು ಇದರ ಲಾಭ ಪಡೆಯುತ್ತಿರುವುದನ್ನು ತಡೆಯಲೇಬೇಕು.

4.ಸ್ವಯಂಪ್ರೇರಿತ ಗಿವ್-ಅಪ್ (Give up): ಆರ್ಥಿಕವಾಗಿ ಸಬಲರಾಗಿರುವ ಯಾರಾದರೂ ಗ್ಯಾರಂಟಿ ಯೋಜನೆಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಟ್ಟರೆ, ಆ ಹಣವನ್ನು ಮತ್ತೊಬ್ಬ ಬಡ ಫಲಾನುಭವಿಗೆ ನೀಡಲು ಅಂಥವರನ್ನು ಪ್ರೋತ್ಸಾಹಿಸಬೇಕು.

5.ಕೇಂದ್ರದ ನೀತಿಗಳ ಚರ್ಚೆ: ಕೇಂದ್ರ ಸರ್ಕಾರದ ನೀತಿಗಳಿಂದ ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆ, ಬೆಲೆ ಏರಿಕೆ ಮತ್ತು ತಲಾ ಆದಾಯ ಕುಸಿಯುತ್ತಿರುವ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

6.ತಾಂತ್ರಿಕ ದೋಷಗಳು: ಗೃಹಲಕ್ಷ್ಮಿ ಯೋಜನೆ ಜಾರಿಯಲ್ಲಿ ಅಡ್ಡಿಯಾಗುತ್ತಿರುವ ಎರಡು ಪ್ರಮುಖ ತಾಂತ್ರಿಕ ಸಮಸ್ಯೆಗಳ (Technical Issues) ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ಸರಿಪಡಿಸಲು ಸೂಚಿಸಲಾಯಿತು.

7.ಮೃತರ ಇ-ಕೆವೈಸಿ ಲಿಂಕ್: ಮರಣ ಹೊಂದಿದ ಫಲಾನುಭವಿಗಳ ಡೇಟಾ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಇದರಿಂದಾಗಿ ಇ-ಕೆವೈಸಿ (e-KYC) ಹಾಗೂ ಬ್ಯಾಂಕ್‌ ಖಾತೆ/ಎನ್‌.ಪಿ.ಸಿ.ಐ (NPCI) ನಿಷ್ಕ್ರಿಯವಾಗಿರುವ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಲು ಆದೇಶಿಸಲಾಗಿದೆ.

8.ಆಡಿಟರ್ ಜನರಲ್ (AG) ವರದಿ: ಎಜಿ ವರದಿಯಲ್ಲಿ ಉಲ್ಲೇಖವಾಗಿರುವ ಗಂಭೀರ ಲೋಪದೋಷಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಕಠಿಣ ಕ್ರಮಕ್ಕೆ ಸಿಎಂ ಮುಂದಾಗಿದ್ದಾರೆ.

8.₹60 ಕೋಟಿ ಲೂಟಿ ಮರುಪಡೆಯಲು ಆದೇಶ: ಒಂದೇ ಬ್ಯಾಂಕ್ ಖಾತೆಯನ್ನು ಬಳಸಿ ಹಲವು ಫಲಾನುಭವಿಗಳು ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದಾರೆ ಈ ರೀತಿ ಮೂರು ಲಕ್ಷ ಕಂತುಗಳಲ್ಲಿ ಒಟ್ಟು 60 ಕೋಟಿ ರೂಪಾಯಿ ಹಣ ಬೇರೆಯವರ ಪಾಲಾಗಿದೆ. ಈ ಲೂಟಿ ಹೊಡೆದ ಹಣವನ್ನು ತಕ್ಷಣವೇ ಮರುಪಡೆಯಲು (Recovery) ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

9.ಒಬ್ಬರಿಗೆ ಒಂದೇ ಅಕೌಂಟ್: ಒಬ್ಬರೇ ವ್ಯಕ್ತಿ ಹಲವು ಖಾತೆಗಳನ್ನು ನೋಂದಾಯಿಸಿ ಹಣ ಲೂಟಿ ಮಾಡುತ್ತಿರುವುದನ್ನು ಎಜಿ ವರದಿ ಎತ್ತಿ ತೋರಿಸಿದ್ದು, ಇದಕ್ಕೆ ತಕ್ಷಣ ಬ್ರೇಕ್ ಹಾಕಲು ವ್ಯವಸ್ಥೆ ಮಾಡಲಾಗುತ್ತಿದೆ.

10.ಅರ್ಜಿಗಳ ನೈಜತೆ ತಪಾಸಣೆ: ಹಿಂದೆ ಪಡೆದ ಅರ್ಜಿಗಳಲ್ಲಿ ಉಲ್ಲೇಖವಾಗಿರುವ ದಾಖಲೆಗಳ ನೈಜತೆಯನ್ನು ಅಧಿಕಾರಿಗಳು ವೆರಿಫೈ ಮಾಡದಿರುವುದು ಪತ್ತೆಯಾಗಿದ್ದು, ಇಡೀ ಸಿಸ್ಟಮ್ ಅನ್ನು ರೀ-ಚೆಕ್ ಮಾಡಿ ಸರಿಪಡಿಸಲು ಸಿಎಂ ಡಿಕೆಶಿ ಆರ್ಡರ್ ಮಾಡಿದ್ದಾರೆ.

11.ಗ್ಯಾರಂಟಿ ಯೋಜನೆಗಳ ಅಗತ್ಯವಿಲ್ಲದ ಫಲಾನುಭವಿಗಳು ಸ್ವಯಂಪ್ರೇರಿತವಾಗಿ ಯೋಜನೆಗಳಿಂದ ಹೊರಬಂದು ಅರ್ಹರಿಗೆ ನೆರವಾಗಲು ಮುಂದಾದರೆ, ಅಂತಹವರನ್ನು ಗುರುತಿಸಿ ಪ್ರೋತ್ಸಾಹಿಸುವಂತೆ ಸೂಚಿಸಲಾಗಿದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular