ಮನೆಯಲ್ಲೇ ಅಥವಾ ಪರಿಚಯದವರಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದರೂ ಆರ್ಥಿಕ ಸಮಸ್ಯೆಯಿಂದ ಉನ್ನತ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿದ್ದರೆ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಫೌಂಡೇಶನ್ ಸಿಹಿಸುದ್ದಿ ನೀಡಿದೆ. ಆರ್ಥಿಕವಾಗಿ ಹಿಂದುಳಿದಿದ್ದರೂ ಪ್ರತಿಭೆಯಿಂದ ಮಿಂಚುತ್ತಿರುವ ವಿದ್ಯಾರ್ಥಿಗಳಿಗೆ ಎಸ್ಬಿಐ ಫೌಂಡೇಶನ್ ಭರ್ಜರಿ ಸಿಹಿಸುದ್ದಿ ನೀಡಿದೆ. ಎಸ್ಬಿಐ ಪ್ಲಾಟಿನಮ್ ಜುಬಿಲಿ ಆಶಾ ಸ್ಕಾಲರ್ಶಿಪ್ 2026 ಅಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಪದವಿ, ಸ್ನಾತಕೋತ್ತರ, MBBS, IIT, IIM ಹಾಗೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳವರೆಗೆ ₹15 ಸಾವಿರದಿಂದ ₹15 ಲಕ್ಷದವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳು 2026ರ ಸೆಪ್ಟೆಂಬರ್ 4ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಎಸ್ಬಿಐ ಪ್ಲಾಟಿನಮ್ ಜುಬಿಲಿ ಆಶಾ ಸ್ಕಾಲರ್ಶಿಪ್ 2026 (SBI Platinum Jubilee Asha Scholarship 2026) ಅನ್ನು ಘೋಷಿಸಿದ್ದು, ಶಾಲಾ ಹಂತದಿಂದ ಕಾಲೇಜು, ಐಐಟಿ, ಐಐಎಂ ಹಾಗೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳವರೆಗೆ ₹15 ಸಾವಿರದಿಂದ ₹15 ಲಕ್ಷದವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ಜಮೆ ಮಾಡಲಾಗುತ್ತದೆ.
25,707 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ
ಎಸ್ಬಿಐ ಫೌಂಡೇಶನ್ ಪ್ರಕಟಿಸಿರುವ ಮಾಹಿತಿಯಂತೆ, 2026-27ನೇ ಹಣಕಾಸು ವರ್ಷದಲ್ಲಿ ದೇಶದಾದ್ಯಂತ ಆರ್ಥಿಕವಾಗಿ ಹಿಂದುಳಿದ ವರ್ಗಗಳ 25,707 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಈ ಯೋಜನೆಗಾಗಿ ₹100 ಕೋಟಿ ಮೀಸಲಿಡಲಾಗಿದೆ.2022ರಲ್ಲಿ ಆರಂಭವಾದ ಆಶಾ ಸ್ಕಾಲರ್ಶಿಪ್ ಯೋಜನೆ, ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸುಗಳನ್ನು ನನಸು ಮಾಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ.
ಅರ್ಹತಾ ಮಾನದಂಡಗಳು
- ಕಳೆದ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75% ಅಂಕಗಳು ಅಥವಾ 7.5 CGPA ಪಡೆದಿರಬೇಕು.
- ಮಾನ್ಯತೆ ಪಡೆದ ಅಥವಾ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರಬೇಕು.
- ಶಾಲಾ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷದೊಳಗೆ ಇರಬೇಕು.
- ಕಾಲೇಜು ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ₹6 ಲಕ್ಷದೊಳಗೆ ಇರಬೇಕು.
ಎಷ್ಟು ವಿದ್ಯಾರ್ಥಿವೇತನ ಸಿಗಲಿದೆ?
ವಿದ್ಯಾರ್ಥಿಯ ಶಿಕ್ಷಣದ ಹಂತ ಮತ್ತು ಕೋರ್ಸ್ಗೆ ಅನುಗುಣವಾಗಿ ₹15 ಸಾವಿರದಿಂದ ₹15 ಲಕ್ಷದವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅರ್ಹತೆ ಪಡೆದ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳ್ಳುವವರೆಗೆ ಈ ನೆರವು ಮುಂದುವರಿಯುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ
2026ರ ಸೆಪ್ಟೆಂಬರ್ 4 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
- 9ರಿಂದ 12ನೇ ತರಗತಿ ವಿದ್ಯಾರ್ಥಿಗಳು
- ಪದವಿ (UG) ವಿದ್ಯಾರ್ಥಿಗಳು
- ಸ್ನಾತಕೋತ್ತರ (PG) ವಿದ್ಯಾರ್ಥಿಗಳು
- MBBS ವಿದ್ಯಾರ್ಥಿಗಳು
- IIT ವಿದ್ಯಾರ್ಥಿಗಳು
- IIM ವಿದ್ಯಾರ್ಥಿಗಳು
- ವಿದೇಶದಲ್ಲಿ ಸ್ನಾತಕೋತ್ತರ (Masters) ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳು
ಅರ್ಹ ವಿದ್ಯಾರ್ಥಿಗಳು SBI Asha Scholarship ಅಧಿಕೃತ ವೆಬ್ಸೈಟ್ನಲ್ಲಿ ತಮ್ಮ ಅರ್ಹತೆಯನ್ನು ಪರಿಶೀಲಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

