ಬೆಂಗಳೂರು : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಕೆಡರ್ನ ಒಟ್ಟು 8,176 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರವು ಅನುಮತಿ ನೀಡಿದೆ. ಈ ಕುರಿತು ಡಿಜಿ ಮತ್ತು ಐಜಿಪಿ ಕಚೇರಿಯಿಂದ ಮಾರ್ಚ್ 4, 2026 ರಂದು ಅಧಿಕೃತ ಆದೇಶ ಹೊರಬಿದ್ದಿದೆ.
ಹೌದು. ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ಸೇರಬಯಸುವ ಯುವಜನತೆಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಖಾಲಿ ಇರುವ ಒಟ್ಟು 8,176 ವಿವಿಧ ಪೊಲೀಸ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಇಲಾಖೆಯು ಅಧಿಕೃತ ಪ್ರಕ್ರಿಯೆ ಆರಂಭಿಸಿದೆ. ವಿಶೇಷವಾಗಿ, ಪರಿಷ್ಕೃತ ಮೀಸಲಾತಿ ನಿಯಮಗಳ ಅನ್ವಯ ಈ ಬೃಹತ್ ನೇಮಕಾತಿ ನಡೆಯಲಿದ್ದು, ನಾಗರಿಕ (Civil), ಸಶಸ್ತ್ರ (Armed), ಮತ್ತು KSRP ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. ಮಾರ್ಚ್ 5ರೊಳಗೆ ಹುದ್ದೆಗಳ ವರ್ಗೀಕರಣ ಪಟ್ಟಿ ಸಿದ್ಧಪಡಿಸಲು ಡಿಜಿ ಮತ್ತು ಐಜಿಪಿ ಕಚೇರಿಯು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಶೀಘ್ರದಲ್ಲೇ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆಯಿದೆ.
ಹುದ್ದೆಗಳ ವಿವರ:
| ಕ್ರಮ ಸಂಖ್ಯೆ | ಹುದ್ದೆಯ ಹೆಸರು | ಕಲ್ಯಾಣ ಕರ್ನಾಟಕ | ಕಲ್ಯಾಣ ಕರ್ನಾಟಕೇತರ | ಒಟ್ಟು ಹುದ್ದೆಗಳು |
| 01 | ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ (DSI) | 05 | 15 | 20 |
| 02 | ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (APC) | 275 | 1375 | 1650 |
| 03 | ನಾಗರಿಕ ಪೊಲೀಸ್ ಕಾನ್ಸ್ಟೇಬಲ್ (Civil) | 610 | 3500 | 4110 |
| 04 | ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ (KSRP) | 532 | 1500 | 2032 |
| 05 | ಪೊಲೀಸ್ ಕಾನ್ಸ್ಟೇಬಲ್ (KSISF) | 364 | – | 364 |
| ಒಟ್ಟು | 8176 |
ಮುಖ್ಯಾಂಶಗಳು:
- ಮೀಸಲಾತಿ ಬದಲಾವಣೆ: ಪರಿಶಿಷ್ಟ ಜಾತಿ (SC) ಮೀಸಲಾತಿಯನ್ನು ಶೇ. 15 ರಿಂದಶೇ. 17 ಕ್ಕೆ ಮತ್ತು ಪರಿಶಿಷ್ಟ ಪಂಗಡ (ST) ಮೀಸಲಾತಿಯನ್ನು ಶೇ. 3 ರಿಂದಶೇ. 7 ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ, ಈ ಹೊಸ ನಿಯಮದಂತೆ ಹುದ್ದೆಗಳ ವರ್ಗೀಕರಣ ಮಾಡಲು ಸೂಚಿಸಲಾಗಿದೆ.
- ಹೈಕೋರ್ಟ್ ಆದೇಶ: ಮೀಸಲಾತಿ ಕುರಿತು ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ಮಧ್ಯಂತರ ಆದೇಶವನ್ನು ಪರಿಗಣಿಸಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಸರ್ಕಾರ ನಿರ್ದೇಶಿಸಿದೆ.
- ಗಡುವು: ಎಲ್ಲಾ ಘಟಕಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಹುದ್ದೆಗಳ ವರ್ಗೀಕರಣ ಪಟ್ಟಿಯನ್ನು (Rooster Points) ಸಿದ್ಧಪಡಿಸಿ ಮಾರ್ಚ್ 5, 2026 ರೊಳಗಾಗಿ ನೇಮಕಾತಿ ವಿಭಾಗಕ್ಕೆ ಸಲ್ಲಿಸಬೇಕೆಂದು ಡಿಜಿ ಮತ್ತು ಐಜಿಪಿ ಅವರು ಆದೇಶಿಸಿದ್ದಾರೆ.



