HomeLatest Newsವೇಗದ ಟಿ20 ವಿಶ್ವಕಪ್ ಶತಕ ಚಚ್ಚಿದ ಫಿನ್ ಅಲೆನ್; ಕೇವಲ 77 ಎಸೆತಗಳಲ್ಲಿ ಆಫ್ರಿಕಾ ಟಾರ್ಗೆಟ್...

ವೇಗದ ಟಿ20 ವಿಶ್ವಕಪ್ ಶತಕ ಚಚ್ಚಿದ ಫಿನ್ ಅಲೆನ್; ಕೇವಲ 77 ಎಸೆತಗಳಲ್ಲಿ ಆಫ್ರಿಕಾ ಟಾರ್ಗೆಟ್ ಚೇಸ್ ಮಾಡಿ ಗೆದ್ದು ಫೈನಲ್ ತಲುಪಿದ ಕಿವೀಸ್

ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ 9 ವಿಕೆಟ್ ಗಳ ಜಯಭೇರಿ ಬಾರಿಸಿ ಫೈನಲ್ ತಲುಪಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆರಿಸಿಕೊಂಡು ಎದುರಾಳಿ ದಕ್ಷಿಣ ಆಫ್ರಿಕಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತ್ತು. ಅದರಂತೆ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿ ನ್ಯೂಜಿಲೆಂಡ್ ತಂಡಕ್ಕೆ 170 ರನ್ ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಕೇವಲ 12.5 ಓವರ್ ಗಳಲ್ಲಿ ಬೆನ್ನಟ್ಟಿದ ನ್ಯೂಜಿಲೆಂಡ್ 1 ವಿಕೆಟ್ ನಷ್ಟಕ್ಕೆ 173 ರನ್ ಚಚ್ಚಿದೆ.

ಆಫ್ರಿಕಾ ಇನ್ನಿಂಗ್ಸ್: ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಕೇವಲ 12 ರನ್ ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 10 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರೆ, ಬೆನ್ನಲ್ಲೇ ಕಣಕ್ಕಿಳಿದ ರಯಾನ್ ರಿಕಲ್ಟನ್ ಡಕ್ ಔಟ್ ಆದರು. ಬಳಿಕ ಮೂರನೇ ವಿಕೆಟ್ ಗೆ ಜೊತೆಯಾದ ಆರಂಭಿಕ ಆಟಗಾರ ಏಡನ್ ಮಾರ್ಕಂ ಹಾಗೂ ಡಿವಾಲ್ಡ್ ಬ್ರೆವೀಸ್ 43 ರನ್ ಗಳ ಜೊತೆಯಾಟ ನೀಡಿದರು. 18 ರನ್ ಕಳೆಹಾಕಿದ್ದ ಮಾರ್ಕಂ ವಿಕೆಟ್ ಒಪ್ಪಿಸಿದರೆ, ನಂತರ ಕಣಕ್ಕಿಳಿದ ಡೇವಿಡ್ ಮಿಲ್ಲರ್ 6 ರನ್ ಕಲೆಹಾಕಿ ಔಟ್ ಆದರು. ಬೆನ್ನಲ್ಲೇ ನೆಲಕಚ್ಚಿ ಆಟವಾಡುತ್ತಿದ್ದ ಡಿವಾಲ್ಡ್ ಬ್ರೇವೀಸ್ 34 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಸಂದರ್ಭದಲ್ಲಿ ಒಂದಾದ ಟ್ರಿಸ್ಟನ್ ಸ್ಟಬ್ಸ್ ಹಾಗೂ ಮರ್ಕೊ ಯಾನ್ಸನ್ 73 ರನ್ ಗಳ ಅಮೂಲ್ಯ ಜೊತೆಯಾಟವಾಡಿದರು. ಸ್ಟಬ್ಸ್ 29 ರನ್ ಕಲೆಹಾಕಿದರೆ, ವಿಕೆಟ್ ಬಿದ್ದಾಗ ತಾಳ್ಮೆಯ ಆಟವಾಡಿ ಅಂತಿಮ ಹಂತದಲ್ಲಿ ಅಗತ್ಯವಿದ್ದ ಅಬ್ಬರದ ಬ್ಯಾಟಿಂಗ್ ಮಾಡಿದ ಯಾನ್ಸನ್ 30 ಎಸೆತಗಳಲ್ಲಿ ಅಜೇಯ 55 ರನ್ ಬಾರಿಸಿದರು.ಇನ್ನುಳಿದಂತೆ ಕಾರ್ಬಿನ್ ಬಾಷ್ 2, ಕಗಿಸೋ ರಬಾಡ ಡಕ್ ಔಟ್ ಹಾಗೂ ಕೇಶವ್ ಮಹಾರಾಜ್ ಅಜೇಯ 1 ರನ್ ಬಾರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ, ಮ್ಯಾಟ್ ಹೆನ್ರಿ ಹಾಗೂ ಮೆಕ್ ಕಾನ್ಷಿ ತಲಾ 2 ವಿಕೆಟ್ ಪಡೆದರೆ, ಲಾಕಿ ಫರ್ಗ್ಯುಸನ್ ಹಾಗೂ ಜೇಮ್ಸ್ ನಿಶಮ್ ತಲಾ ಒಂದೊಂದು ವಿಕೆಟ್ ಪಡೆದರು.

ನ್ಯೂಜಿಲೆಂಡ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಫಿನ್ ಅಲೆನ್ ಹಾಗೂ ಟಿಮ್ ಸೈಫರ್ಟ್ ಜೋಡಿ 55 ಎಸೆತಗಳಲ್ಲಿ 117 ರನ್ ಬಾರಿಸಿ ಭದ್ರ ಬುನಾದಿ ಹಾಕಿಕೊಟ್ಟಿತು. ಟಿಮ್ ಸೈಫರ್ಟ್ 33 ಎಸೆತಗಳಲ್ಲಿ 58 ರನ್ ಬಾರಿಸಿದರೆ, ಫಿನ್ ಅಲೆನ್ 33 ಎಸೆತಗಳಲ್ಲಿ 10 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ 100 ರನ್ ಸಿಡಿಸಿದರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ದಾಖಲಾದ ಅತಿ ವೇಗದ ಶತಕದ ದಾಖಲೆಯಾಗಿದೆ. ಇನ್ನುಳಿದಂತೆ ರಚಿನ್ ರವೀಂದ್ರ ಅಜೇಯ 13 ರನ್ ಕಲೆಹಾಕಿದರು.

ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular