HomeLatest Newsಫ್ರಿಡ್ಜ್ ಇಲ್ಲದಿದ್ದರೂ ಹಾಲು ಕೆಡದಂತೆ ಇಡುತ್ತಿದ್ದ ಅಜ್ಜಿಯಂದಿರ ಸೂಪರ್ ಸೀಕ್ರೆಟ್‌ಗಳು ಇಲ್ಲಿವೆ

ಫ್ರಿಡ್ಜ್ ಇಲ್ಲದಿದ್ದರೂ ಹಾಲು ಕೆಡದಂತೆ ಇಡುತ್ತಿದ್ದ ಅಜ್ಜಿಯಂದಿರ ಸೂಪರ್ ಸೀಕ್ರೆಟ್‌ಗಳು ಇಲ್ಲಿವೆ

ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಹಾಲು ಕೆಡದಂತೆ ಎತ್ತಿಡಲು ಫ್ರಿಡ್ಜ್ (Fridge) ಇದ್ದೇ ಇರುತ್ತದೆ. ಹಾಲು ತಂದ ತಕ್ಷಣ ರೆಫ್ರಿಜರೇಟರ್ ಒಳಗೆ ತಳ್ಳುವುದು ನಮಗೆಲ್ಲಾ ಒಂದು ಸಾಮಾನ್ಯ ರೂಢಿ. ಆದರೆ ಇಂದಿಗೆ ಸುಮಾರು 60-100 ವರ್ಷಗಳ ಹಿಂದೆ, ಅಂದರೆ ಈ ಫ್ರಿಡ್ಜ್‌ಗಳ ಕಾಟವೇ ಇಲ್ಲದ ಆ ಕಾಲದಲ್ಲಿ ನಮ್ಮ ಮುತ್ತಜ್ಜಿಯಂದಿರು ಹಾಲನ್ನು ಕೆಡದಂತೆ ಹೇಗೆ ಕಾಪಾಡುತ್ತಿದ್ದರು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದರಲ್ಲೂ ಧಗಧಗಿಸುವ ಬೇಸಿಗೆಯ ಬಿಸಿಲಿಗೆ ಹಾಲು ಕೆಲವೇ ಗಂಟೆಗಳಲ್ಲಿ ಒಡೆದು ಹೋಗುತ್ತದೆ. ಆದರೂ ಹಳೇ ಕಾಲದ ನಮ್ಮ ಹಿರಿಯರು ಯಾವುದೇ ಕರೆಂಟ್ ಇಲ್ಲದೆ, ಕೇವಲ ಪಕ್ಕಾ ನಾಟಿ ಮತ್ತು ನೈಸರ್ಗಿಕ ಮನೆಮದ್ದುಗಳ ಮೂಲಕವೇ ಹಾಲನ್ನು ದಿನಗಟ್ಟಲೆ ಫ್ರೆಶ್ ಆಗಿ ಇಡುತ್ತಿದ್ದರು ಆ ರೋಚಕ ಅಡುಗೆಮನೆ ರಹಸ್ಯಗಳು ಇಲ್ಲಿದೆ ನೋಡಿ:

ಮನೆಗೆ ತಂದ ತಕ್ಷಣ ಕುದಿಸುವ ಪದ್ಧತಿ

ಹಿಂದಿನ ಕಾಲದಲ್ಲಿ ಹಾಲು ಕರದು ಮನೆಗೆ ತಂದ ತಕ್ಷಣ ಅಥವಾ ಹೊರಗಿನಿಂದ ತಂದ ತಕ್ಷಣ ಮೊದಲು ಚೆನ್ನಾಗಿ ಕುದಿಸುತ್ತಿದ್ದರು. ಹೀಗೆ ಮಾಡುವುದರಿಂದ ಹಾಲಿನಲ್ಲಿರುವ, ಹಾಲು ಬೇಗನೆ ಕೆಡಲು ಕಾರಣವಾಗುವ ಬ್ಯಾಕ್ಟೀರಿಯಾಗಳು ನಾಶವಾಗುತ್ತಿದ್ದವು. ಕುದಿಸಿದ ನಂತರ ಹಾಲನ್ನು ಹಾಗೇ ಬಿಟ್ಟು ನೈಸರ್ಗಿಕವಾಗಿ ತಣ್ಣಗಾಗಲು ಬಿಡಲಾಗುತ್ತಿತ್ತು. ನಂತರ ಅದನ್ನು ಸ್ವಚ್ಛವಾದ ಸ್ಟೀಲ್ ಅಥವಾ ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿಡುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿ 8-10 ಗಂಟೆಗೊಮ್ಮೆ ಪದೇ ಪದೇ ಕುದಿಸುವುದು

ಹಾಲನ್ನು ಕೇವಲ ಒಮ್ಮೆ ಕುದಿಸಿ ಇಡುತ್ತಿರಲಿಲ್ಲ. ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ, ಪ್ರತಿ 8 ರಿಂದ 10 ಗಂಟೆಗಳಿಗೊಮ್ಮೆ ಹಾಲನ್ನು ಮರಳಿ ಒಲೆಯ ಮೇಲಿಟ್ಟು ಕುದಿಸುವ ಅಭ್ಯಾಸ ಇತ್ತು. ಕೆಲವೊಮ್ಮೆ ದಿನಕ್ಕೆ ಮೂರು ಬಾರಿಯೂ ಕುದಿಸುತ್ತಿದ್ದರು. ಈ ರೀತಿ ಪದೇ ಪದೇ ಬಿಸಿ ಮಾಡುವುದರಿಂದ ಬ್ಯಾಕ್ಟೀರಿಯಾಗಳ ಬೆಳವಣಿಗೆ ಸಂಪೂರ್ಣವಾಗಿ ನಿಂತು ಹೋಗಿ, ಹಾಲು ದೀರ್ಘಕಾಲದವರೆಗೆ ಫ್ರೆಶ್ ಆಗಿರುತ್ತಿತ್ತು.

ನೀರಿನ ತಟ್ಟೆ ಮತ್ತು ಮಣ್ಣಿನ ಪಾತ್ರೆಗಳ ಮ್ಯಾಜಿಕ್

ಹಿಂದಿನ ಕಾಲದ ಮನೆಗಳ ವಿನ್ಯಾಸವೇ ಹಾಲನ್ನು ಸಂರಕ್ಷಿಸಲು ಪೂರಕವಾಗಿರುತ್ತಿತ್ತು. ದಪ್ಪನೆಯ ಮಣ್ಣಿನ ಗೋಡೆಗಳು, ಒಳಗೆ ಗಾಳಿಯಾಡುವ ಕೊಠಡಿಗಳು ಮತ್ತು ತಂಪಾದ ನೆಲಗಳು ಒಳಾಂಗಣದ ತಾಪಮಾನವನ್ನು ಕಡಿಮೆ ಇರಿಸುತ್ತಿದ್ದವು. ಹಿರಿಯರು ಹಾಲಿನ ಪಾತ್ರೆಯನ್ನು ತಣ್ಣಗಿನ ನೀರಿನಿಂದ ತುಂಬಿದ ದೊಡ್ಡ ತಟ್ಟೆಯ ಮಧ್ಯದಲ್ಲಿ ಇಡುತ್ತಿದ್ದರು. ಇದು ಹಾಲಿಗೆ ನ್ಯಾಚುರಲ್ ಕೂಲಿಂಗ್ ಎಫೆಕ್ಟ್ ನೀಡುತ್ತಿತ್ತು. ಇನ್ನು ಕೆಲವರು ಹಾಲನ್ನು ಮಣ್ಣಿನ ಪಾತ್ರೆಯಲ್ಲಿಡುತ್ತಿದ್ದರು. ಮಣ್ಣಿನ ಮಡಕೆಯ ಮೇಲ್ಮೈಯಿಂದ ನೀರು ನಿಧಾನವಾಗಿ ಆವಿಯಾಗುವುದರಿಂದ (Evaporation), ಹಾಲಿನ ಪಾತ್ರೆ ಸದಾ ತಂಪಾಗಿರುತ್ತಿತ್ತು.

ಸಣ್ಣಪುಟ್ಟ ನಿಯಮಗಳು ಮತ್ತು ಅಪ್ಪಟ ಸ್ವಚ್ಛತೆ

ಹಾಲನ್ನು ಇಡುವ ಜಾಗ ಮತ್ತು ಬಳಸುವ ಪಾತ್ರೆಗಳ ಸ್ವಚ್ಛತೆಗೆ ಮೊದಲ ಆದ್ಯತೆ ಇರುತ್ತಿತ್ತು. ಧೂಳು ಮತ್ತು ನೊಣಗಳು ಬೀಳದಂತೆ ಹಾಲನ್ನು ಯಾವಾಗಲೂ ಜಾಲರಿಯಿಂದ ಅಥವಾ ಶುದ್ಧ ತಟ್ಟೆಯಿಂದ ಮುಚ್ಚಿಡಲಾಗುತ್ತಿತ್ತು. ಹಾಲು ಕರೆಯುವ ಪಾತ್ರೆಯಿಂದ ಹಿಡಿದು ಕಾಯಿಸುವ ಪಾತ್ರೆಯವರೆಗೆ ಎಲ್ಲವೂ ಪಕ್ಕಾ ಕ್ಲೀನ್ ಇರುತ್ತಿದ್ದವು. ಮುಖ್ಯವಾಗಿ, ಒಂದು ವೇಳೆ ಹೊಸ ಹಾಲನ್ನು ಹಳೆಯ ಹಾಲಿನೊಂದಿಗೆ ಬೆರೆಸಬೇಕಾಗಿ ಬಂದರೆ, ಮೊದಲು ಎರಡನ್ನೂ ಪ್ರತ್ಯೇಕವಾಗಿ ಚೆನ್ನಾಗಿ ಕುದಿಸಿ, ಆಮೇಲಷ್ಟೇ ಒಂದಕ್ಕೊಂದು ಮಿಕ್ಸ್ ಮಾಡುತ್ತಿದ್ದರು.

ಕೆನೆ ಮತ್ತು ತುಪ್ಪದ ತಯಾರಿ

ಹಾಲನ್ನು ಪದೇ ಪದೇ ಕುದಿಸುವುದರಿಂದ ಅದರ ಮೇಲೆ ದಪ್ಪನೆಯ ಕೆನೆ (Cream) ರೂಪುಗೊಳ್ಳುತ್ತಿತ್ತು. ಈ ಕೆನೆಯನ್ನು ನಮ್ಮ ಅಜ್ಜಿಯಂದಿರು ದಿನಾಲೂ ತೆಗೆದು ಒಂದು ಪಾತ್ರೆಯಲ್ಲಿ ಶೇಖರಿಸಿಡುತ್ತಿದ್ದರು. ಇದನ್ನು ವಾರದ ಕೊನೆಯಲ್ಲಿ ಕಡಿದು ಬೆಣ್ಣೆ ಹಾಗೂ ಅದರಿಂದ ಅಪ್ಪಟ ಮನೆಯಲ್ಲೇ ಮಾಡಿದ ಸುವಾಸನೆಭರಿತ ತುಪ್ಪವನ್ನು ತಯಾರಿಸುತ್ತಿದ್ದರು. ಈ ಮೂಲಕ ಹಾಲು ವೇಸ್ಟ್ ಆಗದಂತೆ ಸಂಪೂರ್ಣವಾಗಿ ಬಳಕೆಯಾಗುತ್ತಿತ್ತು.

ವಿದ್ಯುತ್ ಕಡಿತಗೊಂಡಾಗ ನಿಮಗೂ ಹೆಲ್ಪ್ ಆಗುತ್ತೆ:

ಇಂದು ಬಹುತೇಕ ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇದ್ದರೂ ಸಹ, ಬೇಸಿಗೆಯಲ್ಲಿ ದೀರ್ಘಕಾಲ ವಿದ್ಯುತ್ ಕಡಿತಗೊಂಡಾಗ (Power Cut) ಅಥವಾ ಹಳ್ಳಿಗಳಿಗೆ ಹೋದಾಗ ಹಾಲನ್ನು ಸಂರಕ್ಷಿಸುವುದು ದೊಡ್ಡ ಸವಾಲಾಗುತ್ತದೆ. ಅಂತಹ ತುರ್ತು ಸಂದರ್ಭಗಳಲ್ಲಿ ನಮ್ಮ ಹಿರಿಯರ ಈ ಸಾಂಪ್ರದಾಯಿಕ ಐಡಿಯಾಗಳನ್ನು ಬಳಸಿ ನೀವು ಕೂಡ ಹಾಲನ್ನು ಕೆಡದಂತೆ ಆರಾಮವಾಗಿ ತಾಜಾವಾಗಿ ಇಡಬಹುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular