HomeLatest Newsಜುರಾಸಿಕ್ ಪಾರ್ಕ್ ಖ್ಯಾತಿಯ ಖ್ಯಾತ ನಟ ಸ್ಯಾಮ್ ನೀಲ್ ಇನ್ನಿಲ್ಲ: ಚಿತ್ರರಂಗದಲ್ಲಿ ಶೋಕದ ಅಲೆ

ಜುರಾಸಿಕ್ ಪಾರ್ಕ್ ಖ್ಯಾತಿಯ ಖ್ಯಾತ ನಟ ಸ್ಯಾಮ್ ನೀಲ್ ಇನ್ನಿಲ್ಲ: ಚಿತ್ರರಂಗದಲ್ಲಿ ಶೋಕದ ಅಲೆ

ಖ್ಯಾತ ಹಾಲಿವುಡ್ ಚಿತ್ರ ‘ಜುರಾಸಿಕ್ ಪಾರ್ಕ್’ ಮೂಲಕ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದ ಹಿರಿಯ ನಟ ಸ್ಯಾಮ್ ನೀಲ್ (೭೮) ಅವರು ಸೋಮವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಿಧನರಾಗಿದ್ದಾರೆ. ನಟನ ಅಗಲಿಕೆಯ ಸುದ್ದಿಯನ್ನು ಅವರ ಕುಟುಂಬಸ್ಥರು ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದು, ಸ್ಯಾಮ್ ಅವರು ಕೊನೆಯ ಕ್ಷಣದಲ್ಲಿ ಕುಟುಂಬ ಸದಸ್ಯರ ನಡುವೆ ನೆಮ್ಮದಿಯಿಂದ ಕಣ್ಣು ಮುಚ್ಚಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸ್ಯಾಮ್ ನೀಲ್ ಅವರು ‘ಆಂಜಿಯೋಇಮ್ಯುನೊಬ್ಲಾಸ್ಟಿಕ್ ಟಿ-ಸೆಲ್ ಲಿಂಫೋಮಾ’ ಎಂಬ ಅಪರೂಪದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ, ಅವರ ಸಾವು ಹಠಾತ್ ಆಗಿ ಸಂಭವಿಸಿದ್ದು, ಮರಣದ ಸಮಯದಲ್ಲಿ ಅವರು ಕ್ಯಾನ್ಸರ್ ಮುಕ್ತರಾಗಿದ್ದರು ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ. ಸಿಡ್ನಿಯ ಸೇಂಟ್ ವಿನ್ಸೆಂಟ್ಸ್ ಪ್ರೈವೇಟ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ನೀಡಿದ ಆರೈಕೆಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ಮರಣದ ಕುರಿತು ಸ್ಯಾಮ್ ನೀಲ್ ಮಾತುಗಳು: ಕಾಯಿಲೆಯ ನಡುವೆಯೂ ಸ್ಯಾಮ್ ಅವರು ಜೀವನದ ಬಗ್ಗೆ ಸದಾ ಸಕಾರಾತ್ಮಕ ಚಿಂತನೆ ಹೊಂದಿದ್ದರು. ಕಳೆದ ವರ್ಷ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ನನಗೆ ಸಾವಿನ ಬಗ್ಗೆ ಯಾವುದೇ ಭಯವಿಲ್ಲ, ಆದರೆ ನಾನು ಮಾಡಬೇಕಾದ ಕೆಲಸಗಳು ಮತ್ತು ಸಿನಿಮಾ ಯೋಜನೆಗಳು ಇನ್ನೂ ಬಾಕಿ ಇರುವುದರಿಂದ ಸಾವು ಈಗಲೇ ಬಂದರೆ ಸ್ವಲ್ಪ ಬೇಸರವಾಗುತ್ತದೆ ಎಂದು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಐದು ದಶಕಗಳ ಅದ್ಭುತ ಸಿನಿಮಾ ಜರ್ನಿ: ನ್ಯೂಜಿಲೆಂಡ್ ಮೂಲದ ಸ್ಯಾಮ್ ನೀಲ್ ಅವರು ಚಿತ್ರರಂಗದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯರಾಗಿದ್ದರು. ‘ಮೈ ಬ್ರಿಲಿಯಂಟ್ ಕರಿಯರ್’, ‘ಡೆಡ್ ಕಾಮ್’ ಮತ್ತು ‘ದಿ ಪಿಯಾನೋ’ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ಅವರು, ಸ್ಟೀವನ್ ಸ್ಪಿಲ್ಬರ್ಗ್ ನಿರ್ದೇಶನದ ‘ಜುರಾಸಿಕ್ ಪಾರ್ಕ್’ ಚಿತ್ರದ ಡಾಕ್ಟರ್ ಅಲಾನ್ ಗ್ರಾಂಟ್ ಪಾತ್ರದ ಮೂಲಕ ವಿಶ್ವದಾದ್ಯಂತ ಮನೆಮಾತಾಗಿದ್ದರು.

ಬಾಕ್ಸ್ ಆಫೀಸ್ ಹಿಟ್ ಚಿತ್ರಗಳ ಜೊತೆಗೆ ‘ದಿ ಹಂಟ್ ಫಾರ್ ರೆಡ್ ಅಕ್ಟೋಬರ್’, ‘ಇನ್ ದಿ ಮೌತ್ ಆಫ್ ಮ್ಯಾಡ್ನೆಸ್’ ನಂತಹ ಚಿತ್ರಗಳಲ್ಲಿ ಹಾಗೂ ಕಿರುತೆರೆಯ ಜನಪ್ರಿಯ ಸರಣಿಗಳಾದ ‘ದಿ ಟ್ಯೂಡರ್ಸ್’ ಮತ್ತು ‘ಪೀಕಿ ಬ್ಲೈಂಡರ್ಸ್’ನಲ್ಲಿ ನಟಿಸುವ ಮೂಲಕ ತಮ್ಮ ಅದ್ಭುತ ಅಭಿನಯದ ಛಾಪು ಮೂಡಿಸಿದ್ದರು. ಹಿರಿಯ ನಟನ ನಿಧನಕ್ಕೆ ಜಾಗತಿಕ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular