HomeLatest NewsSHOCKING : ತರಗತಿಯಲ್ಲೇ ನೇಣು ಬಿಗಿದುಕೊಂಡು ಪದವಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ.!

SHOCKING : ತರಗತಿಯಲ್ಲೇ ನೇಣು ಬಿಗಿದುಕೊಂಡು ಪದವಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ.!

ತರಗತಿಯಲ್ಲೇ ಪದವಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್ ನ ಗಾಂಧಿನಗರ ಜಿಲ್ಲೆಯ ಕಾಲೇಜಿನಲ್ಲಿ ನಡೆದಿದೆ. 19 ವರ್ಷದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಶಿವಾನಿ ಅಹಿರ್ ಎಂದು ಗುರುತಿಸಲಾಗಿದೆ, ಪಠಾಣ್ ಜಿಲ್ಲೆಯ ನಿವಾಸಿ ಶಿವಾನಿ ಬಿಎ ಕೋರ್ಸ್ನ ಮೊದಲ ವರ್ಷದಲ್ಲಿ ಓದುತ್ತಿದ್ದರು ಮತ್ತು ಗಾಂಧಿನಗರದ ಸೆಕ್ಟರ್ -7 ರಲ್ಲಿರುವ ಜೆಎಂ ಚೌಧರಿ ಬಾಲಕಿಯರ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರು.

ಮೊದಲು ವಿದ್ಯಾರ್ಥಿನಿ ಹಾಸ್ಟೆಲ್ನಿಂದ ಕಾಣೆಯಾಗಿದ್ದಾಳೆ ಎಂದು ದೂರು ನೀಡಲಾಗಿತ್ತು. ಪೊಲೀಸರ ಪ್ರಕಾರ, ಬುಧವಾರ ಸಂಜೆ ಶಿವಾನಿ ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದಾಳೆ. ನಂತರ ಕಾಲೇಜು ಆಡಳಿತ ಮಂಡಳಿ ಮತ್ತು ಭದ್ರತಾ ತಂಡ ಕ್ಯಾಂಪಸ್ನಲ್ಲಿ ಹುಡುಕಾಟ ಆರಂಭಿಸಿತು. ಹುಡುಕಾಟ ವಿಫಲವಾದಾಗ, ಕಾಲೇಜು ತಕ್ಷಣವೇ ಶಿವಾನಿಯ ಕುಟುಂಬಕ್ಕೆ ಮಾಹಿತಿ ನೀಡಿತು. ಆಕೆಯ ಕುಟುಂಬ ಸದಸ್ಯರು ಕ್ಯಾಂಪಸ್ಗೆ ಧಾವಿಸಿದರು ಮತ್ತು ಪೊಲೀಸರಿಗೂ ಮಾಹಿತಿ ನೀಡಲಾಯಿತು.

ಖಾಲಿಯಿದ್ದ ತರಗತಿಯೊಳಗೆ ಶವ ಪತ್ತೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದ್ಯಾರ್ಥಿನಿಗಾಗಿ ತೀವ್ರವಾಗಿ ಹುಡುಕಾಡಿದ ನಂತರ ಕಾಲೇಜು ಆವರಣದಲ್ಲಿರುವ ಖಾಲಿ ತರಗತಿಯೊಳಗೆ ಶಿವಾನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಶಿವಾನಿ ಖಾಲಿಯಿದ್ದ ತರಗತಿಗೆ ಪ್ರವೇಶಿಸುತ್ತಿರುವುದನ್ನು ತೋರಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೂ ಮುನ್ನ ಕೋಣೆಯೊಳಗೆ ಆಕೆಯ ಚಲನವಲನಗಳನ್ನು ದೃಶ್ಯಗಳು ಸೆರೆಹಿಡಿದಿವೆ. ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿರುವ ಪೊಲೀಸರು ಗಾಂಧಿನಗರ ಸೆಕ್ಟರ್ 7 ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ ದಿವ್ಯಾ ಪ್ರಕಾಶ್ ಗೋಹಿಲ್ ತಿಳಿಸಿದ್ದಾರೆ. “ವಿಚಾರಣೆಯ ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular