HomeLatest Newsಐಟಿ ಹಬ್‌ನಲ್ಲಿ ಬಾಡಿಗೆಯದ್ದೇ ಅಬ್ಬರ: ಬೆಂಗಳೂರಿನ ಈ ಏರಿಯಾದಲ್ಲಿ 2BHK ಫ್ಲ್ಯಾಟ್ ಬೆಲೆ ಬರೋಬ್ಬರಿ 70,000...

ಐಟಿ ಹಬ್‌ನಲ್ಲಿ ಬಾಡಿಗೆಯದ್ದೇ ಅಬ್ಬರ: ಬೆಂಗಳೂರಿನ ಈ ಏರಿಯಾದಲ್ಲಿ 2BHK ಫ್ಲ್ಯಾಟ್ ಬೆಲೆ ಬರೋಬ್ಬರಿ 70,000 ರೂ

ಬೆಂಗಳೂರು: ಕನಸುಗಳ ನಗರಿ, ಉದ್ಯಾನ ನಗರಿ ಬೆಂಗಳೂರಿಗೆ ಕೆಲಸ ಅರಸಿ ಬರುವ ಹೊರರಾಜ್ಯದ ಯುವಕ-ಯುವತಿಯರು ಮೊದಲು ಎದುರಿಸುವ ಸವಾಲೇ ಬಾಡಿಗೆ ಮನೆ. ಆದರೆ, ಸಿಲಿಕಾನ್ ಸಿಟಿಯ ಬಾಡಿಗೆ ದರಗಳು ಈಗ ಜನಸಾಮಾನ್ಯರ ಕೈಗೆಟುಕದ ಮಟ್ಟಕ್ಕೆ ಏರುತ್ತಿವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.ರಾಜಧಾನಿಯ ಐಟಿ ಕಾರಿಡಾರ್‌ಗಳಲ್ಲಿ ಮನೆ ಬಾಡಿಗೆ ದರ ಗಗನಕ್ಕೇರುತ್ತಿರುವುದು ಹೊಸ ಸುದ್ದಿಯಲ್ಲದಿದ್ದರೂ ಇತ್ತೀಚಿನ ಒಂದು ಸಾಮಾಜಿಕ ಜಾಲತಾಣದ ಪೋಸ್ಟ್ ಬೆಂಗಳೂರಿನ ಜೀವನದ ಕಹಿ ವಾಸ್ತವವನ್ನು ಮತ್ತೆ ಮುನ್ನೆಲೆಗೆ ತಂದಿದೆ.

ತಕ್ಷಣವೇ ಈ ಬಗ್ಗೆ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ಬೆಂಗಳೂರಿನ ಬಾಡಿಗೆ ದರಗಳು ಈಗ ಮುಂಬೈ ನಗರಕ್ಕೂ ಪೈಪೋಟಿ ನೀಡುವಂತಿವೆ. ಕೇವಲ 2BHK ಮನೆಗೆ 70 ಸಾವಿರ ರೂ. ಕೇಳುವುದರ ಅರ್ಥವೇನು?” ಎಂದು ಕಿಡಿಕಾರಿದ್ದಾರೆ. ಜನವರಿ 20ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಕೇವಲ ಮೂರೇ ದಿನಗಳಲ್ಲಿ 35 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಪೂರ್ವ ಬೆಂಗಳೂರಿನ ಪ್ರಮುಖ ಐಟಿ ಹಬ್ ಆಗಿರುವ ಕಾಡುಬೀಸನಹಳ್ಳಿಯಲ್ಲಿ ಮನೆ ಹುಡುಕುತ್ತಿದ್ದ ಇವರಿಗೆ ಎದುರಾದ ಈ ಅನುಭವ ಈಗ ಸೋಷಿಯಲ್ ಮೀಡಿಯಾ ‘X’ ನಲ್ಲಿ ಸಂಚಲನ ಮೂಡಿಸಿದೆ. ಯಾವುದೇ ವಿಶೇಷ ಐಷಾರಾಮಿ ಸೌಲಭ್ಯಗಳಿಲ್ಲದ, ಕನಿಷ್ಠ ಮೂಲಸೌಕರ್ಯ ಹಾಗೂ ನಿತ್ಯದ ಟ್ರಾಫಿಕ್ ಸಮಸ್ಯೆಯನ್ನೇ ಮೈವೆತ್ತಿರುವ ಔಟರ್ ರಿಂಗ್ ರೋಡ್ (ORR) ಭಾಗದ ಸಾಮಾನ್ಯ ಫ್ಲ್ಯಾಟ್‌ಗೆ ಇಷ್ಟು ದೊಡ್ಡ ಮೊತ್ತದ ಬೇಡಿಕೆ ಇಟ್ಟಿರುವುದು ಇಡೀ ನಗರವಾಸಿಗಳನ್ನು ಬೆಚ್ಚಿಬೀಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

70,000 ರೂ. ಬಾಡಿಗೆ ಏಕಿಷ್ಟು ಅಚ್ಚರಿ ಮೂಡಿಸಿದೆ? ವಾಸ್ತವವಾಗಿ ಕಾಡುಬೀಸನಹಳ್ಳಿ ಐಟಿ ಉದ್ಯೋಗಿಗಳಿಗೆ ಕೆಲಸದ ಸ್ಥಳಕ್ಕೆ ಸಮೀಪವಿದೆಯೇ ಹೊರತು, ಇದು ಇಂದಿರಾನಗರ ಅಥವಾ ಕೋರಮಂಗಲದಂತಹ ಶ್ರೀಮಂತ ಪ್ರದೇಶವಲ್ಲ. ಕೇವಲ ಎರಡು ವರ್ಷಗಳ ಹಿಂದೆ ಇಲ್ಲಿ ಇದರ ಅರ್ಧದಷ್ಟು ಬೆಲೆಗೆ ಮನೆಗಳು ಲಭ್ಯವಿದ್ದವು. ಆದರೆ ಈಗ ಕನಿಷ್ಠ ಸೌಕರ್ಯಗಳಿರುವ ನೀರಿನ ಅಭಾವದಂತಹ ಸಮಸ್ಯೆಗಳ ನಡುವೆಯೂ ಈ ಮಟ್ಟದ ಬೆಲೆ ಏರಿಕೆ ಕಂಡಿರುವುದು ಬಾಡಿಗೆದಾರರ ಪಾಲಿಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿದೆ. ಈ ಘಟನೆಯು ಕೇವಲ ಒಬ್ಬ ಯುವತಿಯ ಅಳಲಲ್ಲ, ಬದಲಿಗೆ ಬೆಂಗಳೂರಿನ ಆಕಾಶ ಮುಟ್ಟುತ್ತಿರುವ ಬಾಡಿಗೆ ದರಕ್ಕೆ ಹಿಡಿದ ಕನ್ನಡಿಯಂತಿದೆ.

ನೆಟ್ಟಿಗರ ಆಕ್ರೋಶ ಮತ್ತು ಸಲಹೆಗಳು:

ರಾಜ್ವಿ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಬೆಂಗಳೂರಿನ ಬಾಡಿಗೆದಾರರ ನೋವಿನ ಕಟ್ಟೆ ಒಡೆದಿದೆ. ನೆಟ್ಟಿಗರು ಕೇವಲ ಕಾಮೆಂಟ್ ಮಾಡಿಲ್ಲ, ಬದಲಿಗೆ ರಾಜಧಾನಿಯ ಬಾಡಿಗೆ ಮಾಫಿಯಾದ ಮುಖವಾಡವನ್ನು ಹೀಗೆ ಕಳಚಿದ್ದಾರೆ:

ಕೇವಲ 70 ಸಾವಿರ ಬಾಡಿಗೆ ಕೊಟ್ಟರೆ ಮುಗಿಯಲಿಲ್ಲ ಅದರ ಜೊತೆಗೆ ಪ್ರತಿ ತಿಂಗಳು 6,000 ರಿಂದ 7,000 ರೂ. ವರೆಗೆ ಮೇಂಟೆನೆನ್ಸ್ (Maintenance) ಚಾರ್ಜ್ ನೀಡಬೇಕು. ಇದು ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಹಾಕುವ ಡಬಲ್ ಶಾಕ್ ಎನ್ನುತ್ತಿದ್ದಾರೆ ಜನ.

ಒಬ್ಬ ಬಳಕೆದಾರರು ವ್ಯಂಗ್ಯವಾಗಿ ಹೀಗೆ ಹೇಳಿದ್ದಾರೆ ಬೆಂಗಳೂರು ಈಗ ಸಂಬಳ ಕೊಡುವಾಗ ಬೆಂಗಳೂರು ಆಗಿರುತ್ತೆ, ಆದರೆ ಬಾಡಿಗೆ ವಸೂಲಿ ಮಾಡುವಾಗ ಮಾತ್ರ ಮುಂಬೈ ಆಗಿ ಬದಲಾಗುತ್ತೆ ಇದು ಇಲ್ಲಿನ ಸ್ಯಾಲರಿ ಮತ್ತು ಖರ್ಚಿನ ನಡುವಿನ ಅಸಮತೋಲನಕ್ಕೆ ಹಿಡಿದ ಕನ್ನಡಿ.

70 ಸಾವಿರ ಬಾಡಿಗೆ ಅಂದ್ರೆ ಮನೆಯಲ್ಲಿ ಫರ್ನಿಚರ್ ಜೊತೆ ಮಾನಸಿಕ ಹಿಂಸೆ (Trauma) ಕೂಡ ಡೀಲ್‌ನಲ್ಲಿ ಸೇರಿಕೊಂಡಿದೆಯೇ? ಎಂದು ನೆಟ್ಟಿಗರು ಗಹಗಹಿಸಿದ್ದಾರೆ. ಅಷ್ಟೊಂದು ಹಣ ಕೊಟ್ಟರೂ ಟ್ರಾಫಿಕ್ ಮತ್ತು ನೀರಿನ ಸಮಸ್ಯೆಯ ಉಚಿತ ಉಡುಗೊರೆ ಇದ್ದೇ ಇರುತ್ತದೆ ಎಂಬುದು ಇವರ ವಾದ.

ತಿಂಗಳಿಗೆ 70 ಸಾವಿರ ರೂಪಾಯಿಯನ್ನು ಬೇರೆಯವರ ಜೇಬಿಗೆ ಹಾಕುವ ಬದಲು ಬ್ಯಾಂಕ್‌ನಿಂದ ಸಾಲ ಪಡೆದು ಆ ಹಣವನ್ನು EMI ರೂಪದಲ್ಲಿ ಪಾವತಿಸಿದರೆ ಸ್ವಂತ ಮನೆಯಾದರೂ ಆಗುತ್ತದೆ ಎಂಬ ಬುದ್ಧಿವಂತಿಕೆಯ ಸಲಹೆಗಳು ಹರಿದುಬಂದಿವೆ.

ಏರಿಯಾ ವೈಸ್ ಬಾಡಿಗೆ ಆಟ: ಬೆಂಗಳೂರಿನ ಎಲ್ಲೆಡೆ ಇದೇ ದರ ಇಲ್ಲ. ಪೂರ್ವ ಬೆಂಗಳೂರನ್ನು ಬಿಟ್ಟು ಸ್ವಲ್ಪ ದೂರ ಸರಿದರೆ 25-30 ಸಾವಿರಕ್ಕೆ ಒಳ್ಳೆಯ ಮನೆಗಳು ಸಿಗುತ್ತವೆ. ಕೆಲವು ಮಾಲೀಕರ ಅತಿಯಾದ ಆಸೆ ಇಡೀ ನಗರದ ಹೆಸರನ್ನು ಕೆಡಿಸುತ್ತಿದೆ ಎಂದು ಕೆಲವರು ವಾಸ್ತವದ ನೆನಪು ಮಾಡಿಕೊಟ್ಟಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular