ವಿವಾಹಿತ ದಂಪತಿಗಳ ನಡುವೆ ಪರಸ್ಪರ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಂಬಿಕೆ ಮತ್ತು ದೀರ್ಘಕಾಲೀನ ಸಂಬಂಧಗಳ ಬಗ್ಗೆ ಹಲವರಲ್ಲಿ ಕಳವಳ ಹೆಚ್ಚಿದೆ. ಇಂತಹ ಒಂದು ಆಘಾತಕಾರಿ ಘಟನೆ ಪಂಜಾಬ್ನ ಅಮೃತಸರದಲ್ಲಿ ನಡೆದಿದೆ. 15 ವರ್ಷಗಳ ಹಿಂದೆ ವಿವಾಹವಾಗಿದ್ದ ಪತಿ, ತನ್ನ ಪತ್ನಿಯನ್ನು ಮತ್ತೊಬ್ಬ ವ್ಯಕ್ತಿಯೊಂದಿಗೆ ಹೋಟೆಲ್ನಲ್ಲಿ ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆತಂಕಕಾರಿ ವಿಷಯವೆಂದರೆ, ಈ ಘಟನೆ ನಡೆಯುತ್ತಿರುವುದು ಇದು ಮೊದಲ ಸಲವಲ್ಲ.
ಪತಿ ರವಿ ಗುಲಾಟಿ ಅವರು ಮಾಧ್ಯಮದ ಮುಂದೆ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. 2018ರಲ್ಲಿಯೂ ಕೂಡ ತಮ್ಮ ಪತ್ನಿ ಬೇರೊಬ್ಬರೊಂದಿಗೆ ಹೋಟೆಲ್ನಲ್ಲಿ ಸಿಕ್ಕಿಬಿದ್ದಿದ್ದಳು. ಆ ಸಮಯದಲ್ಲಿ, ಮಕ್ಕಳ ಭವಿಷ್ಯ ಮತ್ತು ಸಂಬಂಧ ಸುಧಾರಿಸಬಹುದು ಎಂಬ ನಂಬಿಕೆಯಿಂದ ಕ್ಷಮಿಸಿರುವುದಾಗಿ ರವಿ ತಿಳಿಸಿದ್ದಾರೆ.
ಜಿಪಿಎಸ್ ಟ್ರ್ಯಾಕರ್ನಿಂದ ಬಯಲಾದ ಸತ್ಯ
ಈ ಬಾರಿ ವಿಷಯವು ಗಂಭೀರ ಸ್ವರೂಪ ಪಡೆದುಕೊಂಡಿದೆ. ರವಿ ಅವರ ಹೇಳಿಕೆಯ ಪ್ರಕಾರ, ಅವರ ಪತ್ನಿ ಹಿಮಾನಿ ಮಧ್ಯಾಹ್ನ ಮನೆ ಬಿಟ್ಟು ಹೋಗಿದ್ದು, ಪದೇ ಪದೇ ಕರೆ ಮಾಡಿದರೂ ಉತ್ತರಿಸಲಿಲ್ಲ. ಒಂದು ವರ್ಷದಿಂದ ಅನುಮಾನ ಬಂದಿದ್ದರಿಂದ, ರವಿ ಅವರು ಪತ್ನಿ ಓಡಿಸುತ್ತಿದ್ದ ಸ್ಕೂಟರ್ಗೆ ಜಿಪಿಎಸ್ ಟ್ರ್ಯಾಕರ್ (GPS Tracker) ಅನ್ನು ಅಳವಡಿಸಿದ್ದರು.
ಜಿಪಿಎಸ್ ಲೊಕೇಷನ್ ಪರಿಶೀಲಿಸಿದ ರವಿ, ತಮ್ಮ ಅಂಗಡಿ ಮುಚ್ಚಿ, ಸ್ಕೂಟರ್ನ ಸಿಗ್ನಲ್ ಹಿಂಬಾಲಿಸಿ ಒಂದು ಹೋಟೆಲ್ ತಲುಪಿದ್ದಾರೆ. ಅಲ್ಲಿ ಪತ್ನಿ ಹಿಮಾನಿ ತಮ್ಮ ಗೆಳೆಯನೊಂದಿಗೆ ಇದ್ದಾಗ ರವಿ ಅವರಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಪದೇ ಪದೇ ಸಂಭವಿಸಿದ ಘಟನೆ
ರವಿ ಅವರ ತಂದೆ ಪರ್ವೇಜ್ ಗುಲಾಟಿ ಅವರು ಮಾತನಾಡಿ, ಈ ಸಮಸ್ಯೆ ಹಲವು ವರ್ಷಗಳಿಂದ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಐದರಿಂದ ಏಳು ವರ್ಷಗಳ ಹಿಂದೆ ಸಹ ತಮ್ಮ ಸೊಸೆ ಹಿಮಾನಿ ಈ ರೀತಿ ಸಿಕ್ಕಿಬಿದ್ದಿದ್ದಳು. ಆಗ ಎರಡೂ ಕುಟುಂಬಗಳು ಸೇರಿ ಈ ವಿಷಯವನ್ನು ಬಗೆಹರಿಸಿದ್ದವು. ಹಿಮಾನಿ ಕ್ಷಮೆಯಾಚಿಸಿದ್ದಳು, ಈ ವಿಷಯವನ್ನು ಶಾಸಕರ ಮನೆಯಲ್ಲಿ ಕುಳಿತು ಮಾತುಕತೆ ನಡೆಸಿ ಇತ್ಯರ್ಥಗೊಳಿಸಲಾಗಿತ್ತು ಎಂದು ಅವರು ವಿವರಿಸಿದರು.
ಆದರೆ, ಈಗ ಅದೇ ವಿಷಯ ಮತ್ತೆ ಪುನರಾವರ್ತನೆಯಾಗಿದೆ. ಹೋಟೆಲ್ನಲ್ಲಿ ಸಿಕ್ಕಿಬಿದ್ದ ನಂತರ ಹಿಮಾನಿ, ಪತಿ ರವಿ ಅವರೊಂದಿಗೆ ಇರಲು ಇಷ್ಟವಿಲ್ಲ ಮತ್ತು ತವರು ಮನೆಗೆ ಮರಳಲು ಬಯಸುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾಳೆ. ರವಿ ಅವರ ಕುಟುಂಬಕ್ಕೆ ಆಕೆಯ ಗೆಳೆಯನನ್ನು ಸಹೋದರ ಎಂದು ಪರಿಚಯಿಸಲಾಗಿತ್ತು ಮತ್ತು ಆತ ನಿಯಮಿತವಾಗಿ ಅವರ ಮನೆಗೆ ಭೇಟಿ ನೀಡುತ್ತಿದ್ದನು ಎಂದು ಪರ್ವೇಜ್ ಗುಲಾಟಿ ಹೇಳಿದ್ದಾರೆ.
ರವಿ ಅವರ ಕುಟುಂಬವು ಈ ವಿಷಯವನ್ನು ಚರ್ಚಿಸಲು ಹಿಮಾನಿ ಅವರ ಕುಟುಂಬವನ್ನು ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿಯಾಗಿದೆ.

