HomeBusiness₹6,300 ಕೋಟಿ ಸಂಬಳ ಗೂಗಲ್ ಸಿಇಒ ಸುಂದರ್ ಪಿಚೈ ವೇತನದಲ್ಲಿ ಭಾರೀ ಏರಿಕೆ: ದಿನದ ಇನ್ಕಮ್...

₹6,300 ಕೋಟಿ ಸಂಬಳ ಗೂಗಲ್ ಸಿಇಒ ಸುಂದರ್ ಪಿಚೈ ವೇತನದಲ್ಲಿ ಭಾರೀ ಏರಿಕೆ: ದಿನದ ಇನ್ಕಮ್ ಕೇಳಿದ್ರೆ ದಂಗಾಗ್ತೀರಾ

ವಿಶ್ವದ ಅತಿದೊಡ್ಡ ಟೆಕ್ ದೈತ್ಯ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ ತನ್ನ ಸಿಇಒ ಸುಂದರ್ ಪಿಚೈ ಅವರಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಬರೋಬ್ಬರಿ 692 ಮಿಲಿಯನ್ ಡಾಲರ್ (ಸುಮಾರು ₹5,750 ಕೋಟಿ) ವರೆಗಿನ ಬೃಹತ್ ಸಂಭಾವನೆ ಪ್ಯಾಕೇಜ್ ಘೋಷಿಸಿದೆ. ಆದರೆ ಈ ಪೂರ್ತಿ ಹಣ ಅವರ ಕೈ ಸೇರಬೇಕಾದರೆ ಅವರು ಕೆಲವು ಕಠಿಣ ಗುರಿಗಳನ್ನು ತಲುಪಬೇಕಿದೆ.ಈ ಮೂಲಕ ಅವರು ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ.

ಪಿಚೈ ಅವರ ವಾರ್ಷಿಕ ವೇತನ $2 ಮಿಲಿಯನ್ (ಸುಮಾರು ₹16.6 ಕೋಟಿ) ಆಗಿರಲಿದೆ.ಪರ್ಫಾರ್ಮೆನ್ಸ್ ಸ್ಟಾಕ್ ಯೂನಿಟ್ಸ್ ಇವುಗಳ ಒಟ್ಟು ಮೌಲ್ಯ $126 ಮಿಲಿಯನ್ ಆಗಿದ್ದು, ಇವುಗಳನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಆಲ್ಫಾಬೆಟ್‌ನ ಷೇರು ಮಾರುಕಟ್ಟೆ ಪ್ರದರ್ಶನವು ಎಸ್‌ ಅಂಡ್ ಪಿ 100 (S&P 100) ಸೂಚ್ಯಂಕಕ್ಕಿಂತ ಉತ್ತಮವಾಗಿದ್ದರೆ, ಈ ಮೊತ್ತವು $252 ಮಿಲಿಯನ್ ವರೆಗೆ ದುಪ್ಪಟ್ಟಾಗಬಹುದು. ಒಂದು ವೇಳೆ ಗುರಿ ತಲುಪದಿದ್ದರೆ ಇದು ಶೂನ್ಯವಾಗುವ ಸಾಧ್ಯತೆಯೂ ಇದೆ.

ಸುಮಾರು $84 ಮಿಲಿಯನ್ ಮೌಲ್ಯದ ಷೇರುಗಳು ಮುಂದಿನ ಮೂರು ವರ್ಷಗಳಲ್ಲಿ ಮಾಸಿಕ ಆಧಾರದ ಮೇಲೆ ಅವರಿಗೆ ಹಸ್ತಾಂತರವಾಗಲಿವೆ.ಈ ಪ್ಯಾಕೇಜ್‌ನ ಹೈಲೈಟ್ ಎಂದರೆ ಆಲ್ಫಾಬೆಟ್‌ನ ಸ್ವಯಂಚಾಲಿತ ಕಾರು ಸಂಸ್ಥೆ ವೇಯ್ಮೋ ಮತ್ತು ಡ್ರೋನ್ ಸಂಸ್ಥೆ ವಿಂಗ್. ಈ ಸಂಸ್ಥೆಗಳು ನಿಗದಿತ ಗುರಿ ತಲುಪಿದರೆ ಮಾತ್ರ ಅವರಿಗೆ 175 ಮಿಲಿಯನ್ ಡಾಲರ್ ಹೆಚ್ಚುವರಿ ಮೊತ್ತ ಸಿಗಲಿದೆ. ಒಂದು ವೇಳೆ ಈ ಸಂಸ್ಥೆಗಳು ಸೋತರೆ, ಪಿಚೈ ಅವರಿಗೆ ಈ ವಿಭಾಗದಲ್ಲಿ ಶೂನ್ಯ ಸಂಭಾವನೆ ಸಿಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮಿಳುನಾಡಿನ ಮಧುರೈನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಪಿಚೈ ಅವರ ಸಾಧನೆ ಅದ್ಭುತ. ಅವರ ತಂದೆಯ ಇಡೀ ವರ್ಷದ ಸಂಬಳ ಪಿಚೈ ಅವರ ವಿಮಾನದ ಟಿಕೆಟ್ ದರಕ್ಕಿಂತಲೂ ಕಡಿಮೆಯಿತ್ತು. ಆದರೆ ಇಂದು ಅವರು $1.6 ಬಿಲಿಯನ್ (₹13,300 ಕೋಟಿ) ಒಟ್ಟು ಆಸ್ತಿ ಹೊಂದಿದ್ದಾರೆ.ಕಂಪನಿಯ ಸ್ಥಾಪಕರಲ್ಲದಿದ್ದರೂ ಕೇವಲ ವೃತ್ತಿಪರ ಸಿಇಒ ಆಗಿ ಕಾರ್ಯನಿರ್ವಹಿಸಿ ಬಿಲಿಯನೇರ್ ಆದ ವಿಶ್ವದ ಕೆಲವೇ ವ್ಯಕ್ತಿಗಳಲ್ಲಿ ಸುಂದರ್ ಪಿಚೈ ಒಬ್ಬರು.

ಪಿಚೈ ಶ್ರೀಮಂತರಾಗಿದ್ದರೂ, ಕಂಪನಿಗಳ ಸ್ಥಾಪಕರಾದ ಇತರ ಸಿಇಒಗಳಿಗೆ ಹೋಲಿಸಿದರೆ ಅವರ ಆಸ್ತಿ ಕಡಿಮೆ ಇದೆ:

ಎಲಾನ್ ಮಸ್ಕ್: $300 ಬಿಲಿಯನ್+

ಮಾರ್ಕ್ ಜುಕರ್‌ಬರ್ಗ್: $200 ಬಿಲಿಯನ್+

ಸುಂದರ್ ಪಿಚೈ: $1.6 ಬಿಲಿಯನ್

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular