HomeLatest NewsGOOD NEWS : ರಾಜ್ಯದ 1-10 ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ :...

GOOD NEWS : ರಾಜ್ಯದ 1-10 ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : 2 ಜೊತೆ ‘ಉಚಿತ ಸಮವಸ್ತ್ರ’ ವಿತರಣೆಗೆ ಸರ್ಕಾರ ಆದೇಶ

ಬೆಂಗಳೂರು :   ರಾಜ್ಯದ 1-10 ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂಬಂತೆ 2 ಜೊತೆ ಉಚಿತ ಸಮವಸ್ತ್ರ ವಿತರಣೆಗೆ ಸರ್ಕಾರ ಆದೇಶ ಹೊರಡಿಸಿದೆ.

2026-27ನೇ ಶೈಕ್ಷಣಿಕ ಸಾಲಿಗೆ ವಿದ್ಯಾವಿಕಾಸ ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಸುಮಾರು 38.22 ಲಕ್ಷ ವಿದ್ಯಾರ್ಥಿಗಳಿಗೆ 1 ರಿಂದ 10 ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ 2 ಜೊತೆ ಸಮವಸ್ತ್ರಗಳನ್ನು ಒಟ್ಟು ಅಂದಾಜು ರೂ.163.20 ಕೋಟಿ ಅನುದಾನದಲ್ಲಿ (2 ನೇ ಜೊತೆ ಸಮವಸ್ತ್ರ ಸರಬರಾಜಿಗೆ ಸಮಗ್ರ ಶಿಕ್ಷಣ ಕರ್ನಾಟಕದಲ್ಲಿ PAB ಯಿಂದ 2026-27ನೇ ಸಾಲಿಗೆ ಮಂಜೂರಾಗುವ ಅನುದಾನದಿಂದ) ಮೆ: ಕೆ.ಹೆಚ್.ಡಿ.ಸಿ ಹಾಗೂ ಇ-ಟೆಂಡರ್ ಮೂಲಕ ಖರೀದಿಸಿ ಸರಬರಾಜು ಮಾಡಲು ಈ ಕೆಳಗಿನ ಷರತ್ತುಗಳಿಗೊಳಪಟ್ಟು ಖರೀದಿಸಿ, ವಿತರಿಸಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದ

ಶಾಲಾ ಶಿಕ್ಷಣ ಇಲಾಖೆ ಇವರು ಪಾಲಿಸಬೇಕಾದ ಷರತ್ತುಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1. ಸದರಿ ಕಾರ್ಯಕ್ರಮಕ್ಕಾಗಿ ಒದಗಿಸಲಾಗಿರುವ ರೂ.163.20 ಕೋಟಿಗಳ (ಒಂದು ನೂರ ಅರವತ್ತೂರು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳು ಮಾತ್ರ) ಅನುದಾನದ ಮಿತಿಯೊಳಗೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸತಕ್ಕದ್ದು.

2. ಮೆ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಮೆ:ಕೆ.ಹೆಚ್.ಡಿ.ಸಿ) ಸಂಸ್ಥೆ ತನ್ನ ನೊಂದಾಯಿತ ನೇಕಾರರಿಂದಲೇ ಸಮವಸ್ತ್ರ, ಬಟ್ಟೆಯನ್ನು ಖರೀದಿ ಮಾಡಿ ಸರಬರಾಜು ಮಾಡುವಂತೆ ಷರತ್ತು ವಿಧಿಸಿ, ಈ ಪ್ರಕಾರ ಸರಬರಾಜು ಮಾಡುತ್ತಿರುವುದು ಖಚಿತಪಡಿಸಿಕೊಳ್ಳತಕ್ಕದ್ದು.

4. ಮೆ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಮೆ:ಕೆ.ಹೆಚ್.ಡಿ.ಸಿ) ಸಂಸ್ಥೆಗೆ ತನ್ನ ಸಾಮರ್ಥ್ಯದ ವಿಭಾಗದ ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಸಮವಸ್ತ್ರ ಇತರ ಎಲ್ಲಾ ಸಮವಸ್ತ್ರ, ಸರಬರಾಜು ಷರತ್ತುಗಳಿಗೆ ಪ್ರಕಾರ ಕಲಬುರಗಿ ಸರಬರಾಜು ಮಾಡಲು ಒಳಪಟ್ಟು ಅನುಮತಿಸಿದೆ.

5. ಮ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಮ:ಕೆ.ಹೆಚ್.ಡಿ.ಸಿ) ಸಂಸ್ಥೆ ಸರಬರಾಜು ಮಾಡುವ ಸಮವಸ್ತ್ರ, ಬಟ್ಟೆಗಳಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು ಅಧ್ಯಕ್ಷತೆಯ ಸಮಿತಿಯು ನಿಗದಿಪಡಿಸಿದ ದರದಲ್ಲಿ ಖರೀದಿಸತಕ್ಕದ್ದು.

6. ಶಾಲಾವಾರು ಸಮವಸ್ತ್ರ ಬೇಡಿಕೆಯನ್ನು ಪಡೆಯುವಾಗ ಹಿಂದಿನ ಸಾಲುಗಳಲ್ಲಿ ವಿತರಣೆಯಾಗದೇ ಉಳಿಕೆಯಾಗಿರುವ ಸಮವಸ್ತ್ರಗಳ ಸಂಖ್ಯೆಯನ್ನು ಹೊರತುಪಡಿಸಿ ಬಾಕಿ ಸಂಖ್ಯೆಗೆ ಮಾತ್ರ ಬೇಡಿಕೆಯನ್ನು ಪಡೆದು ಖರೀದಿಸಿ ವಿತರಿಸಲು ಕ್ರಮವಹಿಸುವುದು. ಈ ಸಂಬಂಧ ಯಾವುದೇ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನ ತೋರದೇ ಕ್ರಮವಹಿಸತಕ್ಕದ್ದು.

7. ಸರಬರಾಜು ಸಂಸ್ಥೆಗಳೊಂದಿಗೆ ಸಮವಸ್ತ್ರ, ಬಟ್ಟೆಯ ಪರಿಮಾಣ ಮತ್ತು ದರಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿ ಒಡಂಬಡಿಕೆ ಮಾಡಿಕೊಳ್ಳತಕ್ಕದ್ದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular