ಬೆಂಗಳೂರು : ಅಂತರ್ ಜಾತಿ ವಿವಾಹವಾಗುವ ಪರಿಶಿಷ್ಟ ಜಾತಿ ಸಮುದಾಯದವರಿಗೆ ಪ್ರೋತ್ಸಾಹ ಧನವನ್ನು ಮಂಜೂರು ಮಾಡಲಾಗುತ್ತಿದೆ. ಆದರೆ ಪರಿಶಿಷ್ಟ ಪಂಗಡದವರು ಇತರೆ ಸವರ್ಣೀಯ ಜಾತಿಯ ಪುರುಷ ಅಥವಾ ಮಹಿಳೆಯನ್ನು ಅಂತರ್ಜಾತಿ ವಿವಾಹವಾದಲ್ಲಿ ಪ್ರೋತ್ಸಾಹ ಧನ ಮಂಜೂರು ಮಾಡುವ ಕಾರ್ಯಕ್ರಮ ಇರುವುದಿಲ್ಲ.ಅಂತರ್ ಜಾತಿ ವಿವಾಹವಾಗುವ ಪರಿಶಿಷ್ಟ ಜಾತಿಯವರಿಗೆ ಪ್ರೋತ್ಸಾಹ ಧನವನ್ನು ನೀಡುತ್ತಿರುವಂತೆ ಪರಿಶಿಷ್ಟ ಪಂಗಡದ ಸಮುದಾಯದವರಿಗೂ ಪ್ರೋತ್ಸಾಹ ಧನವನ್ನು ನೀಡಲು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರಾತಿ ನೀಡಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ಯುವಕ/ಯುವತಿಯರು ಸಹ ಇತರ ಸವರ್ಣೀಯ ಜಾತಿಯ ಯುವಕ/ಯುವತಿಯರನ್ನು ವಿವಾಹವಾಗುತ್ತಿದ್ದು, ಪರಿಶಿಷ್ಟ ಜಾತಿಯ ಸಮುದಾಯದವರಿಗೆ ಇರುವಂತೆ ಪರಿಶಿಷ್ಟ ಪಂಗಡದವರಿಗೂ ಸಹ. ಅಂತರಜಾತಿ ವಿವಾಹ ಕಾರ್ಯಕ್ರಮದಡಿ ನೀಡುವ ಪ್ರೋತ್ಸಾಹ ಧನವನ್ನು ಮಂಜೂರು ಮಾಡುವಂತೆ ಅಂತರ್ಜಾತಿ ವಿವಾಹವಾದ ಪರಿಶಿಷ್ಟ ಪಂಗಡದ ದಂಪತಿಗಳು, ಪರಿಶಿಷ್ಟ ಪಂಗಡಗಳ ‘ವಿವಿಧ ಸಂಘಟನೆಗಳು ಹಾಗೂ ಜಿಲ್ಲಾಮಟ್ಟದ ಇಲಾಖಾಧಿಕಾರಿಗಳಿಂದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಕೇಂದ್ರ ಕಛೇರಿಗೆ ಭೇಟಿ ನೀಡಿ ಹಾಗೂ ದೂರವಾಣಿ ಮೂಲಕ ಮನವಿಗಳು ಸ್ವೀಕೃತವಾಗುತ್ತಿರುತ್ತವೆ. ಆದ್ದರಿಂದ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಪರಿಶಿಷ್ಟ ಪಂಗಡದ ಪುರುಷರು ಇತರೆ ಜಾತಿಯ ಹೆಣ್ಣು ಮಕ್ಕಳನ್ನು ಅಂತರ್ಜಾತಿ ವಿವಾಹವಾದಲ್ಲಿ ಪ್ರೋತ್ಸಾಹ ಧನವನ್ನು ಮಂಜೂರು ಮಾಡುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆದೇಶ ಹೊರಡಿಸುವಂತೆ ಮೇಲೆ ಓದಲಾದ ದಿನಾಂಕ:29.06.2018ರ ಏಕ ಕಡತದಲ್ಲಿ ನಿರ್ದೇಶಕರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರು ಕೋರಿರುತ್ತಾರೆ.
ನಿರ್ದೇಶಕರ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿದೆ. ಅದರಂತೆ ಈ ಕೆಳಕಂಡ ಆದೇಶ
ಸರ್ಕಾರಿ ಆದೇಶ ಸಂಖ್ಯೆ:ಸಕಇ 231 ಪವಯೋ 2018 ದಿನಾಂಕ:07.02.2019
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ. ಅಂತರ್ ಜಾತಿ ವಿವಾಹವಾಗುವ ಪರಿಶಿಷ್ಟ ಜಾತಿಯವರಿಗೆ ಪ್ರೋತ್ಸಾಹ ಧನವನ್ನು ನೀಡುತ್ತಿರುವಂತೆ ಪರಿಶಿಷ್ಟ ಪಂಗಡದ ಸಮುದಾಯದವರಿಗೂ ಪ್ರೋತ್ಸಾಹ ಧನವನ್ನು ನೀಡಲು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರಾತಿ ನೀಡಿದೆ.
ಷರತ್ತುಗಳು:
- ಪರಿಶಿಷ್ಟ ಪಂಗಡದ ಪುರುಷರು ಇತರೆ ಜಾತಿಯ ಹೆಣ್ಣು ಮಕ್ಕಳನ್ನು ವಿವಾಹವಾದಲ್ಲಿ ರೂ.2.00,000/- (ಎರಡು ಲಕ್ಷ ರೂಪಾಯಿಗಳು ಮಾತ್ರ) ಹಾಗೂ ಪರಿಶಿಷ್ಟ ವರ್ಗದ ಹೆಣ್ಣುಮಕ್ಕಳನ್ನು ಇತರೆ ಜಾತಿಯ ಪುರುಷರು ವಿವಾಹವಾದಲ್ಲಿ ರೂ.3,00.000/- (ಮೂರು ಲಕ್ಷ ರೂಪಾಯಿಗಳು ಮಾತ್ರ)ಗಳನ್ನು ಒಂದು ಬಾರಿಗೆ ಮಾತ್ರ ನೀಡುವುದು.
- ಇತರೆ ಸವರ್ಣೀಯ ಜಾತಿಯ ಹೆಣ್ಣು, ಪರಿಶಿಷ್ಟ ಪಂಗಡದ ಪುರುಷರನ್ನು ವಿವಾಹವಾದಲ್ಲಿ ರೂ.2.00 ಲಕ್ಷಗಳನ್ನು ಮಂಜೂರು ಮಾಡುವುದು. ಪ್ರೋತ್ಸಾಹ ಧನ ಮಂಜೂರಾದ ವರ್ಷದಲ್ಲಿ ಮೊದಲನೇ ಕಂತಾಗಿ ರೂ.1.00 ಲಕ್ಷಗಳಲ್ಲಿ ರೂ.50.000/-ಗಳನ್ನು ಬ್ಯಾಂಕ್ ಚೆಕ್ ಮುಖಾಂತರ ದಂಪತಿಗಳ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ನೀಡುವುದು ಮತ್ತು ರೂ.50,000/-ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ (ಎನ್.ಎಸ್.ಸಿ) ಜಂಟಿಯಾಗಿ ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ನೀಡುವುದು. ಮೊದಲನೇ ಕಂತಿನ ಹಣ ನೀಡಿದ ದಿನದಿಂದ ಒಂದು ವರ್ಷಕ್ಕೆ ಎರಡನೇ ಕಂತಾಗಿ ರೂ.1.00 ಲಕ್ಷಗಳಲ್ಲಿ ರೂ.50.000/- ಗಳನ್ನು ಬ್ಯಾಂಕ್ ಚೆಕ್ ಮುಖಾಂತರ ದಂಪತಿಗಳ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ನೀಡುವುದು ಮತ್ತು ರೂ.50.000/-ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ (ಎನ್.ಎಸ್.ಸಿ) ಜಂಟಿಯಾಗಿ ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ನೀಡುವುದು.
ಪರಿಶಿಷ್ಟ ಪಂಗಡದ ಹೆಣ್ಣು ಇತರೆ ಸವರ್ಣೀಯ ಜಾತಿಯ ಪುರುಷನನ್ನು ವಿವಾಹವಾದಲ್ಲಿ ರೂ.3.00 ಲಕ್ಷಗಳನ್ನು ಮಂಜೂರು ಮಾಡುವುದು. ಪ್ರೋತ್ಸಾಹ ಧನ ಮಂಜೂರಾದ ವರ್ಷದಲ್ಲಿ ಮೊದಲನೇ ಕಂತಾಗಿ ರೂ.1.50 ಲಕ್ಷಗಳಲ್ಲಿ ರೂ.75.000/-ಗಳನ್ನು ಬ್ಯಾಂಕ್ ಚೆಕ್ ಮುಖಾಂತರ ದಂಪತಿಗಳ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ನೀಡುವುದು ಮತ್ತು ರೂ.75,000/-ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ (ಎನ್.ಎಸ್.ಸಿ) ಜಂಟಿಯಾಗಿ ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ನೀಡುವುದು. ಮೊದಲನೇ ಕಂತಿನ ಹಣ ನೀಡಿದ ದಿನದಿಂದ ಒಂದು ವರ್ಷಕ್ಕೆ ಎರಡನೇ ಕಂತಾಗಿ. ರೂ.1.50 ಲಕ್ಷಗಳಲ್ಲಿ ರೂ.75,000/-ಗಳನ್ನು ಬ್ಯಾಂಕ್ ಚೆಕ್ ಮುಖಾಂತರ ದಂಪತಿಗಳ ಹೆಸರಿನಲ್ಲಿ ಇರುವ ಜಂಟಿ ಖಾತೆಗೆ ನೀಡುವುದು ಮತ್ತು ರೂ.75,000/-ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ (ಎನ್.ಎಸ್.ಸಿ) ಜಂಟಿಯಾಗಿ ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ನೀಡುವುದು.
- ಒಟ್ಟು ಮೊತ್ತ ನೀಡುವ ಪೂರ್ವದಲ್ಲಿ ಪತಿ ನಿಧನರಾಗಿದ್ದಲ್ಲಿ ಉಳಿದ ಹಣವನ್ನು ಪತ್ನಿ ಹೆಸರಿಗೆ ರಾಷ್ಟ್ರೀಯ ಉಳಿತಾಯ ಪತ್ರದ (ಎನ್.ಎಸ್.ಸಿ) ರೂಪದಲ್ಲಿ ನೀಡುವುದು. ಒಂದು ವೇಳೆ ಪತ್ನಿ ನಿಧನರಾಗಿದ್ದಲ್ಲಿ ಉಳಿದ ಹಣವನ್ನು ಅವರ ಮಕ್ಕಳ ಹೆಸರಿಗೆ ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ (ಎನ್.ಎಸ್.ಸಿ) ನೀಡುವುದು. ಮಕ್ಕಳು ಇಲ್ಲದಿದ್ದಲ್ಲಿ ಉಳಿದ ಹಣ ನೀಡಲು ಬರುವುದಿಲ್ಲ.
- ದಂಪತಿಗಳ ವಯೋಮಿತಿ:- ಹೆಣ್ಣಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷ, ಗಂಡಿಗೆ ಕನಿಷ್ಠ 21 ವರ್ಷದಿಂದ 45 ವರ್ಷ ಇರುವವರು ಮಾತ್ರ ಅರ್ಹರು.
6.
ಪತಿ-ಪತ್ನಿ ಇಬ್ಬರ ವಾರ್ಷಿಕ ಆದಾಯ ಸೇರಿ ರೂ.50,000/-ಗಳಿಗೆ ಒಳಪಟ್ಟಿರಬೇಕು. ಉಪ ನೋಂದಣಾಧಿಕಾರಿಗಳು ನೀಡಿರುವ ಮೂಲ ಅಂತರ್ಜಾತಿ ವಿವಾಹ ಪ್ರಮಾಣ ಪತ್ರಗಳನ್ನು ಜಂಟಿ/ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ / ಯೋಜನಾ ಸಮನ್ವಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ / ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪಡೆದು ಪ್ರೋತ್ಸಾಹ ಧನ ಮಂಜೂರು ಮ ಮಾಡತಕ್ಕದ್ದು. - ಸದರಿ ಯೋಜನೆಯಡಿ ಪ್ರಯೋಜನ ಪಡೆಯುವ ದಂಪತಿಗಳು ಸ್ವಂತ ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
ಈ ಸಂಬಂಧ ತಗಲುವ ವೆಚ್ಚವನ್ನು 2018-19ನೇ ಸಾಲಿನಲ್ಲಿ 2225-02-794-0-05ರಡಿ ನಿಗಧಿಪಡಿಕೊಳ್ಳುವ ಅನುದಾನದಲ್ಲಿ ಭರಿಸುವುದು. 2019-20ನೇ ಸಾಲಿನಿಂದ ಜಿಲ್ಲಾವಲಯ ಲೆಕ್ಕ ಶೀರ್ಷಿಕೆ 2225-00-102-0-38 ರಡಿ (ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ನಿರ್ವಹಣೆ. ಸಹಾಯಧನ ಮತ್ತು ಪ್ರೋತ್ಸಾಹ ಧನ) ಅನುದಾನ ನಿಗಧಿಪಡಿಸಿಕೊಳ್ಳುವುದು.




