ಕಲಬುರಗಿ: ಕಳೆದ ಒಂದು ತಿಂಗಳ ಅವಧಿಯಲ್ಲಿ ಕ್ವಿಂಟಲ್ ತೊಗರಿ ದರ 1300 ರೂ.ನಷ್ಟು ಏರಿಕೆಯಾಗಿದ್ದು, ರೈತರಲ್ಲಿ ಸಂತಸ ತಂದಿದೆ. ಕಲಬುರಗಿ ಎಪಿಎಂಸಿಯಲ್ಲಿ ಜನವರಿ 3ರಂದು ಕ್ವಿಂಟಲ್ ತೊಗರಿ ದರ ಗರಿಷ್ಠ 7800 ರೂ.ಗೆ ಮಾರಾಟವಾಗಿದ್ದು, ಫೆಬ್ರವರಿ 3ರಂದು 9113 ರೂ.ಗೆ ಮಾರಾಟವಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ 2025- 26 ನೇ ಸಾಲಿನಲ್ಲಿ 5.91 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಅತಿವೃಷ್ಟಿಯಿಂದ ಬೆಳೆ ಹಾಳಾಗಿದ್ದು, ದರ ಏರಿಕೆ ನಿರೀಕ್ಷೆ ಇತ್ತು, ಈ ಹಂಗಾಮಿನ ಕಟಾವು ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಡಿಸೆಂಬರ್ ನಿಂದಲೇ ಮಾರುಕಟ್ಟೆಗೆ ತೊಗರಿ ಮಾರಾಟಕ್ಕೆ ಬರುತ್ತಿದೆ.
ಡಿಸೆಂಬರ್ ನಲ್ಲಿ ಕಲಬುರಗಿ ಎಪಿಎಂಸಿಗೆ 52,000 ಕ್ವಿಂಟಲ್ ತೊಗರಿ ಮಾರಾಟಕ್ಕೆ ಬಂದಿದ್ದು, ಗರಿಷ್ಠ 7829 ರೂಪಾಯಿ ದರ ಇತ್ತು. ಜನವರಿಯಲ್ಲಿ 54,000 ಕ್ವಿಂಟಲ್ ಮಾರಾಟಕ್ಕೆ ಬಂದಿದ್ದು, ಗರಿಷ್ಠ 9169 ರೂಪಾಯಿಗೆ ಮಾರಾಟವಾಗಿದೆ.
ಕೇಂದ್ರ ಸರ್ಕಾರ ಈ ಸಾಲಿನಲ್ಲಿ 8,000 ಎಂ.ಎಸ್.ಪಿ. ನಿಗದಿ ಮಾಡಿದೆ. ಮುಕ್ತ ಮಾರುಕಟ್ಟೆಯಲ್ಲಿ 9 ಸಾವಿರ ರೂ.ಗೂ ಹೆಚ್ಚಿನ ದರವಿದೆ.

