HomeLatest Newsಗ್ರಾಹಕರಿಗೆ ಗುಡ್ ನ್ಯೂಸ್: ಯುಪಿಐ ಪಾವತಿ ಮಿತಿ ದಿನಕ್ಕೆ 10 ಲಕ್ಷ ರೂ.ಗೆ ಹೆಚ್ಚಳ

ಗ್ರಾಹಕರಿಗೆ ಗುಡ್ ನ್ಯೂಸ್: ಯುಪಿಐ ಪಾವತಿ ಮಿತಿ ದಿನಕ್ಕೆ 10 ಲಕ್ಷ ರೂ.ಗೆ ಹೆಚ್ಚಳ

ನವದೆಹಲಿ: ಡಿಜಿಟಲ್ ಪಾವತಿಯ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನುಕೂಲ ಒದಗಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಯುಪಿಐ ಪಾವತಿ ಮಿತಿಯನ್ನು ಹೆಚ್ಚಳ ಮಾಡಿದೆ.

ಸೆಪ್ಟೆಂಬರ್ 15 ರಿಂದ ಜಾರಿಯಾಗಲಿರುವ ಹೊಸ ನಿಯಮದ ಅನ್ವಯ ಗ್ರಾಹಕರು ಒಮ್ಮೆಲೆ ಯುಪಿಐ ಮೂಲಕ 5 ಲಕ್ಷ ರೂಪಾಯಿ ಕಳುಹಿಸಬಹುದು. ಒಂದು ದಿನದಲ್ಲಿ 10 ಲಕ್ಷ ರೂಪಾಯಿವರೆಗಿನ ಮೊತ್ತವನ್ನು ಯುಪಿಐ ಮೂಲಕ ಪಾವತಿಸಬಹುದಾಗಿದೆ.

ಇದು ವ್ಯಕ್ತಿಯಿಂದ ವರ್ತಕರು ಅಥವಾ ಕಂಪನಿಗಳು ಮಾಡುವ ಪಾವತಿಗಳಿಗೆ ನಿರ್ಧಿಷ್ಟ 12 ವ್ಯವಹಾರಗಳಿಗೆ ಮಾತ್ರ ಅನ್ವಯವಾಗಲಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಕಳುಹಿಸುವ ಹಣಕ್ಕೆ ಪ್ರತಿದಿನ ಗರಿಷ್ಠ ಒಂದು ಲಕ್ಷ ರೂಪಾಯಿ ಮಿತಿ ಮುಂದುವರೆಯಲಿದೆ. ವಿಮೆ, ಷೇರು ಮಾರುಕಟ್ಟೆ, ಸರ್ಕಾರಿ ಇ- ಮಾರ್ಕೆಟ್ ಪ್ಲೇಸ್, ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಸೇರಿ ಒಟ್ಟು 12 ವ್ಯವಹಾರಗಳಿಗೆ ಹೆಚ್ಚುವರಿ ಪಾವತಿ ಮಿತಿ ಅನ್ವಯವಾಗಲಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular