ಬೆಂಗಳೂರು : ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ಎದುರಾಗುವ ಸಾಮಾಜಿಕ ಬಹಿಷ್ಕಾರ, ಮರ್ಯಾದಾ ಹತ್ಯೆ ಹಾಗೂ ಕೌಟುಂಬಿಕ ಕಿರುಕುಳಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.ವಿಧಾನಸಭೆಯಲ್ಲಿ ‘ಇವನಮ್ಮವ ಇವ ನಮ್ಮವ’ ಎಂಬ ವಿಶೇಷ ವಿಧೇಯಕವನ್ನು ಮಂಡಿಸಲಾಗಿದ್ದು, ಅನ್ಯ ಜಾತಿಯವರನ್ನು ಮದುವೆಯಾಗುವ ವಯಸ್ಕರಿಗೆ ಪೂರ್ಣ ಕಾನೂನು ರಕ್ಷಣೆ ನೀಡಲು ಮುಂದಾಗಿದೆ.
ಈ ಕಾಯ್ದೆಯಡಿ ಮರ್ಯಾದಾ ಹತ್ಯೆ ಮಾಡುವವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ದಂಪತಿಗೆ ಕಿರುಕುಳ ನೀಡುವವರಿಗೆ ಭಾರಿ ದಂಡ ವಿಧಿಸುವ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಹೌದು. ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ಎದುರಾಗುವ ಸಾಮಾಜಿಕ ಬಹಿಷ್ಕಾರ, ಕಿರುಕುಳ ಮತ್ತು ಮರ್ಯಾದಾ ಹತ್ಯೆಗಳಂತಹ ಘಟನೆಗಳನ್ನು ತಡೆಯಲು ಕರ್ನಾಟಕ ಸರ್ಕಾರವು ವಿಧಾನಸಭೆಯಲ್ಲಿ ಈ ಹೊಸ ವಿಧೇಯಕವನ್ನು ಮಂಡಿಸಿದೆ.
ಅಂತರ್ಜಾತಿ ಮದುವೆಯಾದವರಿಗೆ ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರ ಹಾಕುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ. ದಂಪತಿಯನ್ನು ಅವರ ವಾಸಸ್ಥಳದಿಂದ ಹೊರಹಾಕುವಂತೆ ಒತ್ತಾಯಿಸುವುದು ಅಪರಾಧವಾಗುತ್ತದೆ.
ಈ ಕುರಿತ ಸಂಪೂರ್ಣ ವಿವರಗಳು ಇಲ್ಲಿವೆ
1. ‘ಇವ ನಮ್ಮವ ಇವ ನಮ್ಮವ’ ವಿಧೇಯಕ-2026: ಮರ್ಯಾದಾ ಹತ್ಯೆ (Honour Killing) ಮತ್ತು ಅಂತರ್ಜಾತಿ ವಿವಾಹಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಸಚಿವ ಸಂಪುಟವು ಈ ವಿಶೇಷ ವಿಧೇಯಕಕ್ಕೆ ಅನುಮೋದನೆ ನೀಡಿದೆ.
- ಜೀವಾವಧಿ ಶಿಕ್ಷೆ: ಜಾತಿ ಕಾರಣಕ್ಕಾಗಿ ಮರ್ಯಾದಾ ಹತ್ಯೆ ಮಾಡುವವರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ.
- ದೈಹಿಕ ಹಲ್ಲೆಗೆ ದಂಡನೆ: ಅಂತರ್ಜಾತಿ ವಿವಾಹಿತರ ಮೇಲೆ ಹಲ್ಲೆ ನಡೆಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
- ಮೋಸದ ಮದುವೆಗೆ ಶಿಕ್ಷೆ: ವಿವಾಹದ ಆಮಿಷವೊಡ್ಡಿ ಲೈಂಗಿಕ ಸಂಪರ್ಕ ಬೆಳೆಸಿ, ನಂತರ ಜಾತಿಯ ಕಾರಣ ನೀಡಿ ಮದುವೆಗೆ ನಿರಾಕರಿಸಿದರೆ ಅದನ್ನು ‘ಅತ್ಯಾಚಾರ’ ಎಂದು ಪರಿಗಣಿಸಿ ಕಠಿಣ ಶಿಕ್ಷೆ ನೀಡಲಾಗುವುದು.
2. ಸಾಮಾಜಿಕ ಬಹಿಷ್ಕಾರಕ್ಕೆ ಬ್ರೇಕ್: ಅಂತರ್ಜಾತಿ ಮದುವೆಯಾದ ಕಾರಣಕ್ಕೆ ಕುಟುಂಬ ಅಥವಾ ದಂಪತಿಯನ್ನು ಊರಿನಿಂದ ಹೊರಹಾಕುವುದು, ಸಾಮಾಜಿಕವಾಗಿ ಬಹಿಷ್ಕರಿಸುವುದು ಅಥವಾ ಆರ್ಥಿಕವಾಗಿ ತೊಂದರೆ ಕೊಡುವುದನ್ನು ಈ ಕಾಯ್ದೆ ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.
3. ಹಣಕಾಸಿನ ನೆರವು (Incentives): ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಲು ಸರ್ಕಾರವು ಆರ್ಥಿಕ ಸಹಾಯವನ್ನೂ ನೀಡುತ್ತಿದೆ:
- ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡದ (ST) ವ್ಯಕ್ತಿಯನ್ನು ಅನ್ಯ ಜಾತಿಯವರು ಮದುವೆಯಾದರೆ, ಅಂತಹ ದಂಪತಿಗಳಿಗೆ ಅವರ ವಾರ್ಷಿಕ ಆದಾಯದ ಮಿತಿಯ ಆಧಾರದ ಮೇಲೆ 50,000 ರೂ.ನಿಂದ 5 ಲಕ್ಷ ರೂ.ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ.
4. ರಕ್ಷಣೆ ಮತ್ತು ಭದ್ರತೆ: ಜೀವ ಬೆದರಿಕೆ ಇರುವ ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಪೊಲೀಸ್ ಇಲಾಖೆಯ ಮೂಲಕ ವಿಶೇಷ ರಕ್ಷಣೆ ಒದಗಿಸಲು ಮತ್ತು ಅವರಿಗಾಗಿ ‘ಸುರಕ್ಷಿತ ಮನೆ’ಗಳನ್ನು (Safe Houses) ಸ್ಥಾಪಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
* ಸ್ವತಂತ್ರ ವಿವಾಹ: ಇಬ್ಬರು ವಯಸ್ಕರು ವಿವಾಹವಾಗಲು ಪೋಷಕರ ಒಪ್ಪಿಗೆಯ ಅಗತ್ಯವಿಲ್ಲ ಎಂದು ವಿಧೇಯಕ ಸ್ಪಷ್ಟಪಡಿಸಿದೆ.
*ಧಾರ್ಮಿಕ ಮತ್ತು ಆಸ್ತಿ ಹಕ್ಕು: ಅಂತರ್ಜಾತಿ ವಿವಾಹಿತರಿಗೆ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ ಮತ್ತು ಕುಟುಂಬದ ಆಸ್ತಿಯಿಂದ ಅವರನ್ನು ವಂಚಿಸುವಂತಿಲ್ಲ.
*ಕಿರುಕುಳಕ್ಕೆ ತಡೆ: ದಂಪತಿಗೆ ಕೆಲಸ ನೀಡಲು ನಿರಾಕರಿಸುವುದು, ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದು ಅಥವಾ ಅವರಿಗೆ ಸಹಕಾರ ನೀಡುವವರನ್ನು ಬಹಿಷ್ಕರಿಸುವುದು ಶಿಕ್ಷಾರ್ಹ ಅಪರಾಧ.
*ದೈಹಿಕ ಹಿಂಸೆ ಮತ್ತು ಮರ್ಯಾದಾ ಹತ್ಯೆ: ಬಲವಂತದ ಗರ್ಭಪಾತಕ್ಕೆ ಒತ್ತಡ ಹೇರುವುದು ಅಥವಾ ದಂಪತಿಯನ್ನು ಬೇರ್ಪಡಿಸಿ ಬೇರೆ ಮದುವೆ ಮಾಡಿಸುವುದು ಅಪರಾಧ. ಮರ್ಯಾದಾ ಹತ್ಯೆ ಮಾಡಿದರೆ 5 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
*ಶಿಕ್ಷೆಯ ಪ್ರಮಾಣ: ದಂಪತಿಯನ್ನು ಗಾಯಗೊಳಿಸಿದರೆ 3 ಲಕ್ಷ ರೂ. ದಂಡ ಮತ್ತು 3 ವರ್ಷ ಜೈಲು, ಬೆದರಿಕೆ ಹಾಕಿದರೆ 5 ರಿಂದ 7 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ.
*ಗೌಪ್ಯತೆ: ವಿವಾಹಿತ ಜೋಡಿಯ ವಿಚಾರದಲ್ಲಿ ಸಾಕ್ಷಿಗಳ ಗುರುತು ಮತ್ತು ವಿಳಾಸವನ್ನು ಬಹಿರಂಗಪಡಿಸುವಂತಿಲ್ಲ.

