ಬೆಂಗಳೂರು: ಪ್ರಯಾಣಿಕರಿಗೆ ಟಿಕೆಟ್ ಖರೀದಿ ವ್ಯವಸ್ಥೆಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಬಿಎಂಆರ್ಸಿಎಲ್ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.
ವಾಟ್ಸಾಪ್ ಟಿಕೆಟ್ ಸೇರಿದಂತೆ ಹಲವು ವ್ಯವಸ್ಥೆಗಳ ಮೂಲಕ ಟಿಕೆಟ್ ಖರೀದಿಸಬಹುದು. ಇದೀಗ ಉಬರ್ ಕಂಪನಿಯೊಂದಿಗೆ ಬಿಎಂಆರ್ಸಿಎಲ್ ಒಪ್ಪಂದ ಮಾಡಿಕೊಳ್ಳುವ ಮೂಲಕ ನಮ್ಮ ಮೆಟ್ರೋ ಟಿಕೆಟ್ ಖರೀದಿಯಲ್ಲಿ ಮತ್ತೊಂದು ಅನುಕೂಲ ಕಲ್ಪಿಸಿದೆ.
ನಮ್ಮ ಮೆಟ್ರೋ ಮತ್ತು ಉಬರ್ ಸಹಭಾಗಿತ್ವದಿಂದ ಮೆಟ್ರೋ ಟಿಕೆಟ್ ಖರೀದಿ ಪ್ರಕ್ರಿಯೆ ಸುಲಭವಾಗಿದೆ. ಉಬರ್ ಆ್ಯಪ್ ಕೂಡ ಬದಲಾವಣೆ ಮಾಡುವ ಅಗತ್ಯವಿಲ್ಲ. ಆನ್ಲೈನ್ ಪಾವತಿ ಬಳಸಿಕೊಂಡು ಈಗ ಇರುವ ಉಬರ್ ನಲ್ಲಿ ಸೇರ್ಪಡೆಗೊಂಡಿರುವ ಉಬರ್ ಡೈರೆಕ್ಟ್ ಮೂಲಕ ಮೆಟ್ರೋ ಟಿಕೆಟ್ ಬುಕ್ ಮಾಡಬಹುದಾಗಿದೆ.

