HomeKarnatakaರಾಜ್ಯದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಮುಂದಿನ ವರ್ಷ ʻಸೈಕಲ್ʼ ವಿತರಣೆ

ರಾಜ್ಯದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಮುಂದಿನ ವರ್ಷ ʻಸೈಕಲ್ʼ ವಿತರಣೆ

ಬೆಳಗಾವಿ : ರಾಜ್ಯ ಸರ್ಕಾರವು 8 ನೇ ತರಗತಿ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮುಂದಿನ ವರ್ಷ ಶಾಲಾ ಮಕ್ಕಳಿಗೆ ಬೈಸಿಕಲ್‌ ವಿತರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಸೋಮವಾರ ವಿಧಾನಪರಿಷತ್‌ ನಲ್ಲಿ ಬಿಜೆಪಿಯ ಎನ್‌ .ರವಿಕುಮಾರ್‌ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಈ ಹಿಂದಿನ ಬಿಜೆಪಿ ಸರ್ಕಾರ ಈ ಯೋಜನೆ ಸ್ಥಗಿತಗೊಳಿಸಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಒಂದೇ ಬಾರಿ ಬೇಡಿಕೆಯಷ್ಟು ಸೈಕಲ್‌ ಹೊಂದಿಸುವುದು ಕಷ್ಟ ಸಾಧ್ಯ ಎಂಬ ಕಾರಣಕ್ಕೆ ಈ ಬಾರಿ ಸೈಕಲ್‌ ವಿತರಣೆ ಮಾಡಲ್ಲ. ಮುಂದಿನ ವರ್ಷದಿಂದ ವಿತರಿಸಲಾಗುವುದು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದೇ ಬಾರಿ ಅಷ್ಟು ಸೈಕಲ್​ಗಳ ಉತ್ಪಾದನೆ ಕಷ್ಟವಾಗಲಿದೆ. ಹಾಗಾಗಿ ಈ ಬಾರಿ ಮೊಟ್ಟೆ ವಿತರಣೆಗೆ ಆದ್ಯತೆ ನೀಡಲಾಗುತ್ತದೆ. ನಾವು ಬೇಡಿ ನೀಡಿದ ಕಡೆಯಲ್ಲೆಲ್ಲಾ ಮಕ್ಕಳು ಸೈಕಲ್ ಕೇಳಿದ್ದಾರೆ. ಹಣದ ಕೊರತೆ ಆಗಲ್ಲ. ಮುಂದಿನ ವರ್ಷದಿಂದ ಸೈಕಲ್ ಕೊಡಲಿದ್ದೇವೆ ಎಂದು ಭರವಸೆ ನೀಡಿದರು.

For Latest News Updates, Join Our Whatsapp Community🚩
RELATED ARTICLES

Most Popular