ಬೆಂಗಳೂರು: ದೇಶದ ಚಿನ್ನದ ಮಾರುಕಟ್ಟೆಯಲ್ಲಿ ಗುರುವಾರವಷ್ಟೇ ಕಂಡುಬಂದಿದ್ದ ಅಲ್ಪ ಇಳಿಕೆಯ ಸಂಭ್ರಮ ಗ್ರಾಹಕರಲ್ಲಿ ಹೆಚ್ಚು ದಿನ ಉಳಿಯಲಿಲ್ಲ. ಶುಕ್ರವಾರ (ಜನವರಿ 23) ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಜಿಗಿತ ಕಂಡುಬಂದಿದ್ದು, ಹೂಡಿಕೆದಾರರನ್ನು ಅಚ್ಚರಿಗೊಳಿಸಿದೆ.
ಕಳೆದ ಕೆಲವು ದಿನಗಳಿಂದ ದಾಖಲೆ ಮಟ್ಟದಲ್ಲಿ ಏರುತ್ತಿದ್ದ ಹಳದಿ ಲೋಹದ ಬೆಲೆಗೆ ಗುರುವಾರ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಆದರೆ ಇಂದು ಮತ್ತೆ ಯು-ಟರ್ನ್ ಹೊಡೆದಿರುವ ಬೆಲೆಗಳು, ಕೇವಲ ಒಂದೇ ದಿನದಲ್ಲಿ 10 ಗ್ರಾಂ ಚಿನ್ನಕ್ಕೆ 5,400 ರೂಪಾಯಿ ಹಾಗೂ ಬೆಳ್ಳಿ ಕೆಜಿಗೆ ಬರೋಬ್ಬರಿ 15,000 ರೂಪಾಯಿ ಏರಿಕೆಯಾಗಿದೆ.
ಚಿನ್ನದ ಪ್ರಮಾಣ ಇಂದಿನ ದರ (24K) ನಿನ್ನೆಯ ದರ (24K)
1 ಗ್ರಾಂ ₹ 15,971 ₹ 15,431 + ₹ 540
8 ಗ್ರಾಂ ₹ 1,27,768 ₹ 1,23,448 + ₹ 4,320
10 ಗ್ರಾಂ ₹ 1,59,710 ₹ 1,54,310 + ₹ 5,400
100 ಗ್ರಾಂ ₹ 15,97,100 ₹ 15,43,100 + ₹ 54,000
ಚಿನ್ನದ ಹಾದಿಯನ್ನೇ ಅನುಸರಿಸಿರುವ ಬೆಳ್ಳಿ ಬೆಲೆಯು ಕೆಜಿಗೆ 15,000 ರೂಪಾಯಿ ಏರಿಕೆ ಕಂಡಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಬಿಳಿ ಲೋಹದ ಬೇಡಿಕೆ ಮತ್ತು ಮೌಲ್ಯ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ. ಗೋಲ್ಡ್ ಮತ್ತು ಸಿಲ್ವರ್ ಇಟಿಎಫ್‌ಗಳು (ETFs) ಕೂಡ 10% ರಷ್ಟು ಏರಿಕೆಯಾಗಿದ್ದು, ಹೂಡಿಕೆದಾರರಲ್ಲಿ ಹೊಸ ಸಂಚಲನ ಮೂಡಿಸಿದೆ

ನಗರವಾರು ಇಂದಿನ ಚಿನ್ನದ ದರ (ರೂಪಾಯಿ)24 ಕ್ಯಾರೆಟ್ ಚಿನ್ನದ ಇಂದಿನ ದರ
ನಗರ 24 ಕ್ಯಾರೆಟ್ ಚಿನ್ನದ ದರ (₹)
ಬೆಂಗಳೂರು ₹1,59,710
ನಾಗ್ಪುರ ₹1,59,710
ಮುಂಬೈ ₹1,59,710
ಚೆನ್ನೈ ₹1,59,820
ಕೊಲ್ಕತ್ತಾ ₹1,59,710
ಪಾಟ್ನಾ ₹1,59,760
ಸೂರತ್ ₹1,59,760
ಚಂಡೀಗಢ ₹1,59,860
ಲಕ್ನೋ ₹1,59,860