ಬೆಂಗಳೂರು: ರಾಜ್ಯದ ಮಹಿಳೆಯರಿಗೆ ಮತ್ತು ಹೂಡಿಕೆದಾರರಿಗೆ ಇಂದು ಬಂಗಾರದಂತಹ ಸುದ್ದಿ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಗೆ ಇಂದು ಕೊಂಚ ಬ್ರೇಕ್ ಬಿದ್ದಿದ್ದು, ಬೆಲೆಯಲ್ಲಿ ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆ ಮತ್ತು ಅಮೆರಿಕದ ಡಾಲರ್ ಬಲಗೊಂಡ ಪರಿಣಾಮ, ಭಾರತೀಯ ಮಾರುಕಟ್ಟೆಯಲ್ಲೂ ಅದರ ಪ್ರಭಾವ ಕಂಡುಬಂದಿದೆ.
ಸತತ ಏರಿಕೆಯ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆಗೆ ಇಂದು ಕೊಂಚ ಬ್ರೇಕ್ ಬಿದ್ದಿದ್ದು, ಚಿನ್ನದ ದರದಲ್ಲಿ ಸುಮಾರು ₹130 ರಿಂದ ₹250 ವರೆಗೆ ಗಮನಾರ್ಹ ಇಳಿಕೆ ಕಂಡುಬಂದಿದೆ. ಮಾರುಕಟ್ಟೆಯ ಇಂದಿನ ಲೇಟೆಸ್ಟ್ ದರದಂತೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹250 ರಷ್ಟು ತಗ್ಗಿ ₹1,26,500 ಕ್ಕೆ ತಲುಪಿದೆ. ಇನ್ನು ಅತ್ಯಂತ ಶುದ್ಧವಾದ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯಲ್ಲೂ ₹270 ರಷ್ಟು ಇಳಿಕೆಯಾಗಿದ್ದು, ಸದ್ಯ 10 ಗ್ರಾಂ ಚಿನ್ನದ ದರ ₹1,38,000 ರಷ್ಟಿದೆ. ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಬೆಲೆ ಈಗ ಇಳಿಮುಖವಾಗಿರುವುದು ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ದೊಡ್ಡ ಸಮಾಧಾನ ತಂದಿದೆ.ಗ್ರಾಮ್ಗೆ 9 ರೂನಷ್ಟು ಬೆಳ್ಳಿ ಬೆಲೆ ಕಡಿಮೆಗೊಂಡಿದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,800 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,650 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,350 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 252 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,800 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,650 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 252 ರೂ
ಮುಖ ನಗರಗಳ ಇಂದಿನ ಚಿನ್ನದ ದರ ಪಟ್ಟಿ (ಪ್ರತಿ 1 ಗ್ರಾಂಗೆ)
| ನಗರ (City) | 24K (ಅಪರಂಜಿ) | 22K (ಆಭರಣ) | 18K (ಹರಳು) |
|---|---|---|---|
| ಚೆನ್ನೈ | ₹13,909 | ₹12,750 | ₹10,640 |
| ಬೆಂಗಳೂರು | ₹13,800 | ₹12,650 | ₹10,350 |
| ಮುಂಬೈ | ₹13,800 | ₹12,650 | ₹10,350 |
| ದೆಹಲಿ | ₹13,815 | ₹12,665 | ₹10,365 |
| ಹೈದರಾಬಾದ್ | ₹13,800 | ₹12,650 | ₹10,350 |
| ಅಹಮದಾಬಾದ್ | ₹13,805 | ₹12,655 | ₹10,355 |
| ಕೋಲ್ಕತ್ತಾ | ₹13,800 | ₹12,650 | ₹10,350 |
| ಕೇರಳ | ₹13,800 | ₹12,650 | ₹10,350 |

