ಬೆಂಗಳೂರು: ಕಳೆದ ಎರಡು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು (ಸೆ.23) ಮತ್ತೆ ಏರಿಕೆಯಾಗಿದೆ. ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಚಿನ್ನಾಭರಣ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಕಳೆದ ಎರಡು ದಿನಗಳ ಬೆಲೆ ಇಳಿಕೆ ಕೊಂಚ ರಿಲೀಫ್ ನೀಡಿತ್ತು. ಆದರೆ, ಇದೀಗ ಮತ್ತೆ ದರ ಏರಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ನಡುವೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿದೆ. ಮತ್ತೊಂದೆಡೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ಸೆಪ್ಟೆಂಬರ್ 23ರಂದು ಚಿನ್ನ ಮತ್ತು ಬೆಳ್ಳಿಯ ದರ ಹೀಗಿದೆ.
ಬೆಂಗಳೂರಲ್ಲಿ ಚಿನ್ನದ ಬೆಲೆ
22 ಕ್ಯಾರಟ್ ಚಿನ್ನ: ಕಳೆದ ಎರಡು ದಿನಗಳಲ್ಲಿ 10 ಗ್ರಾಂಗೆ ಸುಮಾರು ₹2,300 ಇಳಿಕೆಯಾಗಿತ್ತು. ಇಂದು ಮತ್ತೆ ₹800 ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ ₹1,41,350 ಆಗಿದೆ.
24 ಕ್ಯಾರಟ್ ಚಿನ್ನ: ಕಳೆದ ಎರಡು ದಿನಗಳಲ್ಲಿ 10 ಗ್ರಾಂಗೆ ಸುಮಾರು ₹2,500 ಇಳಿಕೆಯಾಗಿತ್ತು. ಇಂದು ₹870 ಏರಿಕೆಯಾಗಿದ್ದು, 10 ಗ್ರಾಂ ಅಪರಂಜಿ ಚಿನ್ನದ ಬೆಲೆ ₹1,54,200ಕ್ಕೆ ತಲುಪಿದೆ.
ಬೆಳ್ಳಿ ಬೆಲೆ ಸ್ಥಿರ
ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. ಸೆಪ್ಟೆಂಬರ್ 21ರಂದು ಕೆಜಿಗೆ ₹500 ಇಳಿಕೆಯಾಗಿದ್ದ ಬೆಳ್ಳಿ ದರ ನಂತರ ಸ್ಥಿರವಾಗಿದೆ.
ಬೆಂಗಳೂರಿನಲ್ಲಿ ಇಂದು 1 ಕೆಜಿ ಬೆಳ್ಳಿ ₹2.50 ಲಕ್ಷಕ್ಕೆ ವಹಿವಾಟು ನಡೆಸುತ್ತಿದೆ. 100 ಗ್ರಾಂ ಬೆಳ್ಳಿ ಬೆಲೆ ₹25,000 ಆಗಿದೆ.
ಸೆಪ್ಟೆಂಬರ್ 23ರ ಚಿನ್ನ-ಬೆಳ್ಳಿ ದರ
ಲೋಹ ಇಂದಿನ ದರ
24 ಕ್ಯಾರಟ್ ಚಿನ್ನ – 1 ಗ್ರಾಂ ₹15,420
22 ಕ್ಯಾರಟ್ ಚಿನ್ನ – 1 ಗ್ರಾಂ ₹14,135
18 ಕ್ಯಾರಟ್ ಚಿನ್ನ – 1 ಗ್ರಾಂ ₹11,564
ಬೆಳ್ಳಿ – 1 ಗ್ರಾಂ ₹250
ಚಿನ್ನದ ಬೆಲೆ ನಗರದಿಂದ ನಗರಕ್ಕೆ ಸ್ವಲ್ಪ ವ್ಯತ್ಯಾಸವಾಗಬಹುದು. ಆಭರಣ ಖರೀದಿಸುವಾಗ ಮೇಕಿಂಗ್ ಚಾರ್ಜ್, ಜಿಎಸ್‌ಟಿ ಸೇರಿದಂತೆ ಅಂತಿಮ ಬೆಲೆಯಲ್ಲಿ ಬದಲಾವಣೆ ಇರಬಹುದು.

