ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಳದಿ ಲೋಹದ ಬೆಲೆ ಏರಿಕೆ ಹಾದಿ ಹಿಡಿದಿದೆ. ವಾರಾಂತ್ಯದ ಮಜಾದಲ್ಲಿದ್ದ ಗ್ರಾಹಕರಿಗೆ ಇಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತದ ನೇರ ಪ್ರಭಾವ ಈಗ ಬೆಂಗಳೂರಿನ ಚಿನ್ನದ ಅಂಗಡಿಗಳ ಮೇಲೂ ಬಿದ್ದಿದ್ದು, ಬಂಗಾರ ಮತ್ತು ಬೆಳ್ಳಿ ಎರಡೂ ಬೆಲೆಗಳು ಗಗನಕ್ಕೇರಿವೆ.
ನಿನ್ನೆ ಅಲ್ಪ ಪ್ರಮಾಣದ ಏರಿಕೆ ಕಂಡಿದ್ದ ಚಿನ್ನದ ದರ, ಇಂದು (ಶನಿವಾರ, ಮಾರ್ಚ್ 28) ಮತ್ತಷ್ಟು ದುಬಾರಿಯಾಗಿದೆ. ಮಾರ್ಚ್ ತಿಂಗಳ ಆರಂಭದಿಂದಲೂ ಚಿನ್ನದ ಬೆಲೆಯಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದ್ದು, ಗ್ರಾಹಕರು ಚಿನ್ನ ಖರೀದಿಸಲು ಹೋದರೆ ಬೆಲೆ ಕೇಳಿ ದಂಗಾಗುವಂತಾಗಿದೆ. ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ಬದಲಾವಣೆಗಳು ದೇಶೀಯ ಮಾರುಕಟ್ಟೆಯ ಮೇಲೆ ಜೋರಾಗಿ ಅಪ್ಪಳಿಸಿವೆ.
ಇಂದಿನ ಚಿನ್ನದ ದರ (ಪ್ರತಿ ಗ್ರಾಂಗೆ):
ಇಂದು ಬೆಂಗಳೂರಿನಲ್ಲಿ ವಿವಿಧ ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ:
24 ಕ್ಯಾರೆಟ್ (ಅಪರಂಜಿ ಚಿನ್ನ): ₹14,809
22 ಕ್ಯಾರೆಟ್ (ಆಭರಣ ಚಿನ್ನ): ₹13,575
18 ಕ್ಯಾರೆಟ್: ₹11,107
ನಿನ್ನೆಗಿಂತ ಎಷ್ಟು ಹೆಚ್ಚಾಗಿದೆ?
ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು ಬೆಲೆಯಲ್ಲಿ ಗಣನೀಯ ಏರಿಕೆ ಕಂಡಿದೆ:
24K ಚಿನ್ನ: ₹338 ಏರಿಕೆ
22K ಚಿನ್ನ: ₹310 ಏರಿಕೆ
18K ಚಿನ್ನ: ₹254 ಏರಿಕೆ
ಈ ತಿಂಗಳು ಬೆಂಗಳೂರಿನಲ್ಲಿ ಚಿನ್ನದ ದರವು ತೀವ್ರ ಏರಿಳಿತಕ್ಕೆ ಸಾಕ್ಷಿಯಾಗಿದೆ. 24 ಕ್ಯಾರೆಟ್ ಚಿನ್ನದ ಗರಿಷ್ಠ ಬೆಲೆ ₹17,051 ಮುಟ್ಟಿದ್ದರೆ, ಕನಿಷ್ಠ ಬೆಲೆ ₹13,565 ದಾಖಲಾಗಿತ್ತು. ಮಾರುಕಟ್ಟೆಯ ಈ ಓಲಾಟವು ಹೂಡಿಕೆದಾರರಲ್ಲಿ ಕುತೂಹಲ ಮೂಡಿಸಿದೆ.
ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ
ಕೇವಲ ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆ ಕೂಡ ಬೆಂಕಿ ಉಗುಳುತ್ತಿದೆ. ವಾರಾಂತ್ಯದಲ್ಲಿ ಆಭರಣ ಖರೀದಿಸುವ ಪ್ಲಾನ್ ಮಾಡಿದ್ದವರಿಗೆ ಈ ಬೆಲೆ ಏರಿಕೆ ದೊಡ್ಡ ಶಾಕ್ ನೀಡಿದೆ. ಬೆಳ್ಳಿಯ ಬೆಲೆಯೂ ಕೂಡ ರಾಕೆಟ್ ವೇಗದಲ್ಲಿ ಜಿಗಿದಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.ನಿನ್ನೆ ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿ ಸಮಾಧಾನ ತಂದಿತ್ತು. ಆದರೆ ಇಂದು ಒಂದೇ ಸಮನೆ 5,000 ರೂಪಾಯಿ ಏರಿಕೆ ಕಾಣುವ ಮೂಲಕ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಬೆಳ್ಳಿ ಖರೀದಿಸುವವರು ಇಂದಿನ ದರ ನೋಡಿ ದಂಗಾಗಿದ್ದಾರೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,48,090
ನಾಗ್ಪುರ ₹1,48,090
ಮುಂಬೈ ₹1,48,090
ಚೆನ್ನೈ ₹1,49,020
ಕೋಲ್ಕತ್ತಾ ₹1,48,090
ಪಾಟ್ನಾ ₹1,48,120
ಸೂರತ್ ₹1,48,120
ಚಂಡೀಗಢ ₹1,48,220
ಲಕ್ನೋ ₹1,48,220

