ಬೆಳಗಾವಿ: ಸ್ವಚ್ಛತಾಕಾರ್ಯದಲ್ಲಿ ತೊಡಗಿದ್ದ ಮಹಾನಗರ ಪಾಲಿಕೆಯ ಪೌರಕಾರ್ಮಿಕ ಮಹಿಳೆ ಮೇಲೆಯೇ ಟಿಪ್ಪರ್ ಲಾರಿ ಹರಿದು ಮಹಿಳೆ ಸ್ಥಳದಲ್ಲೇ ಮೃತಪಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ- ಖಾನಾಪುರ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ. ಅವಕ್ಕಾ ಕೋಲ್ಕಾರ್ (50) ಮೃತ ಪೌರ ಕಾರ್ಮಿಕ ಮಹಿಳೆ. ಎಂದಿನಂತೆ ನಗರವನ್ನು ಶುಚಿಗೊಳಿಸುವ ವೇಳೆ ಬೆಳಗಾವಿ ನಗರದಿಂದ ವೇಗವಾಗಿ ಬಂದ ಟಿಪ್ಪರ್ ವಾಹನ ಮಹಿಳೆ ಅವಕ್ಕಾಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಅವರ ಮೇಲೇಯೇ ಟಿಪ್ಪರ್ ಹರಿದು ಹೋಗಿದೆ.
ಅಪಘಾತದ ಬಳಿಕ ವಾಹನ ಚಾಲಕ ಪರಾರಿಯಾಗಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಬೆಳಗಾವಿ ಪೊಲೀಸರು ಆರೋಪಿ ಚಾಲಕನ್ನು ಬಂಧಿಸಿದ್ದಾರೆ. ಬೆಳಗಾವಿ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

