ಬೆಂಗಳೂರು: ದೇಶಾದ್ಯಂತ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿದ್ದರೆ, ಇತ್ತ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಕಿಚ್ಚು ಹತ್ತಿಕೊಂಡಿದೆ. ಹೂಡಿಕೆದಾರರು ಮತ್ತು ಆಭರಣ ಪ್ರಿಯರ ಲೆಕ್ಕಾಚಾರವನ್ನು ಉಲ್ಟಾ ಮಾಡಿರುವ ಹಳದಿ ಲೋಹದ ಬೆಲೆ, ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಸಾರ್ವಕಾಲಿಕ ದಾಖಲೆಯತ್ತ ಮುನ್ನುಗ್ಗುತ್ತಿದೆ.24K ಚಿನ್ನದ ಬೆಲೆ ಒಂದು ಗ್ರಾಂ ಬೆಲೆ 16,271 ರೂ. ಆಗಿದೆ. ನಿನ್ನೆಯಷ್ಟೇ 16,026 ರೂ. ಇತ್ತು. ಆದ್ರೆ ಒಂದೇ ದಿನದಲ್ಲಿ ₹245 ರೂ. ಹೆಚ್ಚಳವಾಗಿದೆ,ಬೆಳ್ಳಿ ಕೂಡಾ ದಿನ ಹೋದಂತೆ ದುಬಾರಿಯಾಗುತ್ತಿದೆ. 1 ಗ್ರಾಂ ಬೆಳ್ಳಿ ಬೆಲೆ ₹340 ರೂ. ಆಗಿದ್ದು, ನಿನ್ನೆ ₹335 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹5 ರೂ. ಏರಿಕೆಯಾಗಿದೆ
ಇಂದಿನ ದರ ಪಟ್ಟಿ (10 ಗ್ರಾಂ ದರ)ಬೆಂಗಳೂರು ಮಾರುಕಟ್ಟೆಯಲ್ಲಿ ಇಂದು ದಾಖಲಾಗಿರುವ ಪ್ರಮುಖ ದರಗಳು ಹೀಗಿವೆ:
ಚಿನ್ನದ ವಿಧಇಂದಿನ ಬೆಲೆ (10 ಗ್ರಾಂ)ಸ್ಥಿತಿ
22 ಕ್ಯಾರೆಟ್ (ಆಭರಣ ಚಿನ್ನ)₹ 1,49,150
24 ಕ್ಯಾರೆಟ್ (ಅಪರಂಜಿ ಚಿನ್ನ)₹ 1,62,710
18 ಕ್ಯಾರೆಟ್ ಚಿನ್ನ₹ 1,22,030
ಬೆಳ್ಳಿ ಬೆಲೆ
ಚಿನ್ನದ ಹಾದಿಯನ್ನೇ ಹಿಡಿದಿರುವ ಬೆಳ್ಳಿ ಬೆಲೆ ಕೂಡ ಜನಸಾಮಾನ್ಯರ ಕೈಗೆಟುಕದಂತೆ ಏರುತ್ತಿದೆ.100 ಗ್ರಾಂ ಬೆಳ್ಳಿ ಬೆಲೆ ₹ 34,000 ತಲುಪಿದೆ.ಚೆನ್ನೈ ಹಾಗೂ ಕೇರಳ ಇಲ್ಲಿ ಬೆಳ್ಳಿ ದರ ಅತಿ ಹೆಚ್ಚಾಗಿದ್ದು, ಪ್ರತಿ ಕೆಜಿಗೆ ಬರೋಬ್ಬರಿ ₹ 3,75,000 ವರೆಗೆ ಏರಿಕೆಯಾಗಿದೆ.
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ 22 ಕ್ಯಾರಟ್ ಚಿನ್ನದ (1 ಗ್ರಾಮ್ಗೆ) ದರ ಪಟ್ಟಿ ಇಲ್ಲಿದೆ:
ನಗರ 1 ಗ್ರಾಮ್ ಚಿನ್ನದ ಬೆಲೆ (22 ಕ್ಯಾರಟ್)
ಬೆಂಗಳೂರು14,915 ರೂ
ಚೆನ್ನೈ15,025 ರೂ
ದೆಹಲಿ 14,930 ರೂ
ಜೈಪುರ್ / ಲಕ್ನೋ14,930 ರೂ
ಅಹ್ಮದಾಬಾದ್14,920 ರೂ
ಮುಂಬೈ / 14,915 ರೂ
ಕೇರಳ / 14,915 ರೂ
ಕೋಲ್ಕತಾ 14,915 ರೂ
ಭುವನೇಶ್ವರ್ 14,915

