HomeBusinessಮತ್ತೆ ಶಾಕ್ ನೀಡಿದ ಚಿನ್ನದ ದರ : ಒಂದೇ ದಿನ ₹1,470 ಏರಿಕೆ ಕಂಡ ಹಳದಿ ಲೋಹ...

ಮತ್ತೆ ಶಾಕ್ ನೀಡಿದ ಚಿನ್ನದ ದರ : ಒಂದೇ ದಿನ ₹1,470 ಏರಿಕೆ ಕಂಡ ಹಳದಿ ಲೋಹ ಇಂದಿನ ಲೇಟೆಸ್ಟ್ ದರ ಇಲ್ಲಿದೆ

ಹೂಡಿಕೆದಾರರು ಮತ್ತು ಚಿನ್ನದ ಪ್ರಿಯರಿಗೆ ಇಂದು ಮತ್ತೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ದರ, ಇಂದು ಮಂಗಳವಾರ ಮತ್ತೆ ಏರುಗತಿಯಲ್ಲಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧದ ಉದ್ವಿಗ್ನತೆ ಮತ್ತು ಜಾಗತಿಕ ತೈಲ ಬೆಲೆಯಲ್ಲಿನ ಏರಿಳಿತವು ನೇರವಾಗಿ ಆಭರಣ ಲೋಹಗಳ ಮೇಲೆ ಪ್ರಭಾವ ಬೀರಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 10 ಗ್ರಾಮ್ ಚಿನ್ನದ ಬೆಲೆ ₹1,41,100 ಕ್ಕೆ ತಲುಪಿದ್ದು, ಮದುವೆ ಹಾಗೂ ಶುಭ ಸಮಾರಂಭಗಳ ಹಿನ್ನೆಲೆಯಲ್ಲಿ ಖರೀದಿ ಮಾಡಲು ಯೋಜಿಸುತ್ತಿದ್ದ ಮಧ್ಯಮ ವರ್ಗದ ಜನರಿಗೆ ಬೆಲೆ ಏರಿಕೆ ಬರೆ ಎಳೆದಂತಾಗಿದೆ. ಯುದ್ಧದ ಭೀತಿ ಮತ್ತು ಜಾಗತಿಕ ಆರ್ಥಿಕ ಅಸ್ಥಿರತೆಯಿಂದಾಗಿ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಇನ್ನು ಎಷ್ಟು ಏರಲಿದೆ ಎಂಬ ಆತಂಕ ಶುರುವಾಗಿದೆ.

ಇಂದಿನ ಚಿನ್ನದ ದರದ ವಿವರ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದು ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಮ್‌ಗೆ ₹135 ರಷ್ಟು ಹೆಚ್ಚಳವಾಗಿದ್ದು, 10 ಗ್ರಾಮ್ ಚಿನ್ನದ ಬೆಲೆ ಮತ್ತೆ ₹14,000 ಗಡಿ ದಾಟಿದೆ. ಒಟ್ಟಾರೆಯಾಗಿ ಇಂದು ₹1,470 ರಷ್ಟು ಬೆಲೆ ಏರಿಕೆ ಕಂಡುಬಂದಿದೆ.

22 ಕ್ಯಾರಟ್ ಚಿನ್ನ (10 ಗ್ರಾಮ್): ₹1,41,100

24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಮ್): ₹1,53,930

ಬೆಳ್ಳಿ ಬೆಲೆ ಸ್ಥಿರ:

ಚಿನ್ನದ ದರ ಏರಿಕೆಯಾಗಿದ್ದರೂ, ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಕಂಡುಬಂದಿಲ್ಲ. ನಿನ್ನೆಯ ದರವೇ ಮುಂದುವರಿದಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ನಗರಗಳ ಹೆಸರು ಚಿನ್ನ

ಬೆಂಗಳೂರು ₹1,53,930

ನಾಗ್ಪುರ ₹1,53,930

ಮುಂಬೈ ₹1,53,930

ಚೆನ್ನೈ ₹1,55,130

ಕೋಲ್ಕತ್ತಾ ₹1,53,930

ಪಾಟ್ನಾ ₹1,53,980

ಸೂರತ್‌ ₹1,53,980

ಚಂಡೀಗಢ ₹1,54,080

ಲಕ್ನೋ ₹1,54,080

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular