HomeBusinessಚಿನ್ನದ ಬೆಲೆ 6,000 ಡಾಲರ್ ಗಡಿ ದಾಟುತ್ತಾ? ಹೂಡಿಕೆದಾರರಿಗೆ ಶಾಕಿಂಗ್ ಭವಿಷ್ಯ ನುಡಿದ ಪೀಟರ್ ಸ್ಕಿಫ್:...

ಚಿನ್ನದ ಬೆಲೆ 6,000 ಡಾಲರ್ ಗಡಿ ದಾಟುತ್ತಾ? ಹೂಡಿಕೆದಾರರಿಗೆ ಶಾಕಿಂಗ್ ಭವಿಷ್ಯ ನುಡಿದ ಪೀಟರ್ ಸ್ಕಿಫ್: ಈಗಲೇ ಎಚ್ಚೆತ್ತುಕೊಳ್ಳಿ

ಬೆಂಗಳೂರು: ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಕಂಡುಬಂದ ಸಣ್ಣ ಮಟ್ಟದ ಕುಸಿತ ನೋಡಿ ಬಂಗಾರ ಅಗ್ಗವಾಗಲಿದೆ ಎಂದು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೆ ನಿರಾಸೆ ಕಾದಿದೆ ಖ್ಯಾತ ಅಂತರಾಷ್ಟ್ರೀಯ ಹೂಡಿಕೆದಾರ ಪೀಟರ್ ಸ್ಕಿಫ್ (Peter Schiff) ನೀಡಿರುವ ಭವಿಷ್ಯದ ಪ್ರಕಾರ, ಈ ಏಪ್ರಿಲ್ ತಿಂಗಳು ಚಿನ್ನದ ಇತಿಹಾಸದಲ್ಲೇ ಅತಿ ದೊಡ್ಡ ತಿರುವು ನೀಡುವ ಮಾಸವಾಗಲಿದೆ. ಶೀಘ್ರದಲ್ಲೇ ಚಿನ್ನದ ಬೆಲೆ ಊಹೆಗೂ ನಿಲುಕದ ಎತ್ತರಕ್ಕೆ ಜಿಗಿಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಏಪ್ರಿಲ್‌ನಲ್ಲಿ ದಶಕಗಳಲ್ಲೇ ದೊಡ್ಡ ಲಾಭ?

ಪೀಟರ್ ಸ್ಕಿಫ್ ಅವರ ವಿಶ್ಲೇಷಣೆಯಂತೆ, 1980ರ ನಂತರ ಏಪ್ರಿಲ್ ತಿಂಗಳು ಚಿನ್ನಕ್ಕೆ ಅತಿ ಹೆಚ್ಚು ಲಾಭ ತಂದುಕೊಡುವ ಸಮಯವಾಗಲಿದೆ. ಪ್ರಸ್ತುತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 4,800 ಡಾಲರ್ ಆಸುಪಾಸಿನಲ್ಲಿದೆ. ಇದು ಶೀಘ್ರದಲ್ಲೇ 5,000 ಡಾಲರ್ ತಲುಪಿ, ಅಲ್ಲಿಂದ 6,000 ಡಾಲರ್ ಗಡಿ ದಾಟಲು ಭದ್ರವಾದ ವೇದಿಕೆ ಸಿದ್ಧವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಲೆ ಏರಿಕೆಗೆ ಅಸಲಿ ಕಾರಣವೇನು?

ಕೇವಲ ಮಧ್ಯಪ್ರಾಚ್ಯದ ಯುದ್ಧದ ಭೀತಿಯಿಂದ ಮಾತ್ರ ಚಿನ್ನದ ಬೆಲೆ ಏರುತ್ತಿಲ್ಲ ಎಂದು ಸ್ಕಿಫ್ ಸ್ಪಷ್ಟಪಡಿಸಿದ್ದಾರೆ.

ಡಾಲರ್ ಮೇಲಿನ ನಂಬಿಕೆ ಕುಸಿತ: ಜಾಗತಿಕ ಹೂಡಿಕೆದಾರರು ಅಮೆರಿಕದ ಡಾಲರ್ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ.

ಸುರಕ್ಷಿತ ಹೂಡಿಕೆ: ಹಣದುಬ್ಬರ, ಹೆಚ್ಚುತ್ತಿರುವ ಸಾಲ ಮತ್ತು ನಿರುದ್ಯೋಗದಂತಹ ಆರ್ಥಿಕ ಅನಿಶ್ಚಿತತೆಯ ಕಾಲದಲ್ಲಿ ಚಿನ್ನವೇ ಸುರಕ್ಷಿತ ಹೂಡಿಕೆ ಎಂಬ ನಂಬಿಕೆ ಬಲವಾಗುತ್ತಿದೆ.

ಕಾಗದದ ಕರೆನ್ಸಿಗಿಂತ ಗಟ್ಟಿ ಸ್ವತ್ತು: ಷೇರು ಮಾರುಕಟ್ಟೆಯ ಅಸ್ಥಿರತೆಯಿಂದಾಗಿ ಹೂಡಿಕೆದಾರರು ಈಗ ಕಾಗದದ ಕರೆನ್ಸಿಗಿಂತ ಚಿನ್ನದಂತಹ ಗಟ್ಟಿ ಸ್ವತ್ತುಗಳ ಕಡೆಗೆ ಮುಖ ಮಾಡುತ್ತಿದ್ದಾರೆ.

ಹೂಡಿಕೆದಾರರಿಗೆ ಪೀಟರ್ ಸ್ಕಿಫ್ ಕಿವಿಮಾತು:

ಮಾರ್ಚ್ 23 ರಂದು ಚಿನ್ನ ಪಾತಾಳಕ್ಕೆ ಕುಸಿದಿತ್ತು, ಆದರೆ ಕೇವಲ ಒಂದೇ ವಾರದಲ್ಲಿ ಶೇ. 15ರಷ್ಟು ಜಿಗಿದಿದೆ. ಇದು ಭವಿಷ್ಯದ ಅತಿ ದೊಡ್ಡ ಬೆಲೆ ಏರಿಕೆಯ ಆರಂಭಿಕ ಹಂತ ಮಾತ್ರ. ಚಿನ್ನದ ರೈಲು ನಿಲ್ದಾಣ ಬಿಟ್ಟು ಬಹುದೂರ ಹೋಗುವ ಮುನ್ನವೇ ಅಂದರೆ ಬೆಲೆ ಕೈಗೆಟುಕದಷ್ಟು ಏರುವ ಮುನ್ನವೇ ಸ್ವಲ್ಪ ಖರೀದಿಸಿಟ್ಟುಕೊಳ್ಳಿ ಎಂದು ಅವರು ಹೂಡಿಕೆದಾರರಿಗೆ ಸಲಹೆ ನೀಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular