HomeLatest NewsBIG NEWS: ಪೆಟ್ರೋಲ್, ಡೀಸೆಲ್ ದರ ಏರಿಕೆ: ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ ಗಿಗ್ ಕಾರ್ಮಿಕರ...

BIG NEWS: ಪೆಟ್ರೋಲ್, ಡೀಸೆಲ್ ದರ ಏರಿಕೆ: ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ ಗಿಗ್ ಕಾರ್ಮಿಕರ ಒಕ್ಕೂಟ; ಸಂಜೆ 5 ಗಂಟೆವರೆಗೆ ಸೇವೆ ಸ್ಥಗಿತ

ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ಗಿಗ್ ಕಾರ್ಮಿಕರು, ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ತೈಲ ಬೆಲೆ ಏರಿಕೆ ಖಂಡಿಸಿ ಇಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇಶಾದ್ಯಂತ ಗಿಗ್ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಈ ಬಗ್ಗೆ ಗಿಗ್ ಮತ್ತು ಪ್ಲಾಟ್ ಫಾರ್ಮ್ ಸೇವಾ ಕಾರ್ಮಿಕರ ಒಕ್ಕೂಟ ಮಾಹಿತಿ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಅವಧಿಯಲ್ಲಿ ಅಪ್ಲಿಕೇಷನ್ ಆಧಾರಿತ ಸೇವೆಗಳು ತಾತ್ಕಾಲಿಕ ಬಂದ್ ಆಗಲಿವೆ. ದೇಶದ ಹಲವು ಭಾಗಗಳಲ್ಲಿ ಬಿಸಿಲ ಝಳದ ನಡುವೆಯೇ ಗಿಗ್ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಅವರ ಮೇಲೆ ನೇರ ಹೊಡೆತ ಬೀಳುವಂತೆ ಮಾಡಿದೆ. ಸ್ವಿಗ್ಗಿ, ಜೊಮೆಟೊ, ಬ್ಲಿಂಕಿಟ್ ಹಾಗೂ ಇತರ ಕಂಪನಿಗಳ ವಿತರಣಾ ಕಾರ್ಮಿಕರಿಗೆ ಇದು ಭಾರಿ ಹೊರೆಯಾಗಿದೆ ಎಂದು ಗಿಗ್ ಕಾರ್ಮಿಕರ ಒಕ್ಕೂಟದ ಅಧ್ಯಕ್ಷೆ ಸೀಮಾ ಸಿಂಗ್ ತಿಳಿಸಿದ್ದಾರೆ.

ಇಂಧನ ದರ ಏರಿಕೆಯಿಂದಾಗಿ ಗಿಗ್ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಹಾಗೂ ಕಂಪನಿಗಳು ಪ್ರತಿ ಕಿ.ಮೀಗೆ 20 ರೂ ಕನಿಷ್ಠ ಸೇವಾ ದರವನ್ನು ಘೋಷಿಸಬೇಕು ಎಂದು ತಿಳಿಸಿದ್ದಾರೆ.

ದೈನಂದಿನ ಗಳಿಕೆಗಾಗಿ ಬೈಕ್ ಮತ್ತು ಸ್ಕೂಟರ್ ಗಳನ್ನು ಅವಲಂಭಿಸಿರುವ ಸುಮಾರು 1.2 ಕೋಟಿ ಗಿಗ್ ಕಾರ್ಮಿಕರು ಇಂಧನ ಬೆಲೆ ಏರಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular