HomeLatest Newsಇಬ್ಬರು ನೌಕರರ ಅಮಾನತು: GBA ಕಂದಾಯ ಆಯುಕ್ತ ಮನೀಶ್ ಮೌದ್ಗಿಲ್ ವಿರುದ್ಧ ನೌಕರರ ಪ್ರತಿಭಟನೆ: ಉಗ್ರ...

ಇಬ್ಬರು ನೌಕರರ ಅಮಾನತು: GBA ಕಂದಾಯ ಆಯುಕ್ತ ಮನೀಶ್ ಮೌದ್ಗಿಲ್ ವಿರುದ್ಧ ನೌಕರರ ಪ್ರತಿಭಟನೆ: ಉಗ್ರ ಹೋರಾಟದ ಎಚ್ಚರಿಕೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಕಂದಾಯ ವಿಭಾಗದ ವಿಶೇಶ ಆಯುಕ್ತ ಮನೀಶ್ ಮೌದ್ಗಿಲ್ ವಿರುದ್ಧ ಜಿಬಿಎ ಅಧಿಕಾರಿಗಳು, ಸಿಬ್ಬಂದಿಗಳು ಸಿಡಿದೆದ್ದಿದ್ದು, ಪ್ರತಿಭಟನೆ ನಡೆಸಿದ್ದಾರೆ.

ಕಂದಾಯ ಆಯುಕ್ತ ಮನೀಶ್ ಮೌದ್ಗಿಲ್ ವಿರುದ್ಧ ಕಿರುಕುಳ ರ‍ೋಪ ಮಾಡಿದ್ದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದ ಕ್ರಮ ಖಂಡಿಸಿ ಮೇಣದಬತ್ತಿ ಹಿಡಿದು ಸಿಬ್ಬಂದಿಗಳು, ನೌಕರರು ಪ್ರತಿಭಟನೆ ನಡೆಸಿದ್ದಾರೆ. ಕಿರುಕುಳ ಹಾಗೂ ಉದ್ದೇಶಪೂರ್ವಕವಾಗಿ ಅಧಿಕಾರಿಗಳನ್ನು ಅಮಾನತು ಮಾಡುವ ಕೆಲಸಕ್ಕೆ ಮನೀಶ್ ಮೌದ್ಗಿಲ್ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಜಿಬಿಎ ದಕ್ಷಿಣ ವಲಯ ಉಪ ಆಯುಕ್ತ ಡಿ.ಕೆ.ಬಾಬು ಹಾಗೂ ಕಂದಾಯ ಅಧಿಅಕರಿ ವರಲಕ್ಷ್ಮಿ ಅವರನ್ನು ಕಾನೂನುಬಾಹಿರವಾಗಿ ಅಮನತು ಮಾಡಲು ಸರ್ಕಾರಕ್ಕೆ ಕಂದಾಯ ಆಯುಕ್ತ ಮೌದ್ಗಿಲ್ ಪ್ರಸ್ತಾವನೆ ಸಲ್ಲಿಸಿದ್ದು, ಇದನ್ನು ಖಂಡಿಸಿ ಜಿಬಿಎ-ಪಾಲಿಕೆ ಅಧಿಕಾರಿ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮಾನತು ಆದೇಶ ಹಿಂಪಡೆಯದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳಿಸುವುದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular