
LPG ಸಬ್ಸಿಡಿ ಹಣ ಬಂದಿರುವುದನ್ನು ಮೊಬೈಲ್ ಮೂಲಕವೇ ನೀವು ಹೀಗೆ ಚೆಕ್ ಮಾಡಬಹುದು
ಹಂತ 1 : ಮೊದಲು ನೀವು https://www.mylpg.in ವೆಬ್ ಸೈಟ್ ಗೆ ಭೇಟಿ ನೀಡಬೇಕು . ಇದರಲ್ಲಿ ಎಲ್ಲಾ LPG ಕಂಪನಿಗಳ ಹೆಸರು ಇರುತ್ತದೆ. ಇದರಲ್ಲಿ ನಿಮ್ಮ ಮನೆಗೆ ಬರುತ್ತಿರುವ ಸಿಲಿಂಡರ್ ಕಂಪನಿ ಯಾವುದು ಅದನ್ನು ಸೆಲೆಕ್ಟ್ ಮಾಡಬೇಕು.
ಹಂತ 2: ನಿಮ್ಮ ಆಯ್ಕೆ ಭಾಷೆ ಕನ್ನಡ ಆಗಿದ್ದರೆ ಭಾಷೆಗಳು ಆಯ್ಕೆಯಲ್ಲಿ ಕನ್ನಡ ಎನ್ನುವುದನ್ನು ಸೆಲೆಕ್ಟ್ ಮಾಡಿ
ಹಂತ 3 : ನೀವು ಹೊಸ ಬಳಕೆದಾರ ಎಂದು ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮಗೆ LPG ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿ ಮುಂದುವರೆಯಿರಿ.
ಹಂತ 4 : ನಂತರ ಮೊಬೈಲ್ ಗೆ OTP ಬರುತ್ತದೆ, ನಂತರ ಮತ್ತೆ Click here to generate OTP ಎನ್ನುವ ಆಯ್ಕೆ ಕಾಣುತ್ತದೆ, ಅದರ ಮೇಲೆ ಮೇಲೆ ಕ್ಲಿಕ್ ಮಾಡಿ.ಮತ್ತೊಂದು ಒಟಿಪಿ ಬರುತ್ತದೆ ಅದನ್ನು ಕೂಡ ಎಂಟ್ರಿ ಮಾಡಿ.
ಹಂತ 5 : ಬಳಕೆದಾರರ ID ಮತ್ತು Password create ಆಪ್ಷನ್ ಇರುತ್ತದೆ ಅದನ್ನು ಕಂಪ್ಲೀಟ್ ಮಾಡಿ.
ಹಂತ 6 : ನೀವು ಕ್ರಿಯೇಟ್ ಮಾಡಿದ ID ಮತ್ತು Password ಬಳಸಿ ಲಾಗಿನ್ ಆಗಿರಿ.
ಹಂತ 7 : ಲಾಗಿನ್ ಆಗಿ ಮೆನುಗೆ ಹೋದರೆ ಸಿಲಿಂಡರ್ ಬುಕಿಂಗ್ ಹಿಸ್ಟರಿ ಸಿಗುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ
ಹಂತ 8 : ಇದನ್ನು ಕ್ಲಿಕ್ ಮಾಡಿದ ಕೂಡಲೇ ನೀವು ಯಾವಾಗ ಸಿಲಿಂಡರ್ ಬುಕ್ ಮಾಡಿದ್ದೀರಾ, ಆ ಬುಕಿಂಗ್ ನಿಮಗೆ ಎಷ್ಟು ಸಬ್ಸಿಡಿ ಹಣ ಬಂದಿದೆ, ಯಾವ ಖಾತೆಗೆ ಜಮೆ ಆಗಿದೆ ಎನ್ನುವ ಸಂಪೂರ್ಣ ಡಿಟೇಲ್ಸ್ ನಿಮಗೆ ಸಿಗುತ್ತದೆ.

