HomeAgricultureBig Update: ಫ್ರೂಟ್ಸ್ ಐಡಿ ಕುರಿತು ಸ್ಪಷ್ಟನೆ, ರೈತರ ಗಮನಕ್ಕೆ

Big Update: ಫ್ರೂಟ್ಸ್ ಐಡಿ ಕುರಿತು ಸ್ಪಷ್ಟನೆ, ರೈತರ ಗಮನಕ್ಕೆ

ಕೃಷಿ ಇಲಾಖೆಯಿಂದ ವಿವಿಧ ಸೌಲಭ್ಯಗಳನ್ನು ಪಡೆಯಲು, ತಮ್ಮ ಬೆಳೆಗಳನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ರೈತರು ಕಡ್ಡಾಯವಾಗಿ ಫ್ರೂಟ್ಸ್‌ ಐಡಿಯನ್ನು ಹೊಂದಿರಬೇಕು. ಆದರೆ ಈ ಕುರಿತು ರೈತರಲ್ಲಿ ಹಲವಾರು ಗೊಂದಲಗಳಿವೆ.

ಈಗ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಫ್ರೂಟ್ಸ್ ಐಡಿ ಕುರಿತು ಸ್ಪಷ್ಟನೆಯನ್ನು ನೀಡಿದ್ದು, ಈ ಕುರಿತು ರೈತರಲ್ಲಿ ಇದ್ದ ಗೊಂದಲ ಬಗೆಹರಿಸಿದ್ದಾರೆ. ಕೇಂದ್ರ ಸರ್ಕಾರದ ಸವಲತ್ತುಗಳನ್ನು ಪಡೆಯಲು ಈಗಾಗಲೇ ರೈತರು ಇ-ಕೆವೈಸಿ ಯನ್ನು ಮಾಡಿಸಿ ಫ್ರೂಟ್ಸ್ ಐಡಿ ಮುಖಾಂತರ ಸವಲತ್ತುಗಳನ್ನು ಪಡೆಯುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಆದರೆ ಈ ರೈತ ಬಾಂಧವರಿಗೆ ಕೇಂದ್ರ ಸರ್ಕಾರವು ಏಕೀಕೃತ ಫ್ರೂಟ್ಸ್ ಐಡಿ ಗಳನ್ನು ಸೃಜನೆ ಮಾಡುತ್ತಿದ್ದು ಸದರಿ ಫ್ರೂಟ್ಸ್ ಐಡಿ ಗಳನ್ನು ಕೇಂದ್ರ ಸರ್ಕಾರದ ಆ್ಯಪ್‍ನೊಂದಿಗೆ ಹೊಂದಾಣಿಕೆ ಮಾಡಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದ್ದರಿಂದ ರೈತರು ತಮ್ಮ ಹೆಸರಿಗಿರುವ ಎಲ್ಲಾ ಸರ್ವೆ ನಂಬರ್‌ವಾರು ವಿಸ್ತೀರ್ಣದ ಮಾಹಿತಿಯನ್ನು ಫ್ರೂಟ್ಸ್ ಐಡಿಯಲ್ಲಿ ಸೇರಿಸುವುದು. ಫ್ರೂಟ್ಸ್ ಐಡಿ ಸೃಜಿಸುವ ಸಂಬಂಧ ರೈತರು ಡಿಜಿಟಲ್ ಕನ್‍ಸೆಂಟ್ ನೀಡಬೇಕಾಗಿದ್ದು ತಮ್ಮ ಮೊಬೈಲ್‍ಗೆ ಬರುವ ಒಟಿಪಿ ಯನ್ನು ರೈತ ಸಂಪರ್ಕ ಕೇಂದ್ರ, ತೋಟಕಾರಿಕೆ, ಪಶು ಸಂಗೋಪನ ಇಲಾಖೆ ಹಾಗೂ ಗ್ರಾಮ ಒನ್ ಕೇಂದ್ರದ ಕಚೇರಿಗಳಿಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಫ್ರೂಟ್ಸ್ ಐಡಿ ಇಲ್ಲದ ರೈತರು ನಿಮ್ಮ ಹೆಸರಿಗೆ ಇರುವ ಎಲ್ಲಾ ಜಮೀನಿನ ಪಹಣಿಯೊಂದಿಗೆ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‍ಎಸ್‍ಸಿ ಸಂಖ್ಯೆ ಮತ್ತು ಆಧಾರ್ ಲಿಂಕ್ ಇರುವ ಮೊಬೈಲ್ ನೊಂದಿಗೆ ಈ ಕಚೇರಿಗಳಿಗೆ ಭೇಟಿ ಕೊಟ್ಟು ನೋಂದಾಯಿಸಿಕೊಳ್ಳಬೇಕಾಗಿ ಈ ಮೂಲಕ ತಿಳಿಸಿದೆ.

ಈಗಾಗಲೇ ಫ್ರೂಟ್ಸ್ ಐಡಿ ಇರುವ ರೈತರು ನಿಮ್ಮ ಹೆಸರಿಗಿರುವ ಬಾಕಿ ಯಾವುದಾದರು ಜಮೀನಿನ ಸರ್ವೆನಂಬರ್ ಮಾಹಿತಿಯನ್ನು ಫ್ರೂಟ್ಸ್ ಐಡಿ ಯಲ್ಲಿ ಸೇರಿಸಿಕೊಳ್ಳಲು ಅವಕಾಶವಿರುತ್ತದೆ.

ಕೇಂದ್ರ ಸರ್ಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ಡಿಜಿಟಲ್ ಕನ್ಸೆಂಟ್ ಕಡ್ಡಾಯವಾಗಿರುತ್ತದೆ, ಆದ್ದರಿಂದ ಜಿಲ್ಲೆಯ ರೈತರು ಫೆಬ್ರವರಿ, 25 ರ ಒಳಗೆ ಸಂಬಂದಿಸಿದ ಕಚೇರಿಗಳಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular