ಇಂದಿನ ವೇಗದ ಜಗತ್ತಿನಲ್ಲಿ ಪ್ರತಿ ಮನೆಯ ಅಡುಗೆಮನೆಯಿಂದ ಕೇಳಿಬರುವ ಸಾಮಾನ್ಯ ಶಬ್ದವೆಂದರೆ ಅದು ಕುಕ್ಕರ್ ವಿಸಿಲ್ ಸಮಯ ಉಳಿಸಲು ನಾವು ಕುಕ್ಕರ್ ಬಳಸುವುದೇನೋ ನಿಜ, ಆದರೆ ಈ ಒತ್ತಡದ ಅಡುಗೆ ನಮ್ಮ ದೇಹದ ಮೇಲೆ ಬೀರುತ್ತಿರುವ ಪ್ರಭಾವ ಎಂತದ್ದು?ಇದು ನಿಜಕ್ಕೂ ಪೌಷ್ಟಿಕಾಂಶಗಳ ಗಣಿಯೇ ಅಥವಾ ಅರಿಯದಂತೆ ಬರುವ ರೋಗಗಳ ಮೂಲವೇ? ಈ ಬಗ್ಗೆ ಒಂದು ಕಿರು ನೋಟ ಇಲ್ಲಿದೆ:
ಸಾಂಪ್ರದಾಯಿಕ ವಿಧಾನ vs ಕುಕ್ಕರ್ ವಿಧಾನ: ಯಾವುದು ಬೆಸ್ಟ್?
ನಮ್ಮ ಹಳ್ಳಿಗಳಲ್ಲಿ ಇಂದಿಗೂ ಒಲೆಯ ಮೇಲೆ ಪಾತ್ರೆಯಲ್ಲಿ ಅನ್ನ ಮಾಡುತ್ತಾರೆ. ಇಲ್ಲಿ ಅನ್ನದಿಂದ ಹೆಚ್ಚುವರಿ ಗಂಜಿಯನ್ನು (ಪಿಷ್ಟ) ಬಸಿದು ತೆಗೆಯುವುದರಿಂದ ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆಯಾಗುತ್ತದೆ ಎಂಬುದು ಒಂದು ವಾದ. ಆದರೆ ಕುಕ್ಕರ್‌ನಲ್ಲಿ ಅಕ್ಕಿ ಪೂರ್ತಿಯಾಗಿ ಬೇಯುವುದರಿಂದ ಪೋಷಕಾಂಶಗಳು ಅದರಲ್ಲೇ ಉಳಿಯುತ್ತವೆ ಎನ್ನುತ್ತಾರೆ ತಜ್ಞರು.
ಕುಕ್ಕರ್ ಅಡುಗೆ ಆರೋಗ್ಯಕ್ಕೆ ಹಿತವೋ, ಹಾನಿಯೋ?
ಪ್ರಯೋಜನಗಳು (The Good News):
ಜೀರ್ಣಕ್ರಿಯೆಗೆ ಸುಲಭ: ಹೆಚ್ಚಿನ ಒತ್ತಡದಲ್ಲಿ ಬೆಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ.
ಬ್ಯಾಕ್ಟೀರಿಯಾ ನಾಶ: ಕುಕ್ಕರ್‌ನಲ್ಲಿನ ಅತೀ ಹೆಚ್ಚಿನ ಶಾಖವು ಆಹಾರದಲ್ಲಿರಬಹುದಾದ ಅಪಾಯಕಾರಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ.
ಪೋಷಕಾಂಶಗಳ ವರ್ಧನೆ: ಅಧ್ಯಯನಗಳ ಪ್ರಕಾರ, ಶಾಖದ ಒತ್ತಡದಿಂದ ಪ್ರೋಟೀನ್ ಮತ್ತು ಫೈಬರ್‌ನಂತಹ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳು ಹೆಚ್ಚು ಕ್ರಿಯಾಶೀಲವಾಗುತ್ತವೆ.
ಅಪಾಯಗಳು (The Warning Signs):
ಪಿಷ್ಟದ ರಾಸಾಯನಿಕ: ಅಕ್ಕಿ ಅಥವಾ ನೂಡಲ್ಸ್‌ನಂತಹ ಪಿಷ್ಟಯುಕ್ತ ಆಹಾರಗಳನ್ನು ಅತಿಯಾದ ತಾಪಮಾನದಲ್ಲಿ ಬೇಯಿಸಿದಾಗ ‘ಆಕ್ರಿಲಮೈಡ್’ ಎಂಬ ಹಾನಿಕಾರಕ ರಾಸಾಯನಿಕ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದು ದೀರ್ಘಕಾಲದ ಬಳಕೆಯಿಂದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.
ಲೆಕ್ಟಿನ್ ನಷ್ಟ: ಕುಕ್ಕರ್ ಅಡುಗೆಯಲ್ಲಿ ಲೆಕ್ಟಿನ್ ಎಂಬ ಅಗತ್ಯ ಪ್ರೋಟೀನ್ ಅಂಶ ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಎಚ್ಚರಿಸಿವೆ.
ಅಲ್ಯುಮಿನಿಯಂ ಭೀತಿ: ಹೆಚ್ಚಿನ ಕುಕ್ಕರ್‌ಗಳು ಅಲ್ಯುಮಿನಿಯಂನಿಂದ ಮಾಡಲ್ಪಟ್ಟಿರುತ್ತವೆ. ಹೆಚ್ಚಿನ ಶಾಖದಲ್ಲಿ ಈ ಲೋಹವು ಆಹಾರದೊಂದಿಗೆ ಬೆರೆಯುವ ಅಪಾಯವಿರುತ್ತದೆ, ಇದು ನರಮಂಡಲದ ಮೇಲೆ ಪರಿಣಾಮ ಬೀರಬಹುದು.

