HomeJobsಕರ್ನಾಟಕ ಹೈಕೋರ್ಟ್‌ಗೆ 226 ಹೊಸ ಹುದ್ದೆಗಳ ನೇಮಕಾತಿಗೆ ಒಪ್ಪಿಗೆ, ವಿವರಗಳು

ಕರ್ನಾಟಕ ಹೈಕೋರ್ಟ್‌ಗೆ 226 ಹೊಸ ಹುದ್ದೆಗಳ ನೇಮಕಾತಿಗೆ ಒಪ್ಪಿಗೆ, ವಿವರಗಳು

ಕರ್ನಾಟಕ ಸರ್ಕಾರ ಕರ್ನಾಟಕ ಹೈಕೋರ್ಟ್‌ನ ವಿವಿಧ ವೃಂದದ 226 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ನೀಡಿದೆ. ಈ ಹುದ್ದೆಗಳನ್ನು ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಕ್ಕೆ ಹಂಚಿಕೆ ಮಾಡಲಾಗಿದೆ.

ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನಾಗಪ್ಪ ಎಸ್. ಪರೀಟ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-3) ಆದೇಶವನ್ನು ಹೊರಡಿಸಿದ್ದಾರೆ.

ಈ ಆದೇಶ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿನ ವಿವಿಧ ವೃಂದದ ಹುದ್ದೆಗಳನ್ನು ಸೃಜಿಸಲು ಮಂಜೂರಾತಿ ನೀಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರ ಪತ್ರಗಳಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು, ಕಲಬುರಗಿ ಹಾಗೂ ಧಾರವಾಡ ಪೀಠಗಳಲ್ಲಿ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬಾಕಿಯಿದ್ದು ಹಾಗೂ ಪ್ರತಿ ವರ್ಷ ಪ್ರಕರಣಗಳ ದಾಖಲಾತಿಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಹೇಳಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ನ್ಯಾಯಾಲಯಗಳ ಕಾರ್ಯ ನಿರ್ವಹಣೆಯೂ ಸಹ ಕಾಲಕಾಲಕ್ಕೆ ಹೆಚ್ಚುತ್ತಿದೆ. ಹಾಲಿ ಸಿಬ್ಬಂದಿಗಳಿಗೆ ಪ್ರಕರಣಗಳ ದಾಖಲಾತಿ ಮತ್ತು ವಿಲೇವಾರಿ, ಲೋಕ ಅದಾಲತ್‌ಗಳು ಮತ್ತು ಮಧ್ಯಸ್ಥಿಕೆ ಚಟುವಟಿಕೆಗಳಿಂದಾಗಿ ಹೆಚ್ಚಿನ ಕೆಲಸದ ಹೊರೆ ಎದುರಾಗಿದ್ದು, ನಿಗದಿತ ಸಮಯದೊಳಗೆ ಕೆಲಸ ನಿರ್ವಹಿಸುವುದು ತುಂಬಾ ಕಷ್ಟಕರವಾಗಿದೆ.

ಆದ್ದರಿಂದ ನ್ಯಾಯಾಲಯದ ವಿಚಾರಣೆಗಳು ಸುಗಮವಾಗಿ ನಡೆಯಲು ಪ್ರಧಾನ ಪೀಠ, ಕಲಬುರಗಿ ಹಾಗೂ ಧಾರವಾಡ ಪೀಠಗಳಲ್ಲಿ ಒಟ್ಟು 850 ವಿವಿಧ ವೃಂದದ ಹುದ್ದೆಗಳ ಉನ್ನತೀಕರಣ, 715 ವಿವಿಧ ವೃಂದದ ಹುದ್ದೆಗಳ ಸೃಜಿಸಲು, ಇದಕ್ಕಾಗಿ ರೂ.7,30,97,47,836 ವೆಚ್ಚವಾಗುತ್ತದೆ ಎಂದು ತಿಳಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಆದೇಶವನ್ನು ಹೊರಡಿಸಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮಾನ್ಯ ಉಚ್ಚ ನ್ಯಾಯಾಲಯದ ಬೆಂಗಳೂರು, ಕಲಬುರಗಿ ಹಾಗೂ ಧಾರವಾಡ ಪೀಠಗಳಿಗೆ ಈ ಕೆಳಕಂಡ ವಿವಿಧ ವೃಂದದ ಒಟ್ಟು 226 ಹುದ್ದೆಗಳನ್ನು ಸೃಜಿಸಿ ಆದೇಶಿಸಿದೆ.

ಹುದ್ದೆಗಳ ವಿವರ: ಬೆಂಗಳೂರು ಹೈಕೋರ್ಟ್‌ ಪೀಠಕ್ಕೆ ಅಸಿಸ್ಟೆಂಟ್ ಕೋರ್ಟ್ ಸೆಕ್ರರೆಟ್ರಿ 20, ಅಸಿಸ್ಟೆಂಟ್ ಕೋರ್ಟ್ ಆಫೀಸರ್ 8, ಗ್ರೂಪ್-ಡಿ 40 ಸೇರಿ ಒಟ್ಟು 68 ಹುದ್ದೆಗಳು. ಗ್ರೂಪ್‌-ಡಿ ಹುದ್ದೆಗಳನ್ನು ಹೊರಗುತ್ತಿಗೆ ಮೇಲೆ ನೇಮಕಾತಿ ಮಾಡಿಕೊಳ್ಳಬೇಕಿದೆ.

ಕಲಬುರಗಿ ಪೀಠದ ಹುದ್ದೆಗಳ ವಿವಿರ ಇಲ್ಲಿದೆ…

ಧಾರವಾಡ ಪೀಠಕ್ಕೆ ಒಟ್ಟು 97 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ. ಇವುಗಳಲ್ಲಿಅಸಿಸ್ಟೆಂಟ್ ರಿಜಿಸ್ಟ್ರಾರ್ 4, ಅಸಿಸ್ಟೆಂಟ್ ರಿಜಿಸ್ಟ್ರಾರ್ (ಎಸ್‌ಎಸ್) 5, ಅಸಿಸ್ಟೆಂಟ್ ಚೀಫ್ ಲೈಬ್ರೆರಿಯನ್ 1, ಸೀನಿಯರ್ ಆಫೀಸರ್ 2, ಕೋರ್ಟ್ ಆಫೀಸರ್ 6, ಸೀನಿಯರ್ ಅಸಿಸ್ಟೆಂಟ್ 2, ಅಸಿಸ್ಟೆಂಟ್ ಕೋರ್ಟ್ ಸೆಕ್ರೆರಿಟ್ರಿ 2, ಅಸಿಸ್ಟೆಂಟ್ ಕೋರ್ಟ್ ಆಫೀಸರ್ 10, ಎಫ್‌ಡಿಎ 10, ಎಸ್‌ಡಿಎ 10, ಟೈಪಿಸ್ಟ್ 10, ಜಮಾದಾರ್ 5, ಡ್ರೈವರ್ 5, ಜವಾನ 10, ಜವಾನ (ಕುಕ್) 5, ವಾಚ್‌ಮನ್ 3, ಜವಾನ (ಹೌಸ್ ಕೀಪಿಂಗ್)2, ಸ್ವೀಪರ್ 5 ಹುದ್ದೆಗಳು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular