HomeInternationalನಡುರಸ್ತೆಯಲ್ಲಿ ಇದ್ದಕ್ಕಿದ್ದಂತೆ ಹೆಪ್ಪುಗಟ್ಟಿದಂತೆ ಭಾಸವಾದ ಮಹಿಳೆ : ವಿಡಿಯೋ ನೋಡಿ ತಲೆಕೆರೆದುಕೊಂಡ ನೆಟ್ಟಿಗರು

ನಡುರಸ್ತೆಯಲ್ಲಿ ಇದ್ದಕ್ಕಿದ್ದಂತೆ ಹೆಪ್ಪುಗಟ್ಟಿದಂತೆ ಭಾಸವಾದ ಮಹಿಳೆ : ವಿಡಿಯೋ ನೋಡಿ ತಲೆಕೆರೆದುಕೊಂಡ ನೆಟ್ಟಿಗರು

ಅಪರಿಚಿತ ಮಹಿಳೆಯೊಬ್ಬರು ರಸ್ತೆಯ ಮಧ್ಯದಲ್ಲಿ ಸಿಲುಕಿರುವ ವೀಡಿಯೊವೊಂದು ವೈರಲ್ ಆಗಿದೆ. ಈ ವಿಚಿತ್ರ ವೀಡಿಯೊವನ್ನು ನೋಡಿ ನೆಟ್ಟಿಗರು ಫುಲ್ ಕನ್ಫ್ಯೂಸ್ ಆಗಿದ್ದಾರೆ.

ಜುಲೈ 11 ರ ಮಂಗಳವಾರದಂದು ಟಿಕ್‌ಟಾಕ್ ಯೂಸರ್ ಒಬ್ರು ಈ ವಿಶೇಷ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಒಂದು ನಿಮಿಷ ಆ ಮಹಿಳೆ ಸ್ಟ್ರಕ್ ಆದ ಹಾಗೆ ಕಂಡು ಬಂದಿದ್ದಾರೆ. ಆ ಮಹಿಳೆಯು ಬಿಳಿ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಉದ್ದದ ಸ್ಕರ್ಟ್ ಧರಿಸಿದ್ದರು. ಆ ಸಂದರ್ಭದಲ್ಲಿ ಆ ಮಹಿಳೆ ಸ್ಟ್ರಕ್ ಆದಂತೆ ಕಂಡು ಬಂದಿದ್ದು ಬಳಿಕ ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕೆಯ ತೋಳುಗಳು ಒಂದು ಬದಿಯಲ್ಲಿ ವಿಚಿತ್ರವಾಗಿ ನೇತಾಡುತ್ತಿದ್ದಂತೆ ಗೋಚರವಾಗಿದೆ. ಆಕೆಯ ಕೂದಲು ಕೂಡ ಒಂಚೂರು ಅಲ್ಲಾಡದೆ ಸ್ಟ್ರಕ್ ಆದಂತೆ ಇದೆ ಎಂದು ಕೆಲವು ನೆಟ್ಟಿಗರು ಕಮೆಂಟ್ ಮೂಲಕ ತಿಳಿಸಿದ್ದಾರೆ. ಮಹಿಳೆ ಆ ಸಮಯಕ್ಕೆ ಹೆಪ್ಪುಗಟ್ಟಿದಂತೆ ಕಾಣಿಸಿಕೊಂಡಿತ್ತು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular