HomeKarnatakaಮಹಿಳೆಯರಿಗೆ ಉಚಿತ ಫ್ಯಾಷನ್ ಡಿಸೈನಿಂಗ್ ಮತ್ತು ಉದ್ಯಮಶೀಲತಾ ತರಬೇತಿ : ನೋಂದಣಿಗೆ ಆಹ್ವಾನ

ಮಹಿಳೆಯರಿಗೆ ಉಚಿತ ಫ್ಯಾಷನ್ ಡಿಸೈನಿಂಗ್ ಮತ್ತು ಉದ್ಯಮಶೀಲತಾ ತರಬೇತಿ : ನೋಂದಣಿಗೆ ಆಹ್ವಾನ

ಬಳ್ಳಾರಿ :  ಸ್ವಯಂ ಉದ್ಯೋಗ ಆರಂಭಿಸಲು ಆಸಕ್ತಿ ಇರುವ ಪರಿಶಿಷ್ಟ ಪಂಗಡದ ಮಹಿಳೆಯರಿಗಾಗಿ ಬಳ್ಳಾರಿ ಮತ್ತು ಕುರುಗೋಡಿನಲ್ಲಿ 30 ದಿನಗಳ ಕಾಲ ‘ಫ್ಯಾಷನ್ ಡಿಸೈನಿಂಗ್’ ಕುರಿತು ಉಚಿತ ವಲಯಾಧಾರಿತ ಉದ್ಯಮಶೀಲತಾಭಿವೃದ್ಧಿ ತರಬೇತಿ ಆಯೋಜಿಸಲಾಗಿದ್ದು, ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ, ಬಳ್ಳಾರಿಯ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಈ ತರಬೇತಿ ಹಮ್ಮಿಕೊಂಡಿದೆ.

ಈ ತರಬೇತಿಯಲ್ಲಿ ಫ್ಯಾಷನ್ ಡಿಸೈನಿಂಗ್ ವೃತ್ತಿಯ ಪ್ರಾಯೋಗಿಕ ಮತ್ತು ಸಿದ್ಧಾಂತ ತರಬೇತಿಯೊಂದಿಗೆ ವಿವಿಧ ವಿಷಯಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಯಾ ವೃತ್ತಿಗಳಲ್ಲಿ ಪ್ರಾಯೋಗಿಕ ಹಾಗೂ ಸಿದ್ಧಾಂತದೊಂದಿಗೆ ಸ್ವಯಂ ಉದ್ಯಮಗಳ ಬಗ್ಗೆ ಮಾಹಿತಿ, ಉದ್ಯಮಶೀಲತೆ, ಯಶಸ್ವಿ ಉದ್ಯಮಶೀಲರ ಗುಣಲಕ್ಷಣಗಳು, ಉದ್ಯಮಗಳನ್ನು ಪ್ರಾರಂಭಿಸುವ ಹಂತಗಳು, ಸ್ವಯಂ ಉದ್ಯೋಗಕ್ಕೆ ಇರುವ ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರ ಮಾಡುವ ಬಗ್ಗೆ, ಸಾಲ ಮತ್ತು ಹಣಕಾಸು ಮತ್ತು ಹಣಕಾಸೇತರ ಸೌಲಭ್ಯಗಳ ಬಗ್ಗೆ, ಲೆಕ್ಕ ಪತ್ರ ನಿರ್ವಹಣೆ, ಯೋಜನಾ ವರದಿ ತಯಾರಿಕೆ, ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಲ್ಲಿ ಸಹಾಯ ನೀಡುವುದು ಮತ್ತು ಸಂಬಂಧಪಟ್ಟ ಇತ್ಯಾದಿ ವಿಷಯಗಳ ಕುರಿತು ಉಪನ್ಯಾಸ, ಮಾಹಿತಿ ನೀಡಲಾಗುವದು.

ಅರ್ಹತೆ

18 ರಿಂದ 35 ವರ್ಷದೊಳಗಿರಬೇಕು. ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಪರಿಶಿಷ್ಟ ಪಂಗಡದ ಮಹಿಳೆಯರು ಹಾಗೂ ‘ಯುವನಿಧಿ’ ಫಲಾನುಭವಿಗಳಿಗೆ ಆದ್ಯತೆ ಇರಲಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಏ.17 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಜಂಟಿ ನಿರ್ದೇಶಕರು, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡ, ಹೊಸಪೇಟೆ ರಸ್ತೆ, ಬಳ್ಳಾರಿ – 583102 ಅಥವಾ ಮೊ.9449226221, 7483538942, 9986332736 ಗೆ ಸಂಪರ್ಕಿಸಬಹುದು.ಅರ್ಹ ಮಹಿಳೆಯರು ಈ ಸೌಲಭ್ಯವನ್ನು ಸದುಪಯೋಗಪಡೆದುಕೊಳ್ಳಬೇಕು ಎಂದು ಸಿಡಾಕ್ ಜಂಟಿ ನಿರ್ದೇಶಕ ಜಿ.ಯು.ಹುಡೇದ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular