HomeLive NewsOMG : ಸಿಕ್ಕಿತು ಸ್ವರ್ಗದ ಅಡ್ರೆಸ್ ! ನೇರವಾಗಿ ವಿಳಾಸವನ್ನೇ ಹೇಳುತ್ತಿರುವ ವಿಜ್ಞಾನಿ..!

OMG : ಸಿಕ್ಕಿತು ಸ್ವರ್ಗದ ಅಡ್ರೆಸ್ ! ನೇರವಾಗಿ ವಿಳಾಸವನ್ನೇ ಹೇಳುತ್ತಿರುವ ವಿಜ್ಞಾನಿ..!

ಮನುಷ್ಯ ಸತ್ತ ನಂತರ ಸ್ವರ್ಗಕ್ಕೆ ಹೋಗುತ್ತಾನೆ ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಆದರೆ ಆ ಸ್ವರ್ಗ ಎಲ್ಲಿದೆ? ಇದುವರೆಗೆ ಇದು ಕೇವಲ ಒಂದು ನಂಬಿಕೆಯಷ್ಟೇ ಆಗಿತ್ತು. ಆದರೆ ಹಾರ್ವರ್ಡ್ ವಿಶ್ವವಿದ್ಯಾಲಯದ ಮಾಜಿ ಭೌತಶಾಸ್ತ್ರ ಉಪನ್ಯಾಸಕರೊಬ್ಬರು ಸಂಚಲನ ಸೃಷ್ಟಿಸುವ ಸಿದ್ಧಾಂತವೊಂದನ್ನು ಮುನ್ನೆಲೆಗೆ ತಂದಿದ್ದಾರೆ. ವಿಶ್ವದ ಒಂದು ನಿರ್ದಿಷ್ಟ ದೂರದಲ್ಲಿ ಸ್ವರ್ಗವಿದೆಯೆಂದು, ಅದಕ್ಕೊಂದು ಭೌತಿಕ ವಿಳಾಸವೂ ಇದೆ ಎಂದು ಅವರು ವಾದಿಸುತ್ತಿದ್ದಾರೆ.

ಸ್ವರ್ಗ ಎಲ್ಲಿದೆ? (Where Is Heaven Located)

ಸ್ವರ್ಗ ಎಂದರೆ ಕೇವಲ ಪುರಾಣಗಳಲ್ಲಿನ ಕಾಲ್ಪನಿಕ ಪ್ರಪಂಚವೇ? ಅಥವಾ ವಿಶ್ವದಲ್ಲಿ ನಮಗೆ ತಿಳಿಯದ ಒಂದು ಭೌತಿಕ ಪ್ರದೇಶವೇ? ಈ ಪ್ರಶ್ನೆಗೆ ಹೌದು ಎನ್ನುತ್ತಿದ್ದಾರೆ ಹಾರ್ವರ್ಡ್‌ನ ಮಾಜಿ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಪ್ರಮುಖ ಸೈನ್ಸ್ ಕಮ್ಯುನಿಕೇಟರ್ ಮೈಕೆಲ್ ಗಿಲ್ಲೆನ್. ನಾವು ಸ್ವರ್ಗ ಎಂದು ಕರೆಯುವ ಆ ಪವಿತ್ರ ಪ್ರದೇಶವು ಈ ವಿಶ್ವದ ಒಂದು ನಿರ್ದಿಷ್ಟ ದೂರದಲ್ಲಿ ಇರಬಹುದು ಎಂದು ಅವರು ಇತ್ತೀಚೆಗೆ ಪ್ರಕಟಿಸಿದ ಸಂಶೋಧನಾ ಲೇಖನದಲ್ಲಿ ತಿಳಿಸಿದ್ದಾರೆ. ಮೈಕೆಲ್ ಗಿಲ್ಲೆನ್ ಸಿದ್ಧಾಂತದ ಪ್ರಕಾರ.. ಸ್ವರ್ಗವು ‘ಕಾಸ್ಮಿಕ್ ಹೊರಿಜಾನ್’ (Cosmic Horizon) ನ ಆಚೆಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಸಲಿಗೆ ಈ ಕಾಸ್ಮಿಕ್ ಹೊರಿಜಾನ್ ಎಂದರೇನು?

ಖಗೋಳಶಾಸ್ತ್ರಜ್ಞ ಎಡ್ವಿನ್ ಹಬಲ್ ಸಿದ್ಧಾಂತದ ಪ್ರಕಾರ.. ಗ್ಯಾಲಕ್ಸಿಗಳು ಒಂದಕ್ಕೊಂದು ಬೆಳಕಿನ ವೇಗದಲ್ಲಿ ದೂರ ಸರಿಯುತ್ತಿವೆ. ಭೂಮಿಯಿಂದ ಸುಮಾರು 439 ಬಿಲಿಯನ್ ಟ್ರಿಲಿಯನ್ ಕಿಲೋಮೀಟರ್‌ಗಳ ದೂರದಲ್ಲಿ ಒಂದು ಗಡಿಯಿದೆ. ಇದನ್ನೇ ‘ಕಾಸ್ಮಿಕ್ ಹೊರಿಜಾನ್’ ಎನ್ನುತ್ತಾರೆ. ಇದನ್ನು ದಾಟಿ ನಾವು ಎಂದಿಗೂ ನೋಡಲು ಸಾಧ್ಯವಿಲ್ಲ ಮತ್ತು ಅಲ್ಲಿಗೆ ತಲುಪಲು ಸಾಧ್ಯವಿಲ್ಲ. ಬೆಳಕು ಕೂಡ ಅಲ್ಲಿಂದ ನಮ್ಮನ್ನು ತಲುಪಲು ಸಮಯ ಸಾಕಾಗುವುದಿಲ್ಲ. ಹಾಗಾಗಿ ಅದರ ಆಚೆ ಏಸಿದೆ ಎಂಬುದು ನಮಗೆ ತಿಳಿಯದು. ಅಲ್ಲಿಯೇ ಸ್ವರ್ಗ ಇರುವ ಸಾಧ್ಯತೆಯಿದೆ ಎಂದು ಗಿಲ್ಲೆನ್ ವಾದಿಸುತ್ತಾರೆ.

ಗಿಲ್ಲೆನ್ ಉಲ್ಲೇಖಿಸಿದ 4 ಪ್ರಮುಖ ಕಾರಣಗಳು:

  1. ಅಪರಿಮಿತ ವಿಶ್ವ: ನಾವು ನೋಡಬಹುದಾದ ವಿಶ್ವಕ್ಕಿಂತ ಆಚೆಗೆ ಇನ್ನೂ ಬಹಳಷ್ಟಿದೆ. ನಾವು ನೋಡಲು ಸಾಧ್ಯವಿಲ್ಲ ಎಂದಾಕ್ಷಣ ಅಲ್ಲಿ ಏನೂ ಇಲ್ಲ ಎಂದು ಅರ್ಥವಲ್ಲ.
  2. ಕಾಲ ನಿಂತುಹೋಗುವ ಜಾಗ: ಐನ್‌ಸ್ಟೈನ್ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ.. ಕಾಸ್ಮಿಕ್ ಹೊರಿಜಾನ್ ಬಳಿ ಕಾಲ (Time) ನಿಂತುಹೋಗುತ್ತದೆ. ಅಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯತ್ ಇರುವುದಿಲ್ಲ. ಸ್ವರ್ಗವು ಕೂಡ ಕಾಲಾತೀತವಾದುದರಿಂದ ಇದು ಹೊಂದಾಣಿಕೆಯಾಗುತ್ತದೆ ಎಂಬುದು ಅವರ ಭಾವನೆ.
  3. ಬಿಗ್ ಬ್ಯಾಂಗ್‌ಗಿಂತ ಮೊದಲೇ: ಕಾಸ್ಮಿಕ್ ಹೊರಿಜಾನ್ ಬಳಿ ವಿಶ್ವದ ಅತ್ಯಂತ ಪುರಾತನ ವಸ್ತುಗಳಿವೆ. ಅಂದರೆ ಇದರ ಆಚೆ ಇರುವುದು ಬಿಗ್ ಬ್ಯಾಂಗ್‌ಗಿಂತ ಮೊದಲೇ ಅಸ್ತಿತ್ವದಲ್ಲಿರಬಹುದು.
  4. ಸೃಷ್ಟಿಯ ರಹಸ್ಯ: ಬಿಗ್ ಬ್ಯಾಂಗ್ ಅನ್ನು ಕೇವಲ ಒಂದು ಸ್ಫೋಟವೆಂದು ಪರಿಗಣಿಸದೆ, ಒಂದು ಸೃಷ್ಟಿಯ ಕಥೆಯಾಗಿ ನೋಡುವ ವಿಜ್ಞಾನಿಗಳು ಕೂಡ ಇದ್ದಾರೆ.

ವಿಮರ್ಶೆಗಳು: ವಿಜ್ಞಾನವೋ ಅಥವಾ ಮೆಟಾಫಿಸಿಕ್ಸ್ (ಆಧ್ಯಾತ್ಮಿಕ ವಿಜ್ಞಾನವೋ)?

ಆದರೆ ಗಿಲ್ಲೆನ್ ಸಿದ್ಧಾಂತವನ್ನು ಇತರ ವಿಜ್ಞಾನಿಗಳು ತಳ್ಳಿಹಾಕುತ್ತಿದ್ದಾರೆ. ಕನೆಕ್ಟಿಕಟ್ ಕಾಲೇಜಿನ ಪ್ರೊಫೆಸರ್ ಅಲೆಕ್ಸ್ ಜಿಯಾನಿನಾಸ್ ಪ್ರಕಾರ.. ಕಾಸ್ಮಿಕ್ ಹೊರಿಜಾನ್ ಎಂಬುದು ಒಂದು ಭೌತಿಕ ಪ್ರದೇಶವಲ್ಲ, ಅದು ಕೇವಲ ನಮ್ಮ ದೃಷ್ಟಿಗೆ ಇರುವ ಒಂದು ಮಿತಿ ಮಾತ್ರ. ಇದು ವಿಜ್ಞಾನಕ್ಕಿಂತ ಹೆಚ್ಚಾಗಿ ‘ಮೆಟಾ ಫಿಸಿಕ್ಸ್’ ಅಡಿಯಲ್ಲಿ ಬರುತ್ತದೆ ಎಂಬುದು ಬಹುತೇಕ ವಿಜ್ಞಾನಿಗಳ ಅಭಿಪ್ರಾಯ. ಸ್ವರ್ಗವು ವಿಶ್ವದ ಒಂದು ಮೂಲೆಯಲ್ಲಿದೆಯೇ ಅಥವಾ ನಮ್ಮ ನಂಬಿಕೆಗಳಲ್ಲಿ ಇದೆಯೇ ಎಂಬುದು ಪಕ್ಕಕ್ಕಿಟ್ಟರೆ.. ಆಧುನಿಕ ಭೌತಶಾಸ್ತ್ರ ಮತ್ತು ಆಧ್ಯಾತ್ಮದ ನಡುವೆ ನಡೆಯುತ್ತಿರುವ ಈ ಚರ್ಚೆ ಈಗ ಜಗತ್ತಿನಾದ್ಯಂತ ಹಾಟ್ ಟಾಪಿಕ್ ಆಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular